»   » ಮೇ 31ರಂದು ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಮೇ 31ರಂದು ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

Posted By:
Subscribe to Filmibeat Kannada
Movie director Dwarkish
ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಡಿ.ವಿ.ಸುಧೀಂದ್ರ ಅವರು ಆರಂಭಿಸಿದ್ದ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 33ನೇ ವಾರ್ಷಿಕೋತ್ಸವ ಹಾಗೂ 9ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಮೇ 31ರ ಸೋಮವಾರ ಸಂಜೆ 5.30ಕ್ಕೆ ನಗರದ ದಿ ಬೆಲ್ ಹೋಟಲ್(ರೈಲ್ವೇ ನಿಲ್ದಾಣದ ಪಕ್ಕ)ನಲ್ಲಿ ನಡೆಯಲಿದೆ.

ಆರಂಭದಲ್ಲಿ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಲಾಗುತ್ತಿತ್ತು. ಎರಡು ಪ್ರಶಸ್ತಿಯೊಂದಿಗೆ ಆರಂಭವಾದ ಈ ಸಮಾರಂಭಕ್ಕೆ ಆಗಮಿಸಿದ ಗಣ್ಯರು ನಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿ ನೀಡಲು ಮುಂದಾದರು. ಈಗ ಪ್ರಶಸ್ತಿಗಳ ಸಂಖ್ಯೆ 13ಕ್ಕೇರಿದೆ. ಈ ಬಾರಿಯ ರಾಘವೇಂದ್ರ ಚಿತ್ರವಾಣಿಯ ಪ್ರಶಸ್ತಿಗಳು ನಿರ್ಮಾಪಕ ಜಾನಕಿರಾಂ ಮತ್ತು ಪತ್ರಕರ್ತ ಸಿ ಸೀತಾರಾಂ ಅವರಿಗೆ ಸಂದಿದೆ. ಆರ್ ಶೇಷಾದ್ರಿ ಪ್ರಶಸ್ತಿ ದ್ವಾರಕೀಶ್ ಅವರಿಗೆ ಮತ್ತು ರಾಜಕುಮಾರ್ ಪ್ರಶಸ್ತಿ ಹಿನ್ನೆಲೆ ಗಾಯಕಿ ಕಸ್ತೂರಿ ಶಂಕರ್ ಅವರಿಗೆ ಸಂದಾಯವಾಗಲಿದೆ. ಇನ್ನಿತರ ಪ್ರಶಸ್ತಿ ಮತ್ತು ಪ್ರಶಸ್ತಿ ಪಡೆದವರ ವಿವರಗಳು ಕೆಳಗಿನಂತಿವೆ.

ಪ್ರಶಸ್ತಿಗಳ ವಿವರ

ಜಾನಕಿರಾಂ, ಹಿರಿಯ ಚಲನಚಿತ್ರ ನಿರ್ಮಾಪಕರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

ಸಿ.ಸೀತಾರಾಂ, ಹಿರಿಯ ಚಲನಚಿತ್ರ ಪತ್ರಕರ್ತರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

ಕಸ್ತೂರಿ ಶಂಕರ್, ಹಿನ್ನೆಲೆ ಗಾಯಕರು
(ಡಾ:ರಾಜ್‌ಕುಮಾರ್ ಪ್ರಶಸ್ತಿ, ಪಾರ್ವತಮ್ಮ ರಾಜ್‌ಕುಮಾರ್ ಅವರಿಂದ)

ದ್ವಾರಕೀಶ್, ನಿರ್ದೇಶಕರು
(ಯಜಮಾನ ಖ್ಯಾತಿಯ ಆರ್.ಶೇಷಾದ್ರಿ ಸ್ಮಾರಣಾರ್ಥ ಪ್ರಶಸ್ತಿ, ಭಾರತಿ ವಿಷ್ಣುವರ್ಧನ್ ಅವರಿಂದ)

ಪ್ರತಿಮಾದೇವಿ, ಖ್ಯಾತ ಕಲಾವಿದರು
(ಅಭಿನೇತ್ರಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ)

ಕೆ.ಎನ್.ನಾಗೇಶ್‌ಕುಮಾರ್, ಪತ್ರಿಕಾ ಛಾಯಾಗ್ರಾಹಕರು
(ಕೆ.ಎಸ್.ಮಲ್ಲಪ್ಪ ಸ್ಮರಣಾರ್ಥ ಪ್ರಶಸ್ತಿ, ಛಾಯಾಗ್ರಾಹಕ ಕೆ.ಎಂ.ವೀರೇಶ್ ಅವರಿಂದ)

ಘೋಷಾಲ್, ಯುವ ಪತ್ರಕರ್ತ
(ಸುಮಿತ್ರಮ್ಮ ಮತ್ತು ಬಿ.ಸುಬ್ರಮಣ್ಯಂ ಸ್ಮರಣಾರ್ಥ ಪ್ರಶಸ್ತಿ, ಪತ್ರಕರ್ತ ಮೈಸೂರು ಹರೀಶ್ ಅವರಿಂದ)

ವಿ.ಹರಿಕೃಷ್ಣ, ಅತ್ಯುತ್ತಮ ಸಂಗೀತ ನಿರ್ದೇಶನ, ರಾಜ್ ಚಿತ್ರ
(ಎಂ.ಎಸ್.ರಾಮಯ್ಯ ಚಿತ್ರಾಲಯ ಪ್ರಶಸ್ತಿ)

ಶಿವಮಣಿ, ಅತ್ಯುತ್ತಮ ಕಥಾಲೇಖಕರು, ಜೋಶ್ ಚಿತ್ರ
(ನಿರ್ದೇಶಕ, ನಿರ್ಮಾಪಕ ಕೆ.ವಿ.ಜಯರಾಂ ಪ್ರಶಸ್ತಿ, ಮೀನಾಕ್ಷಿ ಜಯರಾಂ ಅವರಿಂದ)

ಪ್ರಶಾಂತ್‌ರಾಜ್, ಅತ್ಯುತ್ತಮ ಸಂಭಾಷಣೆ ಲವ್‌ಗುರು ಚಿತ್ರ
(ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ, ಡಾ:ಎಚ್.ಕೆ.ನರಹರಿ ಅವರಿಂದ)

ಅರ್ಜುನ್, ಅಂಬಾರಿ ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ
(ರಂಗತಜ್ಞ, ಹಿರಿತೆರೆ - ಕಿರುತೆರೆ ನಿರ್ದೇಶಕ ಬಿ.ಸುರೇಶ್ ಪ್ರಶಸ್ತಿ)

ಗುರುಪ್ರಸಾದ್, ಎದ್ದೇಳು ಮಂಜುನಾಥ ಚಿತ್ರದ ಗೀತರಚನೆಗಾಗಿ
(ಹಾಸ್ಯ ಸಾಹಿತಿ ನಾಡಿಗೇರ್ ಕೃಷ್ಣರಾವ್ ಸ್ಮರಣಾರ್ಥ ಪ್ರಶಸ್ತಿ, ಚೇತನ್ ನಾಡಿಗೇರ್ ಕುಟುಂಬದವರಿಂದ)

ಎಂ.ಎಸ್.ಉಮೇಶ್, ಹಿರಿಯ ಕಲಾವಿದರು
(ಕಿಚ್ಚ ಕ್ರಿಯೇಷನ್ಸ್ ಪ್ರಶಸ್ತಿ, ನಟ ಸುದೀಪ್ ಅವರಿಂದ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada