»   » ಸುದೀಪ್ ಚಿತ್ರಕ್ಕೆ ಅಚ್ಚಗನ್ನಡದ ಹುಡುಗಿ ಬೇಕಂತೆ!

ಸುದೀಪ್ ಚಿತ್ರಕ್ಕೆ ಅಚ್ಚಗನ್ನಡದ ಹುಡುಗಿ ಬೇಕಂತೆ!

Posted By:
Subscribe to Filmibeat Kannada

ಸುದೀಪ್ ಅಭಿನಯಿಸಲಿರುವ ಹೊಚ್ಚಹೊಸ ಚಿತ್ರಕ್ಕೆ ನಾಯಕಿಯಾಗಲು ಅಚ್ಚಗನ್ನಡದ ಹುಡುಗಿ ಬೇಕಂತೆ. ನಮ್ಮ ಚಿತ್ರದಲ್ಲಿ ಕನ್ನಡದ ಹುಡುಗಿಯರಿಗೆ ಅವಕಾಶ ಕೊಡಲಾಗುವುದು ಎಂದು ನಿರ್ದೇಶಕ ಎಸ್ ನಾರಾಯಣ್ ಘೋಷಿಸಿದ್ದಾರೆ.

ವಿಷಯ ಇಷ್ಟೆ, ಎಸ್ ನಾರಾಯಣ್ ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಚಿತ್ರವೊಂದು ಸೆಟ್ಟೇರಲಿದೆ. ಅದು ತಮಿಳಿನ 'ಸಾಮಿ' ಚಿತ್ರದ ರಿಮೇಕ್ ಎಂದು ಈ ಹಿಂದೆ ಪ್ರಕಟಿಸಲಾಗಿತ್ತು. ಆದರೆ ಈಗ ಅದು ರೀಮೇಕ್ ಅಲ್ಲ ಸ್ವಮೇಕ್ ಎನ್ನುತ್ತಿದ್ದಾರೆ ಸುದೀಪ್. ಏಪ್ರಿಲ್ ನಲ್ಲಿ ಸೆಟ್ಟೇರಲಿರುವ ಈ ಚಿತ್ರವನ್ನು ಚೆಲುವಾಂಬಿಕಾ ಪಿಕ್ಚರ್ಸ್ ಲಾಂಛನಡಿ ನಾರಾಯನ್ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಹಲವು ಹೊಸ ಪ್ರತಿಭೆಗಳನ್ನು ಎಸ್ ನಾರಾಯಣ್ ಪರಿಚಯಿಸಿದ್ದಾರೆ. ಈ ಬಾರಿಯೂ ಕನ್ನಡ ಹುಡುಗಿಯರಿಗೆ ಮಣೆ ಹಾಕಲು ಎಸ್ ನಾರಾಯಣ್ ತೀರ್ಮಾನಿಸಿದಂತಿದೆ. ಸುದೀಪ್ ಜತೆ ನಟಿಸಲು ಆಸಕ್ತಿಯುಳ್ಳ ಹುಡುಗಿಯರು ತಮ್ಮ ಇತ್ತೀಚಿನ ಮೂರು ಭಾವಚಿತ್ರಗಳನ್ನು ನೇರವಾಗಿ ಎಸ್ ನಾರಾಯಣ್ ಅವರಿಗೆ ಕಳುಹಿಸಿ ಅದೃಷ್ಟ ಪರೀಕ್ಷಿಸಿಕೊಳ್ಳಬಹುದು.

ಭಾವಚಿತ್ರ ಕಳುಹಿಸಬೇಕಾದ ವಿಳಾಸ: ಚೆಲುವಾಂಬಿಕಾ ಪಿಕ್ಚರ್ಸ್, ನಂ.17,1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಶನಿಮಹಾತ್ಮ ದೇವಸ್ಥಾನ ಸಮೀಪ, ಲಕ್ಷ್ಮಿ ನಗರ, ಬಸವೇಶ್ವರ ನಗರ, ಬೆಂಗಳೂರು-560 079. ಭಾವಚಿತ್ರದ ಜೊತೆಗೆ ನಿಮ್ಮ ಹೆಸರು, ವಿಳಾಸ ಬರೆಯುವುದನ್ನು ಮರೆಯಬೇಡಿ ಎಂದು ನಾರಾಯಣ್ ತಿಳಿಸಿದ್ದಾರೆ.

Please Wait while comments are loading...