For Quick Alerts
  ALLOW NOTIFICATIONS  
  For Daily Alerts

  ಸಿಂಬು ಚಿತ್ರದಲ್ಲಿ ಏಂಜಲಿನಾ ಜೋಲಿ ನಟಿಸ್ತಾಳಂತೆ!

  By Mahesh
  |

  ಕಾಲಿವುಡ್ ನಲ್ಲಿ ರಜನಿಕಾಂತ್ ನ ಸ್ಟೈಲ್ ಅನ್ನು ಚಿಕ್ಕಂದಿನಿಂದಲೇ ಕಾಪಿ ಮಾಡುತ್ತಾ ಬಂದಿರುವ ನಟ ಸಿಲಂಬರಸನ್ ಅಲಿಯಾಸ್ ಸಿಂಬು, ಈಗ ಅಂತಾರಾಷ್ಟ್ರೀಯ ಮಟ್ಟದ ತಾರೆಯರಿಗೆ ಕೈ ಚಾಚಿದ್ದಾನೆ.

  ಇತ್ತೀಚೆಗೆ ತನ್ನ ಲವ್ ಆಲ್ಬಂಗಾಗಿ ಅಂತಾರಾಷ್ಟ್ರೀಯ ಮಟ್ಟದ ಗಾಯಕನಿಗಾಗಿ ಹುಡುಕಾಟ ನಡೆಸುತ್ತಿದ್ದ. ಈಗ ಬಹು ನಿರೀಕ್ಷಿತ ಚಿತ್ರ 'ಪೋಡಾ ಪೋಡಿ' ಗಾಗಿ ಹಾಲಿವುಡ್ ನಟಿಯನ್ನು ಕರೆತರುವುದಾಗಿ ಹೇಳುತ್ತಿದ್ದಾನೆ. ಅದರಲ್ಲೂ ಅಪ್ರತಿಮ ಸುಂದರಿ ಏಂಜಲಿನಾ ಜೋಲಿ ಆತನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾಳಂತೆ.

  ಪೋಡಾ ಪೋಡಿ ಚಿತ್ರದ ಕಥೆಗೆ ಅಂತಾರಾಷ್ಟ್ರೀಯ ತಾರೆಯ ಅವಶ್ಯಕತೆ ಇದೆಯಂತೆ. ಏಂಜಲಿನಾ ಜೋಲಿ ಅಥವಾ ಮೆಗನ್ ಫಾಕ್ಸ್ ಕರೆತರುವ ಮಾತುಕತೆ ನಡೆದಿದೆ. ಈ ಇಬ್ಬರು ತಾರೆಯರಲ್ಲದೆ ಜೆನ್ನಿಫರ್ ಲೋಪೆಜ್, ಶಕೀರಾ ಕೂಡಾ ಸರ್ಚ್ ಲಿಸ್ಟ್ ನಲ್ಲಿದ್ದಾರಂತೆ.

  ಉತ್ತಮ ನೃತ್ಯಪಟುವಾಗಿರುವ ಸಿಂಬು, ಈ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಿಯಾಲಿಟಿ ಶೋನಲ್ಲಿ ಗೆದ್ದ ಉತ್ತಮ ಡ್ಯಾನ್ಸರ್ ಗೆ ಅಂತಾರಾಷ್ಟ್ರೀಯ ಮಟ್ಟದ ತಾರೆಯರಿಂದ ಬಹುಮಾನ ವಿತರಣೆ ಇರುತ್ತದೆಯಂತೆ.

  ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ನಡೆಸುವ ಸಾಧ್ಯತೆಯಿದೆ. ಪೋಡಾ ಪೋಡಿ ಚಿತ್ರದ ಮೂಲಕ ನಟ ಶರತ್ ಕುಮಾರ್ ಪುತ್ರಿ ವರಲಕ್ಷ್ಮಿ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ.

  English summary
  Silambarasan aka Simbu, who was recently looking out for an international singer for his prestigious peace album, The Love Anthem, seems to have bitten by a Hollywood bug. We hear that the Vinnaithaandi Varuvaayaa star, for his delayed project Podaa Podi, wants a Hollywood actress to do a cameo in his forthcoming film and Angelina Jolie is on his wish list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X