For Quick Alerts
  ALLOW NOTIFICATIONS  
  For Daily Alerts

  ರಾಜಕುಮಾರ್ ರಿಮೇಕ್ ಚಿತ್ರದಲ್ಲಿ ನಟಿಸಲೇ ಇಲ್ವೇ? ಹೀಗೊಂದು ಚರ್ಚೆ

  By *ಬಾಲರಾಜ್ ತಂತ್ರಿ
  |

  ರಿಮೇಕ್ ಚಿತ್ರಗಳ ಹಾವಳಿಯ ಉಚ್ಛ್ರಾಯ ಸ್ಥಿತಿಯಲ್ಲಿರುವ ನಮ್ಮ ಚಿತ್ರರಂಗದಲ್ಲಿ ನಮ್ಮ ನಿಮ್ಮೆಲ್ಲರನ್ನೂ ಕಾಡುವ ಕಟ್ಟ ಕಡೆಯ ಒಂದು ಪ್ರಶ್ತ್ನೆಯೆಂದರೆ ಕನ್ನಡದ ಧ್ರುವತಾರೆ, ವರನಟ ಡಾ. ರಾಜಕುಮಾರ್ ರಿಮೇಕ್ ಚಿತ್ರದಲ್ಲಿ ನಟಿಸಿದ್ರಾ ಅನ್ನೋದು. ಈ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿಸಿದರೆ ಹೆಚ್ಚಿನ ಮಾಹಿತಿ ನಮಗೆ ಲಭ್ಯವಾಗುತ್ತಿಲ್ಲ ಎನ್ನುವುದು ಸತ್ಯ.

  ಗುಬ್ಬಿ ವೀರಣ್ಣ ಗರಡಿಯಲಿ ಪಳಗಿದ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ , 1954 ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ತನ್ನ ಸಿನಿಪಯಣ ಆರಂಭಿಸಿದರು. 2000 ಇಸವಿಯಲ್ಲಿ ಬಂದ ಅವರ ಕೊನೆಯ ಶಬ್ದವೇದಿ ಚಿತ್ರದ ವರೆಗಿನ ತನ್ನ 206 ಚಿತ್ರಗಳಲ್ಲಿ ಅಣ್ಣಾವ್ರು ರಿಮೇಕ್ ಚಿತ್ರದಲ್ಲಿ ನಟಿಸಿದ್ರಾ ಎಂದು ಹುಡುಕಿದರೆ ಅದಕ್ಕೆ ಎಸ್ ಅಥವಾ ನೋ ಎನ್ನುವ ಉತ್ತರ ಸಿಗುತ್ತದೆಯೇ ಹೊರತು ಕರಾರುವಕ್ಕಾದ ಉತ್ತರ ಸಿಗುವುದಿಲ್ಲ.

  ಕೆಲವರ ಪ್ರಕಾರ ಡಾ.ರಾಜ್, ಬಿ ಸರೋಜಾದೇವಿ ನಟನೆಯ ಭಾಗ್ಯವಂತರು ಮಲಯಾಳಂ ಚಿತ್ರದ ರಿಮೇಕ್ ಚಿತ್ರ ಅನ್ನೋದು. ಹಾಗೆಯೇ ಶಂಕರನಾಗ್ ಜೊತೆ ನಟಿಸಿದ ಅಪೂರ್ವ ಸಹೋದರರು ಹಿಂದಿ ಚಿತ್ರದ ತರ್ಜುಮೆ, ನಾನೊಬ್ಬ ಕಳ್ಳ ಚಿತ್ರ ತಮಿಳು ಚಿತ್ರದ ರಿಮೇಕ್ ಎಂದು ಕೆಲವರು ವಾದ ಮಂಡಿಸಿದರೆ ಈ ಎಲ್ಲಾ ಚಿತ್ರಗಳು ಮೂಲ ಕಥೆಯ ಸ್ಫೂರ್ತಿ ಪಡೆದು ಚಿತ್ರ ನಿರ್ಮಿಸಿರಬಹುದೇ ಹೊರತು ರಾಜಕುಮಾರ್ ಯಾವ ರಿಮೇಕ್ ಚಿತ್ರದಲ್ಲೂ ನಟಿಸಲೇ ಇಲ್ಲ ಎನ್ನುವುದು ಅಸಂಖ್ಯಾತ ಕನ್ನಡ ಕುಲ ಕೋಟಿಗರ ಒಕ್ಕೂರಿಲಿನ ಅಭಿಪ್ರಾಯವಾದರೂ ಈ ಪ್ರಶ್ತ್ನೆಗೆ ಉತ್ತರ ಸಿಗದೇ ಹಾಗೆ ಉಳಿದುಕೊಂಡಿದೆ.

  ಇತ್ತ , ಅಣ್ಣಾವ್ರ ಚಿತ್ರಗಳು ಬೇರೆ ಭಾಷೆಗೆ ರಿಮೇಕ್ ಆಗಿರುವ ಉದಾಹರಣೆ ಬೇಕಾದಷ್ಟು ಸಿಗ್ಗುತ್ತವೆ. ಅದರಲ್ಲಿ ಕೆಲವೊಂದು ಉದಾಹರಣೆಗಳೆಂದರೆ ಶಂಕರ್ ಗುರು ತಮಿಳು ಮತ್ತು ಹಿಂದಿಗೆ, ತ್ರಿಮೂರ್ತಿ ಚಿತ್ರ ತಮಿಳಿಗೆ, ಭೂಕೈಲಾಶ, ದಶಾವತಾರ, ಕಸ್ತೂರಿನಿವಾಸ, ತಾಯಿಗೆ ತಕ್ಕ ಮಗ, ನಾನಿನ್ನ ಮರೆಯಲಾರೆ, ಬಂಗಾರದ ಪಂಜರ, ಅನುರಾಗ ಅರಳಿತು, ಪ್ರೇಮದ ಕಾಣಿಕೆ ಮುಂತಾದ ಚಿತ್ರಗಳು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗೆ ಅಂದಕಾಲತ್ತಿಲ್ ರಿಮೇಕ್ ಆಗಿತ್ತು.

  ಹತ್ತು ಬಾರಿ ಫಿಲಂಫೇರ್ ಪ್ರಶಸ್ತಿ (ದಕ್ಷಿಣ) ಪಡೆದಿದ್ದ ರಾಜ್ ಅವರ ಈ ಸಾಧನೆಯನ್ನು ಇತ್ತೀಚಿಗಷ್ಟೇ ಕಮಲಹಾಸನ್ ಮತ್ತು ಮಮ್ಮುಟ್ಟಿ ಸಮಗೈದಿದ್ದರು. ಡಾ. ರಾಜಕುಮಾರ್ ಅವರು ರಿಮೇಕ್ ಚಿತ್ರದಲ್ಲಿ ನಟಿಸಿದ್ದರೋ, ಇಲ್ವೋ ಎನ್ನೋ ಕುತೂಹಲ ಚರ್ಚೆಗೆ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ.

  ಈ ಬಗ್ಗೆ ನಿಮಗೆ ಏನಾದರೂ ಮಾಹಿತಿ ಇದ್ದರೆ ಕಾಮೆಂಟ್ ವೇದಿಕೆಯಲ್ಲಿ ನಿಮ್ಮ ಅಭಿಪ್ರಾಯ ಹಂಚಿಕೊಂಡು ಈ ಡಿಬೇಟ್ ನಲ್ಲಿ ಭಾಗವಹಿಸಿ.

  English summary
  Did the icon of Kannada movies and a legend of Karnataka Dr Rajkumar acted in any movie remade to Kannada? Curious..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X