»   » ಕನ್ನಡ ಸಿನಿಮಾ ತಾರೆಗಳಿಗೆ 'ಸುವರ್ಣ' ಅವಕಾಶ

ಕನ್ನಡ ಸಿನಿಮಾ ತಾರೆಗಳಿಗೆ 'ಸುವರ್ಣ' ಅವಕಾಶ

Posted By:
Subscribe to Filmibeat Kannada

ಚಿನ್ನದ ಬೆಲೆ ದಿನೇ ದಿನೇ ಏರುತ್ತಾ ಹೋಗಿ ಗಗನವನ್ನು ಚುಂಬಿಸುತ್ತಿದ್ದರೂ ಬೇಡಿಕೆ ಮಾತ್ರ ಕುಗ್ಗಿಲ್ಲ. ಈ ಬೆಲೆ ಏರಿಕೆ ಬಿಸಿಯಲ್ಲೂ ಕನ್ನಡ ಸಿನಿಮಾ ತಾರೆಗಳಿಗೆ 'ಸುವರ್ಣ' ಅವಕಾಶ ಸಿಕ್ಕಿದೆ. ಬಹಳಷ್ಟು ಸಿನಿಮಾ ತಾರೆಗಳು ಚಿನ್ನದ ಜಾಹೀರಾತುಗಳಲ್ಲಿ ಮಿಂಚುತ್ತಿರುವುದೇ ಇದಕ್ಕೆ ಸಾಕ್ಷಿ.

ಕಲ್ಯಾಣ್ ಜ್ಯುವೆಲರ್ಸ್‌ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮಲಬಾರ್ ಗೋಲ್ಡ್ ಮತ್ತು ಮಣಪ್ಪುರಂ ಗೋಲ್ಡ್ ‌ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಜ್ಯುವೆಲ್ಸ್ ಆಫ್ ಇಂಡಿಯಾಗೆ ಪ್ರಿಯಾಂಕಾ ಉಪೇಂದ್ರ, ಮಣಪ್ಪುರಂ ಗೋಲ್ಡ್ ಗೆ ತಾರೆ ಪೂಜಾಗಾಂಧಿ ಹಾಗೂ ಜಾಯ್ ಅಲುಕಾಸ್‌ಗೆ ರಾಧಿಕಾ ಗಾಂಧಿ ರಾಯಭಾರಿಗಳಾಗಿ ಮಿಂಚಿಂಗೋ ಮಿಂಚಿಂಗು.

ಈ ಹಿಂದೆ ಲಕ್ಕಿ ಸ್ಟಾರ್ ರಮ್ಯಾ, ಜೆನ್ನಿಫರ್ ಕೊತ್ವಾಲ್ ಹಾಗೂ ಐಂದ್ರಿತಾ ರೇ ಕೂಡ ಚಿನ್ನಾಭರಣ ಮಳಿಗೆಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇನ್ನೂ ಕೆಲವು ತಾರೆಗಳು ಸ್ಥಳೀಯ ಚಿನ್ನಾಭರಣ ಮಳಿಗೆಗಳ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ, ಪ್ರಿಯಾಂಕಾ ಚಂದ್ರ, ರೇಖಾ ಕುಮಾರ್ ಇವರಲ್ಲಿ ಪ್ರಮುಖರು.

ಜ್ಯುವೆಲ್ಸ್ ಆಫ್ ಇಂಡಿಯಾದ ರಾಯಭಾರಿಗಳಾಗಿ ಹೇಮಾ ಮಾಲಿನಿ, ಡಾ.ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ಅಭಿನಯಿಸಿದ್ದರು. ಚಿತ್ರವೊಂದಕ್ಕೆ ಪಡೆಯುವ ಸಂಭಾವನೆಗಿಂತಲೂ ಜಾಹೀರಾತೊಂದಕ್ಕೆ ಪಡೆಯುವ ಸಂಭಾವನೆ ಹೆಚ್ಚಾಗಿರುವುದೇ ಚಿನ್ನದ ಜಾಹೀರಾತುಗಳಿಗೆ ಮುಗಿಬೀಳಲು ಕಾರಣ ಎನ್ನುತ್ತವೆ ಮೂಲಗಳು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada