»   » ಬೀದರ ಉತ್ಸವದ ಚಿತ್ರೋತ್ಸವಕ್ಕೆ ಸುದೀಪ್

ಬೀದರ ಉತ್ಸವದ ಚಿತ್ರೋತ್ಸವಕ್ಕೆ ಸುದೀಪ್

Posted By:
Subscribe to Filmibeat Kannada

ಏಪ್ರಿಲ್ 10 ರಿಂದ 12 ರವರೆಗೆ ನಡೆಯಲಿರುವ ಬೀದರ ಉತ್ಸವದ ಸಂದರ್ಭದಲ್ಲಿ ಮೂರು ದಿನಗಳ ಕಾಲ ಕನ್ನಡ ಚಲನಚಿತ್ರ ಪ್ರದರ್ಶನ ಆಯೋಜಿಸಲಾಗಿದ್ದು, ಚಿತ್ರ ರಸಿಕರಿಗೆ ಮನೋರಂಜನೆ ಒದಗಿಸಲಿದೆ ಎಂದು ಜಿಲ್ಲಾಧಿಕಾರಿ ಹರ್ಷ ಗುಪ್ತಾ ಹೇಳಿದರು. ಕಿಚ್ಚ ಸುದೀಪ್, ಸಾಧುಕೋಕಿಲ ಸೇರಿದಂತೆ ಅನೇಕ ತಾರೆಗಳು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಬಾರಿ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳು ಮಾತ್ರವಲ್ಲದೇ ಜನಪ್ರಿಯ ತಾರೆಯರ ಚಿತ್ರಗಳನ್ನು ಸಹ ಪ್ರದರ್ಶಿಸಲಾಗುತ್ತಿದೆ. ಖ್ಯಾತ ನಟ ಕಿಚ್ಚ ಖ್ಯಾತಿಯ ಸುದೀಪ್ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡುವರು. ಬೀದರ ನಗರದ ಮಿನಿ ದೀಪಕ್ ಹಾಗೂ ಫರ್ದಿನ್ ಚಿತ್ರಮಂದಿರದಲ್ಲಿ ಚಿತ್ರೋತ್ಸವ ನಡೆಯಲಿದೆ.

ಚಲನಚಿತ್ರಗಳ ವಿವರ ಇಂತಿವೆ. ಪ್ರದರ್ಶನ ಬೆಳಿಗ್ಗೆ 11ಗಂಟೆಗೆ. ನಟ ಸಾರ್ವಭೌಮ ರಾಜ್‌ಕುಮಾರ್ ಅಭಿನಯದ 'ಜೀವನಚೈತ್ರ', ಸುದೀಪ್ ಹಾಗೂ ರಮ್ಯ ಅಭಿನಯನದ 'ಮುಸ್ಸಂಜೆ ಮಾತು', ಸುಧಾರಾಣಿ ನಟಿಸಿರುವ 'ಮೈಸೂರು ಮಲ್ಲಿಗೆ', ವಿಜಯ್ ಅಭಿನಯದ 'ದುನಿಯಾ', ವಿಷ್ಣುವರ್ಧನ ಅಭಿನಯದ 'ಬಂಧನ', ಗಿರೀಶ್ ಕಾಸರವಳ್ಳಿ ಅವರ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ 'ಗುಲಾಬಿ ಟಾಕೀಸ್ 'ಚಿತ್ರಗಳನ್ನು ಪ್ರದರ್ಶಿಸಲಾಗುವುದು.

ಚಿತ್ರ ಪ್ರದರ್ಶನ ಸಂಪೂರ್ಣ ಉಚಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಚಿತ್ರ ರಸಿಕರು, ಮಹಿಳೆಯರು, ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರಗಳನ್ನು ವೀಕ್ಷಿಸಿ, ಬೀದರ್ ಉತ್ಸವದ ಆನಂದ ಪಡೆಯಬೇಕಾಗಿ ಜಿಲ್ಲಾಧಿಕಾರಿ ಹರ್ಷಗುಪ್ತಾ ಅವರು ಮನವಿ ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada