»   »  ಆಸ್ಕರ್ ಹೆಸರಿನಲ್ಲೊಂದು ಕನ್ನಡ ಚಿತ್ರ ಆರಂಭ

ಆಸ್ಕರ್ ಹೆಸರಿನಲ್ಲೊಂದು ಕನ್ನಡ ಚಿತ್ರ ಆರಂಭ

Subscribe to Filmibeat Kannada

'ಆಸ್ಕರ್' ಹೆಸರಿನ ಕನ್ನಡಚಿತ್ರವೊಂದು ಏಪ್ರಿಲ್ 16 ರಂದು ಸೆಟ್ಟೇರಲಿದೆ. 'ಕೋಡಗನ ಕೋಳಿ' ನುಂಗಿತ್ತಾ ಸೇರಿದಂತೆ ಹಲವು ಕನ್ನಡ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಕೃಷ್ಣ ಈ ಚಿತ್ರವನ್ನು ನಿರ್ದೆಶಿಸುತ್ತಿದ್ದಾರೆ. ಕೃಷ್ಣ ಅವರ ಚೊಚ್ಚಲ ನಿರ್ದೇಶನದಲ್ಲಿ ಆಸ್ಕರ್ ಮೂಡಿಬರಲಿದೆ.

'ತಾಜ್ ಮಹಲ್' ಚಿತ್ರದಲ್ಲಿ ನಟಿಸಿದ್ದ ಅಶೋಕ್ ಕುಮಾರ್ ಚಿತ್ರದ ನಾಯಕ. ಚಿತ್ರಕ್ಕೆ ಇಬ್ಬರು ನಾಯಕಿಯರು. ಒಬ್ಬರು ಮರುಜನ್ಮ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕ. ಮತ್ತೊಬ್ಬರು ಇನ್ನೂ ತೆರೆ ಕಾಣಬೇಕಿರುವ 'ಕಬಡ್ಡಿ' ಚಿತ್ರದ ಪ್ರಿಯಾಂಕ. ಈ ಚಿತ್ರವನ್ನು ಶಿವು ಬೆಳವಾಡಿ ನಿರ್ಮಿಸುತ್ತಿದ್ದಾರೆ.

ಬೆಂಗಳೂರು, ಮೈಸೂರು, ಮಡಿಕೇರಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ಸಾಗಲಿದೆ. ಛಾಯಾಗ್ರಹಣ ನವೀನ್ ಸುವರ್ಣ. ಸಂಗೀತ ಜಿ ಅಭಿಮನ್ ರಾಯ್. ಸಂಕಲನ ಎಸ್.ಕೆ.ನಾಗೇಂದ್ರ ಅರಸ್, ಸಂಭಾಷಣೆ ಹರಿಶೃಂಗ, ಸಾಹಿತ್ಯ ಹೃದಯ ಶಿವ, ಸಾಹಸ ಡಿಫರೆಂಟ್ ಡ್ಯಾನಿ, ಕಲಾ ನಿರ್ದೇಶನ ಹೊಸ್ಮನೆ ಮೂರ್ತಿ.

ಅಶೋಕ್ ಕುಮಾರ್ ಯಾರು?
ತಾಜ್‌ಮಹಲ್ ಚಿತ್ರ ತಯಾರಾಗಲಿಕ್ಕೆ ಈ ಅಶೋಕ್‌ಕುಮಾರನೇ ಕಾರಣ. ಸಿನಿಮಾ ಸೆಟ್ ಒಂದರಲ್ಲಿ ನಿರ್ದೇಶಕರೊಬ್ಬರ ಸಹಾಯಕನಾಗಿ ಉತ್ಸಾಹದಿಂದ ಓಡಾಡಿಕೊಂಡಿದ್ದ ಚಂದ್ರು ಅವರನ್ನು ತಾಜಮಹಲ್ ನಿರ್ಮಾಪಕರಿಗೆ ಪರಿಚಯಿಸಿದ್ದು ಇದೇ ಅಶೋಕ್. ತಾಜ್‌ಮಹಲ್ ಚಿತ್ರದ ಪುಟ್ಟ, ಆದರೆ ಗಮನ ಸೆಳೆಯುವ ಪಾತ್ರದಲ್ಲಿ ನಟಿಸಿದ್ದಾರೆ. ನಿರೂಪಕರ ರೀತಿಯ ಪಾತ್ರವದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಉಪೇಂದ್ರ ರುಪ್ಪೀಸ್ ರೆಸಾರ್ಟ್ ನಲ್ಲಿ ಅರುಂಧತಿ
ವರ್ಮಾರ ರಣ್ ಚಿತ್ರಕ್ಕೆ ಮರುನಾಮಕರಣ
ದುಬಯ್ ಬಾಬು ಚಿತ್ರದ ಹಾಡುಗಳು ಹೇಗಿವೆ?
ಅನಂತ್ ಮತ್ತು ಸುಹಾಸಿನಿ ಎರಡನೇ ಮದುವೆ!
ಬಿಪಾಶಾಗೆ ಇನ್ನೂ ಸೀರೆ ಉಡಲು ಬರುವುದಿಲ್ಲವಂತೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada