For Quick Alerts
  ALLOW NOTIFICATIONS  
  For Daily Alerts

  ಕಪಾಲಿಗೆ ಮರಣ ಶಾಸನ ಬರೆದ ಮಲ್ಟಿಪ್ಲೆಕ್ಸ್

  By Mahesh
  |

  ಹಿಂದೊಂದು ಕಾಲವಿತ್ತು ಬೆಂಗಳೂರಿನಲ್ಲಿ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದವು. ಎಲ್ಲವೂ ಕನ್ನಡಕ್ಕಾಗಿ ಮೀಸಲಿರದಿದ್ದರೂ ದಕ್ಷಿಣ ಭಾರತದಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳನ್ನು ಹೊಂದಿರುವ ನಗರ ಎಂಬ ಖ್ಯಾತಿಯನ್ನು ನಮ್ಮ ಬೆಂಗಳೂರು ಗಳಿಸಿತ್ತು. ಆದರೆ, ಕಾಲ ಬದಲಾದಂತೆ ಮಲ್ಟಿಪ್ಲೆಕ್ಸ್ ಹಾಗೂ ಮಾಲ್ ಸಂಸ್ಕೃತಿ ಬೆಳೆದಂತೆ ಚಿತ್ರಮಂದಿರಗಳು ಇದ್ದ ಜಾಗದಲ್ಲಿ ದೊಡ್ಡ ದೊಡ್ಡ ಮಾಲ್ ಗಳು ಎದ್ದವು, ಒಂದು ಸ್ಕ್ರೀನ್ ಚಿತ್ರಮಂದಿರದ ಜಾಗದಲ್ಲಿ ಹಲವು ಸ್ಕ್ರೀನ್ ಗಳ ಮಲ್ಟಿಪ್ಲೆಕ್ಸ್ ಗಳು ವಿಜೃಂಭಿಸಲಾರಂಭಿಸಿದವು. ಈ ಬದಲಾದ ಸಂಸ್ಕೃತಿಗೆ ಲೇಟೆಸ್ಟ್ ಬಲಿಯಾಗುತ್ತಿರುವ ಚಿತ್ರಮಂದಿರವೇ ಕಪಾಲಿ.

  ಬೆಂಗಳೂರಿನ ಹೃದಯ ಭಾಗ ಎನಿಸಿರುವ ಗಾಂಧಿನಗರ, ಕೆಂಪೇಗೌಡ ರಸ್ತೆ ಪ್ರದೇಶದಲ್ಲಿದ್ದ ಚಿತ್ರಮಂದಿರಗಳು ಮುಚ್ಚಿ ಅಲ್ಲೆಲ್ಲ ಮಾಲ್ ಗಳು ಕಾಂಪ್ಲೆಕ್ಸ್ ಗಳು ನಿರ್ಮಾಣಗೊಂಡವು, ಒಂದಷ್ಟು ಮತ್ತೆ ಮೇಲೇಳಲೇ ಇಲ್ಲ. ಬೆಂಗಳೂರಿನ ಸುಬೇದಾರ್ ಛತ್ರಂ ರಸ್ತೆಯಲ್ಲಿನ ಸುಪ್ರಸಿದ್ಧ ಕಪಾಲಿ ಚಿತ್ರಮಂದಿರ ಶೀಘ್ರದಲ್ಲೇ ಕಣ್ಮರೆಯಾಗಲಿರುವ ಸುದ್ದಿ ಹೊರ ಬಿದ್ದಿದೆ. ಸುಮಾರು ಆರು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಎಪ್ಪತ್ತರ ದಶಕದಲ್ಲಿ ಕಟ್ಟಲಾಗಿದ್ದ ಕಪಾಲಿ ಚಿತ್ರಮಂದಿರವನ್ನು ನೆಲಸಮಗೊಳಿಸಿ ಅಲ್ಲಿ ಬೃಹತ್ ಮಾಲ್ ನಿರ್ಮಿಸುವ ಯೋಜನೆಯನ್ನು ಥೇಟರ್ ಮಾಲೀಕ ರಾಮಚಂದ್ರೇಗೌಡರು ಹಾಕಿಕೊಂಡಿದ್ದಾರೆ.

  ರಾಜ್ಯದಲ್ಲಿ ಇತರ ಟಾಕೀಸ್‌ಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚು ಆಸನ ಹೊಂದಿರುವ ಕಪಾಲಿಯಲ್ಲಿ ಒಂದೂವರೆ ಸಾವಿರ ಆಸನಗಳಿವೆ. ಒಂದು ಕಾಲಕ್ಕೆ ಏಷ್ಯಾದ ದೊಡ್ಡ ಸಿನಿಮಾ ಥಿಯೇಟರ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡು ಇತಿಹಾಸ ನಿರ್ಮಿಸಿದ್ದ ಕಪಾಲಿ ಇಂದು ಮಲ್ಟಿಪ್ಲೆಕ್ಸ್ ಗೆ ಹೆದರಿ ನಡಗುತ್ತಿದೆ. 6 ಸ್ಕ್ರೀನ್ ಗಳ ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡಕ್ಕೆಷ್ಟು ಸ್ಕ್ರೀನ್ ಮೀಸಲು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

  ಕಪಾಲಿಯಲ್ಲಿ ಒಂದು ಚಿತ್ರ ಐವತ್ತು ದಿನ ಓಡುವುದೂ ಒಂದೇ ಇತರೆ ಥೇಟರ್ ಗಳಲ್ಲಿ ಅದೇ ಚಿತ್ರ ಸೆಂಚುರಿ ಹೊಡೆಯುವುದೆ ಎಂಬ ಮಾತು ಸುಳ್ಳಲ್ಲ. ನಂಬಿದವರನ್ನು ಕಪಾಲಿ ಎಂದೂ ಕೈ ಬಿಟ್ಟಿಲ್ಲ. ಚಿತ್ರಮಂದಿರ ಅರ್ಧ ಭರ್ತಿಯಾದರೂ ಸಾಕು ಚಿತ್ರದ ನಿರ್ಮಾಪಕರಿಗೆ ನಷ್ಟವಾಗುತ್ತಿರಲಿಲ್ಲ. ಒಂದೇ ವಾರಕ್ಕೆ ಹೀಗೆ ಬಂದು ಹಾಗೆ ಮಾಯವಾದ ಚಿತ್ರಗಳೂ, ನೂರಾರು ದಿನಗಳ, ಐವತ್ತು ವಾರಗಳ ಕಾಲ ಯಶಸ್ವೀ ಪ್ರದರ್ಶನ ಕಂಡ ಚಿತ್ರಗಳೂ ಕಪಾಲಿಗೆ ಬಂದು ಹೋಗಿವೆ. ಸಿನಿ ಪ್ರಚಾರದ ಒಂದು ಝಲಕ್ ತೋರಿಸಿಕೊಟ್ಟ ನಿರ್ಮಾಪಕ ಎನ್ ಎಂ ಸುರೇಶ್, ಎಕ್ಸ್ ಕ್ಯೂಸ್ ಮಿ ಚಿತ್ರಕ್ಕೆ ಹಾಕಿದ ಬೃಹತ್ ಬ್ಯಾನರ್ ಕಪಾಲಿಯಲ್ಲಿ ರಾರಾಜಿಸಿದ್ದು ಇನ್ನೂ ಸಿನಿರಸಿಕರ ಕಣ್ಣಂಚಿನಲ್ಲಿದೆ.

  English summary
  Single screen Kapali Theater in Subedar Chatram road Banaglore has more than thousand seat capacity is under threat. Bangalore city once had over 100 movie theaters which was record in south India. But now, due to influence of Multiplex culture, Western style of malls one of the big theater of the city Kapali theater has become latest victim.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X