Just In
Don't Miss!
- News
ಕುಂಭಮೇಳ 2021; ಕೇಂದ್ರದಿಂದ ಭಕ್ತರಿಗೆ ಕಟ್ಟುನಿಟ್ಟಿನ ಆದೇಶ
- Finance
Gold Silver Rate: ಪ್ರಮುಖ ನಗರಗಳಲ್ಲಿ ಜ.25ರ ಚಿನ್ನ, ಬೆಳ್ಳಿ ದರ
- Sports
"ಸಿಡ್ನಿಯಲ್ಲಿ ನಾನು 30 ನಿಮಿಷ ಹೆಚ್ಚು ಬ್ಯಾಟಿಂಗ್ ಮಾಡಿದ್ದರೆ ಭಾರತ ಗೆಲ್ಲುವ ಸಾಧ್ಯತೆಯಿತ್ತು"
- Automobiles
ಪವರ್ಫುಲ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ಸ್ಕೋಡಾ ಕುಶಾಕ್
- Lifestyle
ನಿಮ್ಮ ದೇಹದ ಮೇಲಿನ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಭವಿಷ್ಯ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ವಾರ ತೆರೆಗೆ ವಯಸ್ಕರ ಚಿತ್ರ ನಮಿತಾ ಐ ಲವ್ ಯು
ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಹೂ' ಚಿತ್ರದಲ್ಲಿ ಅಭಿನಯಿಸಿದ ಬಳಿಕ ಸೆಕ್ಸಿ ತಾರೆ ನಮಿತಾ ಕನ್ನಡ ಚಿತ್ರರಸಿಕರಿಂದ ಕೊಂಚ ದೂರ ಸರಿದಿದ್ದರು. ಈಗ ಮತ್ತೊಮ್ಮೆ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಬಾರಿ ಆಕೆ ಅಭಿನಯದ'ನಮಿತಾ ಐ ಲವ್ ಯು' ಚಿತ್ರಕ್ಕೆ 'ಎ' ಸರ್ಟಿಫಿಕೇಟ್ (ವಯಸ್ಕರ ಚಿತ್ರ) ಸಿಕ್ಕಿದೆ. ಈ ಚಿತ್ರ ಇದೇ ಜೂ.10ರಂದು ತೆರೆಗೆ ಅಪ್ಪಳಿಸುತ್ತಿದೆ.
ಈ ಚಿತ್ರದ ಪೋಸ್ಟರ್‌ಗಳನ್ನು ಸ್ಟಿಲ್‌ಗಳನ್ನು ನೋಡಿದರೆ ನಮಿತಾ ರಸಿಕ ಶಿಖಾಮಣಿಗಳಿಗೆ ನಿರಾಸೆ ಮಾಡುವುದಿಲ್ಲ ಅನ್ನಿಸುತ್ತದೆ. ಚಿತ್ರದಲ್ಲಿ ಆಕೆ ಯೋಗಾ ಶಿಕ್ಷಕಿಯಾಗಿ ಕಾಣಿಸುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದಲ್ಲಿ ನಮಿತಾ ಮಳೆ ಹಾಡು, ಡಾನ್ಸ್, ಮೋಜು ಮಸ್ತಿ ಮಜಾ ಜೊತೆಗೆ ಸಂದೇಶವೂ ಇದೆಯಂತೆ. ಒಟ್ಟಾರೆಯಾಗಿ ಕಣ್ತುಂಬ ಮನರಂಜನೆ ನೀಡಲಿದ್ದಾರೆ.
ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆಯುವ ಡ್ರಗ್ ಮಾಫಿಯಾ ವಿರುದ್ಧ ಈ ಯೋಗಾ ಶಿಕ್ಷಕಿ ತಿರುಗಿ ಬೀಳುವುದೇ ಚಿತ್ರದ ಕಥಾ ಹಂದರ. ಥ್ರಿಲ್ಲರ್ ಮಂಜು ಅವರ ಸಾಹಸ ಚಿತ್ರಕ್ಕಿದೆ. ಎಂ ರವಿತೇಜ ರೆಡ್ಡಿ ನಿರ್ಮಾಣ ಹಾಗೂ ಎಂ ಜಯಸಿಂಹ ರೆಡ್ಡಿ ಅವರ ಸಂಗೀತ ಚಿತ್ರಕ್ಕಿದೆ. ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ ಕೂಡ ಅವರದೆ.
ರಾಜೇಶ್ ಬ್ರಹ್ಮಾವರ್ ಅವರ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಚಿತ್ರದ ತಾರಾಗಣದಲ್ಲಿ ಪೃಥ್ವಿರಾಜ್, ಶ್ರೀಕಾಂತ್, ಅಕ್ಷತಾ ಶೆಟ್ಟಿ, ಶೋಭನಾ, ಗೊಲ್ಲಹಳ್ಳಿ ಶಿವಪ್ರಕಾಶ್, ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ, ಡಿಂಗ್ರಿ ನಾಗರಾಜ್ ಮುಂತಾದವರಿದ್ದಾರೆ. (ದಟ್ಸ್ ಕನ್ನಡ ಸಿನಿವಾರ್ತೆ)