For Quick Alerts
ALLOW NOTIFICATIONS  
For Daily Alerts

ಲತಾ, ಡಯಾನಾ ಮತಾಂತರ ಪ್ರಭುಗೆ ಇಲ್ಲ ಸನ್ಮಾನ?

By Mahesh
|

ನಟ ಪ್ರಭುದೇವ ಅವರನ್ನು ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಆರ್ಯ ಸಮಾಜ ಅಥವಾ ಇನ್ಯಾವುದೇ ಹಿಂದೂ ಪರ ಸಂಘಟನೆಗಳಾಗಲಿ ಏಕೆ ಇನ್ನೂ ಸನ್ಮಾನಿಸಿಲ್ಲ.

ಭಾವಿ ಪತ್ನಿಯಲ್ಲದೆ ಮಾಜಿ ಪತ್ನಿಯನ್ನು ಯಶಸ್ವಿಯಾಗಿ ಹಿಂದೂ ಧರ್ಮಕ್ಕೆ ಸೇರಿಸಿದ ಕೀರ್ತಿ ಪ್ರಭುಗೆ ಸಲ್ಲುತ್ತದೆ.

ಡ್ಯಾನ್ಸಿಂಗ್ ಸ್ಟಾರ್ ಮೂಗೂರು ಪ್ರಭುದೇವ ತಮ್ಮ ಮೊದಲ ಪತ್ನಿ ಜನ್ಮತಃ ಇಸ್ಲಾಂ ಧರ್ಮ ಮೂಲದ ರಾಮಲತಾ ಅವರನ್ನು ಮದುವೆಯಾಗುವ ಮೂಲಕ ಹಿಂದೂ ಧರ್ಮಕ್ಕೆ ಸೇರಿಸಿದ್ದರು. 90 ರ ದಶಕದಲ್ಲಿ ಮದುವೆಯಾದ ನಂತರ ಸುಖಿ ದಾಂಪತ್ಯ ಅನುಭವಿಸಿದ್ದರು. ಮತಾಂತರ ಅಲ್ಲ ಬರೀ ಲತಾ ಎಂದು ಹೆಸರು ಬದಲಿಸಲಾಗಿದೆ ಎಂದು ಇನ್ನೊಂದು ಮೂಲ ಹೇಳುತ್ತದೆ. ನಂತರ ಪ್ರಭು ಆಕರ್ಷಣೆ ಬೇರೆಡೆ ಹರಿದು ಲತಾರಿಂದ ವಿವಾಹ ವಿಚ್ಛೇದನ ಪಡೆದಿದ್ದರು.

ಆದರೆ ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳಾದ ರಿಷಿ ಹಾಗೂ ಆದಿತ್ಯರಿಗೆ ರು.10 ಲಕ್ಷನಗದು, ಫಾರ್ಮ್ ಹೌಸ್ ಸೇರಿದಂತೆ ಹಲವು ಜೀವನಾಂಶ ಬರೆದುಕೊಟ್ಟಿದ್ದರು. ಇದು ಒಂದು ರೀತಿ ತಲಾಕ್ ಪಡೆದ ಮುಸ್ಲಿಂ ಪತ್ನಿಯರು ಜೀವನಾಂಶ ಪಡೆದ ರೀತಿಯೇ ಇತ್ತು.

ಪ್ರಭುದೇವ ಮತ್ತೊಮ್ಮೆ ತಮ್ಮ ಹೃದಯದೊಳಗಿದ್ದ ಹಿಂದೂ ಧರ್ಮವನ್ನು ಜಾಗೃತಿಗೊಳಿಸಿ ಅಪ್ಪಟ ಕ್ರಿಶ್ಚಿಯನ್ ಸಿನಿಮಾ ತಾರೆ ನಯನತಾರಾ ಅವರು ಕ್ರೈಸ್ತ ಧರ್ಮಕ್ಕೆ ಗುಡ್ ಬೈ ಹೇಳುವಂತೆ ಮಾಡಿದ್ದಾರೆ. ಹಿಂದು ಧರ್ಮಕ್ಕೆ ಅನ್ಯ ಧರ್ಮೀಯರನ್ನು ಸೇರಿಸುವುದು ಸುಲಭವಾದರೂ ಸಾಮಾನ್ಯವಾಗಿ ಹಿಂದೂ ಮತದಿಂದ ಬೇರೆ ಮತಕ್ಕೆ ಮತಾಂತರ ಹೊಂದುವವರ ಸಂಖ್ಯೆಯೇ ಅಧಿಕ.

ಮತಾಂತರದ ಬಗ್ಗೆ ಬೊಬ್ಬೆ ಹಾಕುವ ಹಿಂದೂ ಸಂಘಟನೆಗಳೂ ಪ್ರಭು ಮಾಡಿರುವ ಕಾರ್ಯ ಕಂಡು ಸಂತಸಪಟ್ಟಿದ್ದರೂ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಿಲ್ಲ. ಇಷ್ಟಕ್ಕೂ ಪ್ರಭು ಹಾಗೂ ನಯನತಾರಾ ಮದುವೆ ಕ್ರೈಸ್ತ ಹಾಗೂ ಹಿಂದೂ ಧರ್ಮದ ಅನುಸಾರವಾಗಿ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಎರಡೂ ಧರ್ಮಗಳನ್ನು ಗೌರವಿಸುವ ಸಂಪ್ರದಾಯ ಹುಟ್ಟು ಹಾಕುವ ನಿರೀಕ್ಷೆಯಿದೆ.

ಆದ್ರೆ, ನಯನತಾರಾ ಹಿಂದೂ ಆದ ಮೇಲೆ ಸಂಪೂರ್ಣವಾಗಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆಸಲು ಮೂಗೂರು ಫ್ಯಾಮಿಲಿ ಸಿದ್ಧತೆ ನಡೆಸಿದೆ ಎಂಬ ಸುದ್ದಿಯಿದೆ. ಒಟ್ಟಿನಲ್ಲಿ ಹಿಂದೂ ಧರ್ಮ ಪ್ರತಿಪಾದಕ ಪ್ರಭುಗೆ ಈ ರೀತಿ ಅನ್ಯಾಯ ಆಗಬಾರದಿತ್ತು.

English summary
Prabhu Deva did it again. He was instrumental in converting his muslim born wife to Hindu now He has successful in converting Diana Mariam Kurian aka Nayantara to Hinduism from the Christianity on Sunday (August 7). Vishwa hindu Parishat and hindu organizations should felicitate the dancing star.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more