»   »  ಶಿಶಿರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರೇಮಾ

ಶಿಶಿರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರೇಮಾ

Subscribe to Filmibeat Kannada
ನಿರ್ದೇಶಕ ಮಂಜು ಇದೇ ಮೊದಲಬಾರಿಗೆ ನಿರ್ದೇಶಿಸುತ್ತಿರುವ 'ಶಿಶಿರ' ಚಿತ್ರೀಕರಣ ಪೂರ್ಣಗೊಂಡಿದೆ. ಈ ಸಂತೋಷದ ಕ್ಷಣಗಳನ್ನು ಮಾಧ್ಯಮದ ಮುಂದೆ ಹಂಚಿಕೊಳ್ಳಲು ಬೆಂಗಳೂರಿನ ಮಲ್ಲೇಶ್ವರಂ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಇದೇ ಶುಭ ಸಂದರ್ಭದಲ್ಲಿ ನಟಿ ಪ್ರೇಮಾ ತಮ್ಮ ಹುಟ್ಟುಹಬ್ಬವನ್ನು ಸರಳ ಸುಂದರವಾಗಿ ಆಚರಿಸಿಕೊಂಡರು.

ಸಭೆಯಲ್ಲಿ ಬಣ್ಣ್ಣಬಣ್ಣದ ಕನಸು ಹೊತ್ತಿರುವ ಹೊಸಬರು, ಬಿಸಿರಕ್ತದ ಯುವಕರು ಪುಟಿಯುತ್ತಿದ್ದರು. ನಿರ್ದೆಶಕ ಮಂಜು ಮಾತನಾಡುತ್ತಾ, ಶಿಶಿರ ಉತ್ತಮ ಕಥೆಯುಳ್ಳ ಚಿತ್ರ ಜೊತೆಗೆ ತಾಂತ್ರಿಕವಾಗಿಯೂ ಪ್ರೌಢವಾಗಿದೆ ಎಂದರು. ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಕೆಲಸ ಮಾಡಿದೆ. ಮುವ್ವತ್ತು ದಿನಗಳ ಚಿತ್ರೀಕರಣದಲ್ಲಿ ಸಾಕಷ್ಟು ಹೆಣಗಿದ್ದಾರೆ. ಚಿತ್ರದ ಬಗ್ಗ್ಗೆ ಬಹಳಷ್ಟು ತಲೆಕೆಡಿಸಿಕೊಂಡಿದ್ದೇವೆ, ಕೊನೆಗೂ ನಮಗೆ ಸಂಪೂರ್ಣ ತೃಪ್ತಿ ತಂದಿದೆ.

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪರಾದ ಬಿ.ಟಿ.ಮಂಜು ಮತ್ತು ಬಿ.ಟಿ ಮಹದೇವ್ ಅವರು ನಿರ್ದೇಶಕ ಮಂಜು ಅವರಿಗೆ ಶುಭ ಕೋರಿದರು. ನಟಿ ಪ್ರೇಮಾ ಅವರು ಶಿಶಿರದ ಅನನ್ಯ ಅನುಭವಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡರು. ಶಿಶಿರದಲ್ಲಿ ನನ್ನುದು ಪೋಷಕ ಪಾತ್ರ ಎಂದರು. ಮೊದಲಿಗಿಂತ ಸಣ್ಣದಾಗಿ ಕಾಣಿಸಿಕೊಳ್ಳುವ ಪ್ರೇಮಾ, ಮನೆ ಬಿಟ್ಟು ಎಲ್ಲೂ ಆಚೆ ಹೋಗಲ್ಲವಂತೆ. ದಿನಕ್ಕೆ ಐದರಿಂದ ಆರುಗಂಟೆ ಯೋಗ ಮಾಡುತ್ತಾರಂತೆ.ಅವರ ಮುಖದಲ್ಲಿ ಹುಟ್ಟು ಹಬ್ಬದ ಸಂಭ್ರಮ ಲಾಸ್ಯವಾಡುತ್ತಿತ್ತು.

ಚಿತ್ರದ ನಿರ್ಮಾಪಕ ಮಂಜು ಚಿತ್ರದ ಕಥೆ ಮನೆಗೆ ಬಂದು ಹೇಳಿದಾಗ, ಮತ್ತೆ ಬಣ್ಣ ಹಚ್ಚುವ ಆಸೆಯಾಯಿತು. ನನ್ನ ಗಂಡನ ಬಳಿ ಚರ್ಚಿಸಿ ಕ್ಯಾಮರಾ ಮುಂದೆ ನಿಂತೆ. ಮದುವೆ ಆದನಂತರ ಅಕ್ಕ, ಅಮ್ಮನ ಪಾತ್ರದಲ್ಲಿ ನಟಿಸಲು ಆಫರ್ ಬಂತು, ಆದರೆ ಒಪ್ಪಿಕೊಳ್ಳಲಿಲ್ಲ. ಶಿಶಿರ ಚಿತ್ರದಲ್ಲಿನ ನನ್ನ ಪಾತ್ರ ಜನರಿಗೆ ಇಷ್ಟವಾದರೆ ಮತ್ತೆ ಅಭಿನಯಿಸುತ್ತೇನೆ. ಉತ್ತಮ ಪಾತ್ರ ಸಿಕ್ಕಿದರೆ ಉಪೇಂದ್ರ ಜೊತೆ ನಟಿಸಲು ನನ್ನ ತಕರಾರು ಏನು ಇಲ್ಲ ಎಂದರು.

ಅಂದಹಾಗೆ ಈ ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ, ಅಜಯ್ ಸಂಗೀತವಿದೆ. ಪತ್ರಿಕಾಗೋಷ್ಠಿಯಲ್ಲಿ ಇಡೀ ಸಭೆಯೇ ತಲೆ ಎತ್ತಿ ನೋಡುವ ಎತ್ತರದ ವ್ಯಕ್ತಿ ಸಹ ಹಾಜರಿದ್ದರು. ಆಶ್ಚರ್ಯವಾಗುತ್ತಿದೆಯೇ? ಏನಿಲ್ಲ, ದಕ್ಷಿಣ ಭಾರತದ ಅತಿ ಎತ್ತರ ವ್ಯಕ್ತಿ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ಸಂತೋಷ್ ಕುಮಾರ್ ಸಭೆಗೆ ಬಂದಿದ್ದರು ಅಷ್ಟೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕೊಡಗಿನ ಬೆಡಗಿ ಪ್ರೇಮಾ ಶಿಶಿರದಲ್ಲಿ ಪ್ರತ್ಯಕ್ಷ
ಪ್ರೇಮಾ ಚಿತ್ರಪಟಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada