»   » ದರ್ಶನ್ ಪತ್ನಿ ಮೇಲೆ ಹಲ್ಲೆ ಮಾಡಲು ಕಾರಣ ಏನು

ದರ್ಶನ್ ಪತ್ನಿ ಮೇಲೆ ಹಲ್ಲೆ ಮಾಡಲು ಕಾರಣ ಏನು

Posted By:
Subscribe to Filmibeat Kannada
Actor Darshan
ತಮ್ಮ ಪತ್ನಿ ಮತ್ತು ಪುತ್ರನ ಮಾರಣಾಂತಿಕ ಹಲ್ಲೆ ನಡೆಸಿ ಪೊಲೀಸ್ ಬಂಧನದಲ್ಲಿರುವ ನಟ ದರ್ಶನ್ ಪತ್ನಿಯ ಮೇಲೆ ಹಲ್ಲೆ ಮಾಡಿದ್ದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಹಲ್ಲೆಯಿಂದ ಕೆಳಗೆ ಬಿದ್ದ ವಿಜಯಲಕ್ಷ್ಮಿ ಅವರ ತಲೆ ಕಿವಿಗೆ ಗಾಯಗಳಾಗಿವೆ. ಕೆಲವೆಡೆ ಕಚ್ಚಿರುವ ಕಲೆಗಳೂ ಇವೆ ಎಂದು ಗಾಯತ್ರಿ ಆಸ್ಪತ್ರೆಯ ವೈದ್ಯ ಡಾ.ಜೈನ್ ತಿಳಿಸಿದ್ದಾರೆ.

ನಿನ್ನೆ ರಾತ್ರಿ ಚಿಂಗಾರಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬಂದೆ. ವಿಜಯನಗರದ ಸ್ನೇಹಿತೆ ವಿದ್ಯಾ ಮನೆಯಲ್ಲಿ ವಿಜಯಲಕ್ಷ್ಮಿ ಇದ್ದರು. ಪತ್ನಿಯನ್ನು ಮನೆಗೆ ಕರೆದೆ. ಆಕೆ ಬರಲ್ಲ ಎಂದರು. ಮಗುವನ್ನು ನನ್ನ ಇನ್ನೋವಾ ಕಾರಿನಲ್ಲಿ ಸುತ್ತಿಸುತ್ತೇನೆ ಕಳುಹಿಸಲು ಎಂದು ಕೇಳಿದೆ. ಅದಕ್ಕೂ ಒಪ್ಪಲಿಲ್ಲ.

ಇನ್ನೋವಾ ಕಾರಿನಲ್ಲಿ ಸುತ್ತಾಡಿಸುವುದೆಂದರೆ ನನ್ನ ಮಗನಿಗೆ ಇಷ್ಟ. ಮಗುವನ್ನು ಕಳುಹಿಸಲು ಒಪ್ಪದಿದ್ದರಿಂದ ಗಲಾಟೆ. ರಿಲ್ವಾಲ್ವರ್ ತೋರಿಸಿ ಬೆದರಿಸಿಲ್ಲ ಎಂದು ಪೊಲೀಸರಿಗೆ ನೀಡಿರುವ ಸ್ಟೇಟ್‌ಮೆಂಟ್‌ನಲ್ಲಿ ದರ್ಶನ್ ತಿಳಿಸಿದ್ದಾರೆ. (ದಟ್ಸ್‌ಕನ್ನಡ ಸಿನಿಮಾವಾರ್ತೆ)

English summary
Why Kannada actor Darshan beats his wife? He agrees that he has beaten his wife but not threatened her showning revolver. He has given a written statement to Vijayanagara police.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada