»   » ಅಣ್ಣಾಬಾಂಡ್ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ

ಅಣ್ಣಾಬಾಂಡ್ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ

Posted By:
Subscribe to Filmibeat Kannada

ಇದನ್ನು ಅಭಿಮಾನಿಗಳ ಹುಚ್ಚಾಟ ಅನ್ನಿ ಅಥವಾ ಸಂಭ್ರಮಾಚರಣೆ ಅನ್ನಿ. ಸಂತೋಷ್ ಚಿತ್ರಮಂದಿರದಲ್ಲಿ 'ಅಣ್ಣಾಬಾಂಡ್' ಚಿತ್ರದ ಬ್ಯಾನರ್‌ಗಳಿಗೆ ಅಭಿಮಾನಿಗಳು ಮಂಗಳವಾರ (ಮೇ 1) ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದರು. ಮೊದಲ ಶೋ ನೋಡಿದವರು ಚಿತ್ರ ಸಖತ್ ಆಗಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಚಿತ್ರದ ನಾಯಕ ನಟ ಪುನೀತ್ ರಾಜ್ ಕುಮಾರ್ ಅವರು ಸಂತೋಷ್ ಚಿತ್ರಮಂದಿರಕ್ಕೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಪರೀಕ್ಷೆ ಬರೆದಿದ್ದೇನೆ. ರಿಸಲ್ಟ್‌ಗಾಗಿ ಕಾಯುತ್ತಿದ್ದೇನೆ ಎಂದರು.

ದುನಿಯಾ ಸೂರಿ ಅವರ ನಿರ್ದೇಶನ, ಪುನೀತ್ ಅವರ ಅಭಿನಯ ಬೊಂಬಾಟಾಗಿದೆ. ಚಿತ್ರದಲ್ಲಿ ಪ್ರಿಯಾಮಣಿ ಅವರ ಪಾತ್ರವೇ ಹೈಲೈಟ್. ನಿಧಿ ಸುಬ್ಬಯ್ಯ ಏನಿದ್ದರೂ ದಂತದ ಗೊಂಬೆ. ಚಿತ್ರದ ಛಾಯಗ್ರಹಣ, ಹಾಡುಗಳ ಚಿತ್ರೀಕರಣ ಒಂದಕ್ಕಿಂತ ಒಂದು ಅದ್ಭುತ ಎಂಬುದು ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರ ಅಭಿಪ್ರಾಯ. ಕೆಲವೇ ಕ್ಷಣಗಳಲ್ಲಿ ಚಿತ್ರ ವಿಮರ್ಶೆ ನಿಮ್ಮ ನೆಚ್ಚಿನ ತಾಣ ಒನ್‌ಇಂಡಿಯಾ ಕನ್ನಡದಲ್ಲಿ ಪ್ರಕಟವಾಗಲಿದೆ ದಯವಿಟ್ಟು ನಿರೀಕ್ಷಿಸಿ. (ಒನ್‌ಇಂಡಿಯಾ ಕನ್ನಡ)

English summary
Power star Puneeth Rajkumar romantic action film written and directed by Duniya Soori opened to an unprecedented response with rave reviews coming its way from all quarters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada