For Quick Alerts
  ALLOW NOTIFICATIONS  
  For Daily Alerts

  ಒಂದು ವರ್ಷದ ರಾಕಿ ಭಾಯ್ ಜೀವನದಲ್ಲಿ ನಡೆದ 10 ಪ್ರಮುಖ ಘಟನೆಗಳು

  |
  ಎರಡೆರಡು ಮೈಕ್ ಹಿಡಿದು ಅಭಿಮಾನಿಗಳೊಂದಿಗೆ ಮಾತನಾಡಿದ ಯಶ್

  ಕಳೆದ ವರ್ಷ ರಾಕಿಂಗ್ ಸ್ಟಾರ್ ಯಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿದ್ದ ಕಾರಣ ಜನುಮದಿನದ ಸಂಭ್ರಮಕ್ಕೆ 'ನೋ' ಎಂದಿದ್ದರು. ಆ ನಂತರ ಐಟಿ ದಾಳಿ ಆಗಿದ್ದು ಮತ್ತಷ್ಟು ಬೇಸರ ತರಿಸಿತ್ತು.

  ಆದರೆ, ಈ ವರ್ಷ ರಾಕಿ ಭಾಯ್ ಹುಟ್ಟುಹಬ್ಬ ಬಲು ಜೋರಾಗಿ ನಡೆದಿದೆ. 216 ಅಡಿ ಎತ್ತರದ ಕಟೌಟ್, 5 ಸಾವಿರ ಕೆಜಿಯ ಕೇಕ್ ಕತ್ತರಿಸಿ ದಾಖಲೆ ಬರೆದಿದ್ದಾರೆ ಯಶ್ ಅಭಿಮಾನಿಗಳು.

  ಕಳೆದ ವರ್ಷದಿಂದ ಈ ವರ್ಷದವರೆಗೂ ಯಶ್ ಜೀವನದಲ್ಲಿ ಹಲವು ವಿಚಾರಗಳು ನಡೆದಿದೆ. ಇವುಗಳಲ್ಲಿ ಪ್ರಮುಖವಾದ 10 ಘಟನೆಗಳನ್ನು ಪಟ್ಟಿ ಮಾಡಲಾಗಿದೆ. ಮುಂದೆ ಓದಿ...

  ಇಮೇಜ್ ಬದಲಿಸಿದ ಕೆಜಿಎಫ್

  ಇಮೇಜ್ ಬದಲಿಸಿದ ಕೆಜಿಎಫ್

  2018ರ ಅಂತ್ಯದಲ್ಲಿ ತೆರೆಕಂಡಿದ್ದ ಕೆಜಿಎಫ್ ಸಿನಿಮಾ 2019ರಲ್ಲಿ ಭಾರಿ ಸದ್ದು ಮಾಡಿತ್ತು. ಯಶ್ ಇಮೇಜ್ ಬದಲಿಸಿತು. ನೂರು ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಎನಿಸಿಕೊಂಡಿತ್ತು. ಒಟ್ಟಾರೆ ಗಳಿಕೆಯೂ 200 ಕೋಟಿವರೆಗೂ ಆಗಿದೆ ಎಂಬ ಮಾತಿದೆ. ಸ್ಯಾಂಡಲ್ವುಡ್ ಇತಿಹಾಸದಲ್ಲಿ ಹತ್ತು ಹಲವು ದಾಖಲೆ ಬರೆದಿದೆ. ಇದೆಲ್ಲದಕ್ಕೂ 2019ನೇ ವರ್ಷ ಸಾಕ್ಷಿಯಾಗಿತ್ತು.

  ತಮಿಳು ಸಿನಿಮಾ ಆಫರ್

  ತಮಿಳು ಸಿನಿಮಾ ಆಫರ್

  ತಮಿಳಿನ ಖ್ಯಾತ ಬರಹಗಾರ್ತಿ ಸುಚಿತ್ರಾ ರಾವ್ ಬರೆದಿರುವ 'ದಿ ಹೈವೇ ಮಾಫಿಯಾ' ಕಾದಂಬರಿ ಸಿನಿಮಾ ಆಗ್ತಿದ್ದು, ಈ ಚಿತ್ರದ ಕನ್ನಡ ವರ್ಷನ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕ ಆಗ್ತಾರೆ ಎಂಬ ಸುದ್ದಿ ಆಯ್ತು. ಈ ವಿಷಯ ಕೇಳಿ ಯಶ್ ಅಭಿಮಾನಿಗಳು ಸಂತಸ ಪಟ್ಟಿದ್ದರು. ತದನಂತರ ಈ ಸುದ್ದಿ ತಣ್ಣಗಾಯಿತು.

  'ಕೆಜಿಎಫ್' ನಂತರ ತಮಿಳಿನಲ್ಲಿ ಯಶ್ ಗಾಗಿ ತಯಾರಾಗಿದೆ ಮೆಗಾ ಸಿನಿಮಾ.!'ಕೆಜಿಎಫ್' ನಂತರ ತಮಿಳಿನಲ್ಲಿ ಯಶ್ ಗಾಗಿ ತಯಾರಾಗಿದೆ ಮೆಗಾ ಸಿನಿಮಾ.!

  ಕಿರಾತಕ 2 ಬ್ರೇಕ್!

  ಕಿರಾತಕ 2 ಬ್ರೇಕ್!

  ಕೆಜಿಎಫ್ ಸಕ್ಸಸ್ ಬಳಿಕ ಯಶ್ ಮೈ ನೇಮ್ ಈಸ್ ಕಿರಾತಕ ಚಿತ್ರಕ್ಕೆ ಚಾಲನೆ ನೀಡಿದರು. ಶೂಟಿಂಗ್ ಕೂಡ ಮಾಡಿದರು. ನಂತರ ಅರ್ಧದಲ್ಲೇ ಚಿತ್ರೀಕರಣ ನಿಲ್ಲಿಸಿದರು. ಈಗ ಈ ಸಿನಿಮಾ ಆರಂಭವಾಗುತ್ತಾ ಇಲ್ವಾ ಎಂಬ ಅನುಮಾನ ಕಾಡುತ್ತಿದೆ.

  ಮಂಡ್ಯ ಅಖಾಡಕ್ಕೆ ಯಶ್!

  ಮಂಡ್ಯ ಅಖಾಡಕ್ಕೆ ಯಶ್!

  ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಸ್ಪರ್ಧಿಸಿದ್ದರು. ನಟ ದರ್ಶನ್ ಮತ್ತು ಯಶ್ ಇಬ್ಬರು ಜೋಡೆತ್ತುಗಳಾಗಿ ಗೆಲುವಿಗೆ ಸಹಕಾರಿಯಾದರು. ಈ ನಡುವೆ ಪ್ರಚಾರದ ಸಂದರ್ಭದಲ್ಲಿ ಯಶ್ ಅವರ ಮೇಲೆ ವೈಯಕ್ತಿಕ ವಿಚಾರಗಳಿಗೆ ಹಲವು ಟೀಕೆಗಳು ವ್ಯಕ್ತವಾಯಿತು. ಇದಲ್ಲೆವನ್ನು ತಾಳ್ಮೆಯಿಂದ ನಿಭಾಯಿಸಿದ ರಾಕಿ ಭಾಯ್, ಸುಮಲತಾ ಗೆಲುವಿನೊಂದಿಗೆ ಉತ್ತರಿಸಿದರು.

  'ಜೋಡಿ ಎತ್ತು'ಗಳ ಅಬ್ಬರದ ಪ್ರಚಾರ: ಮಂಡ್ಯದಲ್ಲಿ ಅಂಬಿ ಪತ್ನಿ ಶಕ್ತಿ ಪ್ರದರ್ಶನ'ಜೋಡಿ ಎತ್ತು'ಗಳ ಅಬ್ಬರದ ಪ್ರಚಾರ: ಮಂಡ್ಯದಲ್ಲಿ ಅಂಬಿ ಪತ್ನಿ ಶಕ್ತಿ ಪ್ರದರ್ಶನ

  ಆತಂಕ ಸೃಷ್ಟಿಸಿದ್ದ ಸುಪಾರಿ ಪ್ರಕರಣ

  ಆತಂಕ ಸೃಷ್ಟಿಸಿದ್ದ ಸುಪಾರಿ ಪ್ರಕರಣ

  ಮಾರ್ಚ್ ತಿಂಗಳಲ್ಲಿ ನಟ ಯಶ್ ಅವರ ಹತ್ಯೆ ಸುಪಾರಿ ನೀಡಲಾಗಿದೆ ಎಂಬ ಆತಂಕಕಾರಿ ಸುದ್ದಿ ವರದಿಯಾಯಿತು. ರೌಡಿ ಶೀಟರ್ ಭರತ್ ಮತ್ತು ಸಹಚರರು ಯಶ್ ಅವರನ್ನು ಹತ್ಯೆ ಮಾಡಲು ಸುಪಾರಿ ಪಡೆದಿದ್ದರು ಎಂಬ ಮಾಹಿತಿ ಸೋರಿಕೆಯಾಗಿದೆ ಎನ್ನಲಾಯಿತು. ನಂತರ ಯಶ್ ಅವರೇ ಖುದ್ದು ಸುದ್ದಿಗೋಷ್ಠಿ ಮಾಡಿ ''ಇದೆಲ್ಲ ಸುಳ್ಳು ಸುದ್ದಿ, ನನಗೂ ಈ ಪ್ರಕರಣ ಸಂಬಂಧವಿಲ್ಲ. ನನ್ನ ಹೆಸರು ಚರ್ಚಿಸಬೇಡಿ'' ಎಂದು ವದಂತಿಗಳಿಗೆ ತೆರೆ ಎಳೆದರು.

  ಸುಪಾರಿ ಪ್ರಕರಣದಲ್ಲಿ ನನ್ನ ಹೆಸರಿಲ್ಲ, ಇದೆಲ್ಲ ಸುಳ್ಳು: ನಟ ಯಶ್ ಸ್ಪಷ್ಟನೆಸುಪಾರಿ ಪ್ರಕರಣದಲ್ಲಿ ನನ್ನ ಹೆಸರಿಲ್ಲ, ಇದೆಲ್ಲ ಸುಳ್ಳು: ನಟ ಯಶ್ ಸ್ಪಷ್ಟನೆ

  ಕೆಜಿಎಫ್ 2 ಪೂಜೆ

  ಕೆಜಿಎಫ್ 2 ಪೂಜೆ

  ಮಾರ್ಚ್ ತಿಂಗಳಲ್ಲಿ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಮುಹೂರ್ತ ಕಾರ್ಯಕ್ರಮ ವಿಜಯನಗರದ ಕೋದಂಡರಾಮ ದೇವಾಲಯದಲ್ಲಿ ನೆರವೇರಿತು. ಮೊದಲ ಭಾಗದಲ್ಲಿ ಇತಿಹಾಸ ನಿರ್ಮಿಸಿದ್ದ ಯಶ್, ಎರಡನೇ ಅಧ್ಯಾಯ ಆರಂಭಿಸಿದ್ದರು. ಇದು ಸಿನಿಮಾ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿತ್ತು.

  ಮಗಳ ನಾಮಕರಣ

  ಮಗಳ ನಾಮಕರಣ

  ರಾಕಿಂಗ್ ಸ್ಟಾರ್ ಯಶ್ ಅವರ ಪುತ್ರಿ ನಾಮಕರಣ ಜೂನ್ ತಿಂಗಳಲ್ಲಿ ನಡೆಯಿತು. ಯಶ್ ದಂಪತಿಯ ಮಗಳಿಗೆ ಏನೆಂದು ಹೆಸರುಡುತ್ತಾರೆ ಎಂಬ ಕುತೂಹಲ ಕಾಡುತ್ತಿತ್ತು. ಐರಾ ಎಂದು ಹೆಸರಿಟ್ಟು ರಾಕಿ ಭಾಯ್ ಸಂಭ್ರಮಿಸಿದ್ದರು.

  ಯಶ್-ರಾಧಿಕಾ ಮುದ್ದು ಮಗಳಿಗೆ ನಾಮಕರಣಯಶ್-ರಾಧಿಕಾ ಮುದ್ದು ಮಗಳಿಗೆ ನಾಮಕರಣ

  ಸೈಮಾ-ಫಿಲಂ ಫೇರ್ ಅವಾರ್ಡ್

  ಸೈಮಾ-ಫಿಲಂ ಫೇರ್ ಅವಾರ್ಡ್

  ಕೆಜಿಎಫ್ ಸಿನಿಮಾ ಬಂದ್ಮೇಲೆ ಯಶ್ ಅವರಿಗೆ ಹಲವು ಪ್ರಶಸ್ತಿಗಳು ಸಿಕ್ಕಿದೆ. ಸೈಮಾ ಅತ್ಯುತ್ತಮ, ಫಿಲಂ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಜೊತೆಗೆ ಕೆಲವು ಖಾಸಗಿ ಸಂಸ್ಥೆಗಳು ಕೂಡ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

  Siima Awards 2019 : 'ಸ್ಟೈಲ್ ಐಕಾನ್' ಪಟ್ಟ ಪಡೆದ ರಾಕಿಂಗ್ ಸ್ಟಾರ್Siima Awards 2019 : 'ಸ್ಟೈಲ್ ಐಕಾನ್' ಪಟ್ಟ ಪಡೆದ ರಾಕಿಂಗ್ ಸ್ಟಾರ್

  ಎರಡನೇ ಮಗು

  ಎರಡನೇ ಮಗು

  ಮೊದಲ ಮಗು ನಾಮಕರಣ ಮುಗಿಸಿದ ಯಶ್ ಮತ್ತೊಂದು ಸರ್ಪ್ರೈಸ್ ಸುದ್ದಿ ನೀಡಿದರು. ರಾಧಿಕಾ ಪಂಡಿತ್ ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬ ಸಂತಸ ಹಂಚಿಕೊಂಡರು. ಅಕ್ಟೋಬರ್ ಅಂತ್ಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ, ತಮ್ಮ ಕುಟುಂಬಕ್ಕೆ ರಾಜಕುಮಾರನನ್ನು ಸ್ವಾಗತಿಸಿದ್ದರು.

  ಮಗಳ ಹುಟ್ಟುಹಬ್ಬ

  ಮಗಳ ಹುಟ್ಟುಹಬ್ಬ

  ಯಶ್-ರಾಧಿಕಾ ದಂಪತಿಯ ಮಗಳು ಐರಾ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇಡೀ ಸ್ಯಾಂಡಲ್ವುಡ್ ಇಂಡಸ್ಟ್ರಿ ಈ ಬರ್ತಡೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  English summary
  Last year actor yash did not celebrate birthday. this year his fans are celebrating yash birthday grand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X