For Quick Alerts
  ALLOW NOTIFICATIONS  
  For Daily Alerts

  ಗಿನ್ನೆಸ್ ವಿಜೇತ ರಾಮಾನಾಯ್ಡುಗೆ ಫಾಲ್ಕೆ ಮುಕುಟ

  By Mahesh
  |

  ಕನ್ನಡದ ಮದುವೆಯಾಗೋಣ ಬಾ, ತವರುಮನೆ ಉಡುಗೊರೆ ಸೇರಿದಂತೆ 130 ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಿಸಿರುವ ತೆಲುಗಿನ ಖ್ಯಾತ ಚಿತ್ರ ನಿರ್ಮಾಪಕ ಡಿ.ರಾಮಾನಾಯ್ಡು ಅವರಿಗೆ 2009ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಕಳೆದ ಐದು ದಶಕಗಳಿಂದ ತೆಲುಗು ಚಿತ್ರರಂಗದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ರಾಮಾನಾಯ್ಡು, ಅವರು ಭಾರತೀಯ ಚಿತ್ರರಂಗಕ್ಕೆ ನೀಡಿರುವ ಅತ್ಯಮೂಲ್ಯ ಕೊಡುಗೆಯನ್ನು ಪರಿಗಣಿಸಿ ದಾದಾಸಾಹೇಬ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

  64 ವರ್ಷದ ರಾಮಾನಾಯ್ಡು ಹಿಂದಿಯಲ್ಲಿ ಸೂಪರ್ ಹಿಟ್ ಚಿತ್ರಗಳಾದ ಪ್ರೇಮ್‌ನಗರ್, ದಿಲ್ದಾರ್, ಬಂದಿಷ್ ನಿರ್ಮಿಸಿದ್ದರು. ತೆಲುಗಿನಲ್ಲಿ ಶ್ರೀಕೃಷ್ಣ ತುಲಾಭಾರಂ, ಪ್ರೇಮಿಂಚು, ರಾಮುಡು ಭೀಮುಡು, ಬೊಬ್ಬಿಲಿ ರಾಜಾ, ಆನಾ ಪೆಳ್ಳಂಟಾ, ಆಂಧ್ರ ವೈಭವನ್, ಕಥಾನಾಯಕುಡು ಚಿತ್ರವನ್ನೂ ರಾಮಾನಾಯ್ಡು ನಿರ್ಮಿಸಿದ್ದರು.

  ಕಳೆದ 47 ವರ್ಷಗಳಿಂದ ಚಿತ್ರಂಗದಲ್ಲಿರುವ ರಾಮಾನಾಯ್ಡು, 130ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ಗಿನ್ನೆಸ್ ದಾಖಲೆಯಲ್ಲೂ ಹೆಸರನ್ನು ದಾಖಲಿಸಿದ್ದಾರೆ. ಕನ್ನಡ, ತೆಲುಗು, ಹಿಂದಿ, ಒರಿಯಾ, ಬೆಂಗಾಳಿ, ಅಸ್ಸಾಮಿ, ತಮಿಳು, ಮಲಯಾಳಂ, ಗುಜರಾತಿ ,ಮರಾಠಿ ಹಾಗೂ ಭೋಜ್ ಪುರಿ ಭಾಷೆಗಳಲ್ಲಿ ಚಿತ್ರ ನಿರ್ಮಿಸಿದ ಸಾಧನೆ ಹೊಂದಿದ್ದಾರೆ.

  1964ರಲ್ಲಿ ತೆರೆಕಂಡಿದ್ದ ಎನ್.ಟಿ.ರಾಮರಾವ್ ಅಭಿನಯದ ರಾಮುಡು, ಭೀಮುಡು ಚಿತ್ರ ರಾಮಾನಾಯ್ಡುಗೆ ಉತ್ತಮ ಹೆಸರು ತಂದುಕೊಟ್ಟಿತ್ತು.

  ರಾಮಾನಾಯ್ಡು ಕಿರು ಪರಿಚಯ: 1936 ರಲ್ಲಿ ಆಂಧ್ರದ ಪ್ರಕಾಶಂ ಜಿಲ್ಲೆಯ ಕರಂಚೆದು ಗ್ರಾಮದಲ್ಲಿ ಜನಿಸಿದ ರಾಮಾನಾಯ್ಡು, 1963ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಅನುರಾಗಂ ಇವರು ನಿರ್ಮಿಸಿದ ಮೊದಲ ಸೂಪರ್ ಹಿಟ್ ಚಿತ್ರ. ಇದಾದ ನಂತರ ಒಂದೊರ ನಂತರ ಒಂದರಂತೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ರಾಮಾನಾಯ್ಡುಗೆ ಆಂಧ್ರಪ್ರದೇಶ ಸರ್ಕಾರದ ವತಿಯಿಂದ ಹಲವು ಪ್ರಶಸ್ತಿ, ಪುನಸ್ಕಾರಗಳು ದೊರೆತಿವೆ.

  ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ವೆಂಕಟೇಶ್ ರಾಮಾನಾಯ್ಡು ಅವರ ಪುತ್ರ. ನಾಯ್ಡು ಅವರ ಮಗಳ ಮಗ ರಾಣಾ ದಗ್ಗುಬಾತಿ ಕೂಡಾ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಗೋವಾದಲ್ಲಿ ನಡೆಯುವ ಚಲನಚಿತ್ರೋತ್ಸವದಲ್ಲಿ ದಾದಾಸಾಹೇಬ್ ಪ್ರಶಸ್ತಿ ಫಲಕದೊಂದಿಗೆ ಸ್ವರ್ಣ ಕಮಲ್ ಪ್ರಶಸ್ತಿ, 10 ಲಕ್ಷ ರೂ.ಗಳ ನಗದು ಬಹುಮಾನವನ್ನು ರಾಮಾನಾಯ್ಡು ಸ್ವೀಕರಿಸಲಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X