For Quick Alerts
  ALLOW NOTIFICATIONS  
  For Daily Alerts

  ಸಾರಥಿ ಚಿತ್ರವನ್ನು ಮೀರಿಸಲಿದೆಯೇ 'ಚಿಂಗಾರಿ'?

  |

  ಕಳೆದ ವರ್ಷ 2011ರ ಸೂಪರ್ ಹಿಟ್ ಚಿತ್ರ ದರ್ಶನ್ ರ 'ಸಾರಥಿ' ದಾಖಲೆಯನ್ನು ಈ ವರ್ಷದ ಪ್ರಾರಂಭದಲ್ಲೇ (ಜನವರಿ 27) ಬಿಡುಗಡೆ ಆಗುತ್ತಿರುವ 'ಚಿಂಗಾರಿ' ಮುರಿಯಲಿದೆಯೇ ಎನ್ನುವ 'ಪ್ರಶ್ನೆ' ಹಾಗೂ 'ಹೌದು' ಎನ್ನುವ ಉತ್ತರಗಳು ಗಾಂಧಿ ನಗರದ ಗಲ್ಲಿಗಲ್ಲಿಗಳಲ್ಲಿ ಓಡಾಡುತ್ತಿವೆ. ಕಾರಣ ಬಿಡುಗಡೆ ಆಗಿರುವ ಚಿಂಗಾರಿ ಪ್ರೋಮೊ.

  ಟಿವಿ ವಾಹಿನಿಗಳಲ್ಲಿ ಬರುತ್ತಿರುವ ಚಿಂಗಾರಿ ಚಿತ್ರದ ಪ್ರೋಮೊ ಜನರನ್ನು ಬಹುವಾಗಿ ಆಕರ್ಷಿಸುತ್ತಿದೆ. ಬಾಲಿವುಡ್ ಚಿತ್ರದ ಶೈಲಿಯಲ್ಲಿ ಚಿತ್ರ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿರುವುದು ಖಂಡಿತ ಎಂದು ಸಿನಿಪ್ರೇಕ್ಷಕರು ಮಾತನಾಡುತ್ತಿದ್ದಾರೆ. ದರ್ಶನ್ ಪ್ರೇಕ್ಷಕರಂತೂ ಕನಸಿನಲ್ಲೂ ಚಿಂಗಾರಿಯನ್ನೇ ಕಾಣುತ್ತಿದ್ದಾರೆ.

  ಜನವರಿ 27ಕ್ಕೆ ಬಿಡುಗಡೆ ಆಗಲಿದೆ ಚಿಂಗಾರಿ. ಈಗಾಗಲೇ ಹಾಡುಗಳು ಜನರ ಬಾಯಲ್ಲಿ ನಲಿದಾಡುತ್ತಿವೆ. ಆಡಿಯೋ ಸೂಪರ್ ಹಿಟ್ ಆಗಿದೆ ಎಂಬ ವರದಿ ಅಶ್ವಿನಿ ಆಡಿಯೋ ಕಂಪನಿಯಿಂದ ಬಂದಿದೆ. ಸಾರಥಿಯ ಬೆನ್ನಿಗೇ ಚಿಂಗಾರಿ ಕೂಡ ಸೂಪರ್ ಹಿಟ್ ಆಗಲಿದೆ ಎಂಬುದು ಗಾಂಧಿ ನಗರದ ಪಂಡಿತರ ಲೆಕ್ಕಾಚಾರ. (ಒನ್ ಇಂಡಿಯಾ ಕನ್ನಡ)

  English summary
  Challenging Star Darshan upcoming movie Chingari is going to release on Jan. 27, 2012. All have lot of Expectations because of its rich and attractive Promo. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X