»   » ಚಿತ್ರಗಳ ಯಶಸ್ವಿಗೆ ದ್ವಾರಕೀಶ್ ಕೊಟ್ಟ ಬಿಟ್ಟಿ ಸಲಹೆಗಳು

ಚಿತ್ರಗಳ ಯಶಸ್ವಿಗೆ ದ್ವಾರಕೀಶ್ ಕೊಟ್ಟ ಬಿಟ್ಟಿ ಸಲಹೆಗಳು

Posted By:
Subscribe to Filmibeat Kannada

ಒಂದು ಚಿತ್ರ ಯಶಸ್ವಿಯಾಗಬೇಕಾದರೆ ಏನು ಮಾಡಬೇಕು. ಈ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗದೆ ಕನ್ನಡ ಚಿತ್ರ ನಿರ್ಮಾಪಕರು ಕಂಗಾಲಾಗಿದ್ದರು. ಈಗ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ಹೊಸ ಸೂತ್ರವೊಂದನ್ನು ಕಂಡುಹಿಡಿದಿದ್ದಾರೆ.

ಯಾವುದೇ ಚಿತ್ರದಲ್ಲಿ ಕಣ್ಣಿಗೆ ಅಂದ,ಕಿವಿಗೆ ಇಂಪು, ಮನಸ್ಸಿಗೆ ತಟ್ಟುವ ದೃಶ್ಯಗಳಿದ್ದರೆ ಚಿತ್ರ ಖಂಡಿತ ಹಿಟ್ ಆಗುತ್ತದೆ ಎಂದಿದ್ದಾರೆ. ಈ ಮೂರರಲ್ಲಿ ಯಾವುದಾರೊಂದನ್ನು ನೀಡಿದರೂ ಸಾಕು. ಚಿತ್ರ ಗೆಲ್ಲಲಿದೆ. ಹೀಗಂತ ಬಿಟ್ಟಿ ಸಲಹೆಯನ್ನು ದ್ವಾರಕೀಶ್ ನೀಡಿದ್ದಾರೆ.

ಇವುಗಳನ್ನು ಚಿತ್ರಗಳಲ್ಲಿ ಅಳವಡಿಸಿಕೊಂಡರೆ ಖಂಡಿತ ಯಶಸ್ಸು ಸಾಧಿಸುತ್ತೀರಿ. ಅದುಬಿಟ್ಟು ಟಿಕೆಟ್ ಬೆಲೆ ಏರಿಸುವುದರಿಂದ ಏನೇನು ಪ್ರಯೋಜನವಿಲ್ಲ ಎಂದಿದ್ದಾರೆ. ಕಥಾಸಾರಾಂಶದ ಕಡೆ ಒತ್ತು ನೀಡುತ್ತಿಲ್ಲ. ಸಿನಿಮಾ ನಂಬಿ ಚಿತ್ರಮಂದಿರಕ್ಕೆ ಬರುವ ವೀಕ್ಷಕರಿಗೆ ಮೋಸ ಮಾಡಲಾಗುತ್ತಿದೆ ಎಂದು ದ್ವಾರಕೀಶ್ ನೊಂದು ನುಡಿದ್ದಾರೆ.

ಪ್ರೇಕ್ಷಕರಿಗೆ ನಾವು ಯಾವ ರೀತಿಯ ಸಿನಿಮಾ ನೀಡುತ್ತಿದ್ದೇನೆ ಎಂದು ಮೊದಲು ಅರಿತುಕೊಳ್ಳಬೇಕು. ಅದು ಬಿಟ್ಟು ಟಿಕೆಟ್ ಬೆಲೆ ರು.100 ಏರಿಸಿ ಪ್ರೇಕ್ಷಕರನ್ನು ದೋಚುವುದು ಸರಿಯಲ್ಲ ಎಂದು ಅವರು ಹಿತಮಿತವಾಗಿ ಕಿವಿ ಮಾತನ್ನು ಹೇಳಿದ್ದಾರೆ.

ಚಿತ್ರ ಹಿಟ್ ಆದಾಗ ದುರಹಂಕಾರ ಪಡೆಯದೆ ನಿಯತ್ತಿನಿಂದ ಸಿನಿಮಾಗಳನ್ನು ಮಾಡಬೇಕು ಎಂದಿರುವ ಅವರು, ಚಿತ್ರಗಳ ಸೋಲು ಗೆಲುವು ಯಾರ ಕೈಯಲ್ಲೂ ಇಲ್ಲ ಎಂದು ಕಡೆಗೆ ವೇದಾಂತ ಹೇಳಿದ್ದಾರೆ. (ಏಜೆನ್ಸೀಸ್)

English summary
Kannada films actor, director and producer Dwarakish has given few advises for success of Kannada films. Definitely his three points formula helps success of Kannada films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada