For Quick Alerts
  ALLOW NOTIFICATIONS  
  For Daily Alerts

  ಮೊದಲ 3 ತಿಂಗಳಲ್ಲಿ ಗೆದ್ದ & ಬಿದ್ದ ಕನ್ನಡ ಚಿತ್ರಗಳು

  |

  ಜನವರಿ 2012ರಿಂದ ಮಾರ್ಚ್ 2012ರ ವರೆಗಿನ ನಮ್ಮ ಕನ್ನಡ ಚಿತ್ರಗಳ ಬಗ್ಗೆ, ಚಿತ್ರಗಳ ಲಾಭ ನಷ್ಟದ ಬಗ್ಗೆ ಒಂದು ಸಲ ಅವಲೋಕಿಸಿದರೆ ಪರಿಸ್ಥಿತಿ ಆರಕ್ಕೇರಿಲ್ಲ ಮೂರಕ್ಕೆ ಇಳಿದಿಲ್ಲ ಎನ್ನಬಹುದು. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಸ್ಯಾಂಡಲ್ ವುಡ್ ಸ್ವಲ್ಪ ಚೇತರಿಸಿ ಕೊಳ್ಳುತ್ತಿದೆ ಎನ್ನುವುದಕ್ಕೆ ಖಂಡಿತಾ ಅಡ್ಡಿಯಿಲ್ಲ. ಅದು ಗುಣಮಟ್ಟದ ವಿಚಾರದಲ್ಲಿ ಆಗಿರಬಹುದು, ಪಬ್ಲಿಸಿಟಿ ವಿಚಾರದಲ್ಲಾಗಿರಬಹುದು ಅಥವಾ ಗಲ್ಲಾಪೆಟ್ಟಿಗೆ ವಿಚಾರದಲ್ಲಾಗಿರಬಹದು.

  ಜನವರಿ ತಿಂಗಳಲ್ಲಿ ಒಟ್ಟು 7ಚಿತ್ರಗಳು ಬಿಡುಗಡೆಗೊಂಡಿದ್ದವು. ಶಕ್ತಿ, ಪ್ರಾರ್ಥನೆ, ರಾಣಾ ಪ್ರತಾಪ್, ಸಿದ್ಲಿಂಗು, ಕೋ.ಕೋ., ಸುನಾಮಿ ಮತ್ತು ಆರಕ್ಷಕ ಚಿತ್ರಗಳು. ಫೆಬ್ರವರಿ ತಿಂಗಳಲ್ಲಿ 8 ಚಿತ್ರಗಳು ಬಿಡುಗಡೆಗೊಂಡಿದ್ದವು. ಚಿಂಗಾರಿ, ಪಾರಿಜಾತ, ಎಕೆ 56, ತುಗ್ಲಕ್, ನಮ್ಮಣ್ಣ ಡಾನ್, ಗವಿಪುರ, ಲಕ್ಕಿ, ಸನಿಹ ಚಿತ್ರಗಳು.

  ಮಾರ್ಚ್ ತಿಂಗಳಲ್ಲಿ 12 ಚಿತ್ರಗಳು ಬಿಡುಗಡೆಗೊಂಡಿದ್ದವು. ಅವುಗಳೆಂದರೆ ಮುಂಜಾನೆ, ಸಂಕ್ರಾಂತಿ, ಪುನೀತ್, ಅಲೆಮಾರಿ, ಭಗವಂತ ಕೈಕೊಟ್ಟ, ಮಾಗಡಿ, ನರಸಿಂಹ, ಪ್ರಸಾದ್, ಸೈಲೆನ್ಸ್, ಆ ಮರ್ಮ, ಗೋವಿಂದಾಯ ನಮಃ, ಶಿಕಾರಿ. ಅಂದರೆ ಮೂರು ತಿಂಗಳಲ್ಲಿ ಬಿಡುಗಡೆಯಾದ ಒಟ್ಟು ಚಿತ್ರಗಳು 27.

  ಒಟ್ಟು 27 ಚಿತ್ರಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ವಿಫಲಗೊಂಡ ಚಿತ್ರಗಳ ಸಂಖ್ಯೆ ಪಟ್ಟಿ ಮಾಡುವುದಾದರೆ 16. ಅದರಲ್ಲಿ ಗಣೇಶ್ ಅಭಿನಯದ ಮುಂಜಾನೆ, ಮಮ್ಮುಟ್ಟಿ ಅಭಿನಯದ ಶಿಕಾರಿ, ಅರ್ಜುನ್ ಸರ್ಜಾ ಅಭಿನಯದ ಪ್ರಸಾದ್, ರಮೇಶ್ ಅರವಿಂದ ಅಭಿನಯದ ನಮ್ಮಣ್ಣ ಡಾನ್ ಚಿತ್ರಗಳನ್ನು ಆ ಪಟ್ಟಿಯಲ್ಲಿ ಸೇರಿಸಬಹುದು ಎನ್ನುವುದು ಪ್ರೇಕ್ಷಕರ ಪ್ರತಿಕ್ರಿಯೆಯ ನಂತರದ ಒಂದು ವರದಿ.

  ಎವರೇಜ್ ಹಿಟ್ ಚಿತ್ರಗಳನ್ನು ಪಟ್ಟಿ ಮಾಡುವುದಾದರೆ ಶಕ್ತಿ, ಸಿದ್ಲಿಂಗು, ಕೋ.ಕೋ, ಪಾರಿಜಾತ, ಎಕೆ 56, ಲಕ್ಕಿ, ನರಸಿಂಹ ಚಿತ್ರಗಳು. ಈ ಎಲ್ಲಾ ಚಿತ್ರಗಳು (ನರಸಿಂಹ ಹೊರತು ಪಡಿಸಿ, 25ನೇ ದಿನ ಚಾಲ್ತಿಯಲ್ಲಿದೆ) ಅರ್ಧಶತಕ ಪೂರೈಸಿವೆ. ಒಂದು ಮೂಲಗಳ ಪ್ರಕಾರ ಅಂದಾಜು ಸುಮಾರು ನಾಲ್ಕೂವರೆ ಕೋಟಿ ರೂಪಾಯಿ ಸಂಪಾದನೆ ಮಾಡಿದ ಆರಕ್ಷಕ ಚಿತ್ರವನ್ನು ಹಿಟ್ ಚಿತ್ರಗಳ ಪಟ್ಟಿಗೆ ಸೇರಿಸಬಹುದು. ಮತ್ತು ಬಿಡುಗಡೆಗೊಂಡ ದಿನದಿಂದ ಈವರೆಗೂ ಭರ್ಜರಿ ಗಳಿಕೆ ಕಾಣುತ್ತಿರುವ ಗೋವಿಂದಾಯ ನಮಃ ಚಿತ್ರವನ್ನು ಈ ಪಟ್ಟಿಗೆ ಸೇರಿಸಬಹುದು.

  2012 ಮೊದಲ ಮೂರು ತಿಂಗಳ ವರದಿ ಪ್ರಕಾರ ಸೂಪರ್ ಹಿಟ್ ಕ್ಯಾಟಗರಿಗೆ ಸೇರಿಸ ಬಹುದಾದ ಚಿತ್ರವೆಂದರೆ ದರ್ಶನ ಅಭಿನಯದ 'ಚಿಂಗಾರಿ. 180 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದ ಚಿಂಗಾರಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 6 ಕೋಟಿಗಿಂತ ಹೆಚ್ಚು ಕಲೆಕ್ಷನ್ ಬರೀ ಮೊದಲ ವಾರದಲ್ಲಿ ಗಳಿಸಿ 'ದಾಖಲೆ' ಮೆರೆದಿತ್ತು.

  English summary
  First three months Kannada films box office performance. During these threee month total 27 movies released, out of that 16 movies not done good business in box office. Darshan starrer Chingari is the highest grosser duing this period.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X