For Quick Alerts
  ALLOW NOTIFICATIONS  
  For Daily Alerts

  'ಟಿನೇಜ್'ನಲ್ಲಿ ಕಿಶನ್-ತನ್ವಿ ನೀರಿನೊಳಗೆ ಡ್ಯುಯೆಟ್

  |

  ಬಾಲನಟ ಕಿಶನ್ ಚಿತ್ರ 'ಟೀನೇಜ್' ಈಗ ಸುದ್ದಿಯ ಕೇಂದ್ರ ಬಿಂದು. ಕಾರಣ ಸ್ಷೆಷಲ್ ವಾಟರ್ ಫ್ರೂಫ್ ಕ್ಯಾಮರಾ ಬಳಸಿ ನೀರಿನೊಳಗೆ ಹಾಡನ್ನು ಚಿತ್ರೀಕರಿಸಲಾಗಿದೆ. ಚಿತ್ರದ ನಾಯಕ ಬಾಲನಟ ಕಿಶನ್ ಹಾಗೂ ಬಾಲನಟಿ ತನ್ವಿ ಡ್ಯುಯೆಟ್ ಹಾಡನ್ನು ಕೊರಿಯೋಗ್ರಾಫರ್ ಮುರಳಿ ನಿರ್ದೇಶನದಲ್ಲಿ ಸೆರೆಹಿಡಯಲಾಗಿದೆ.

  ರಾಷ್ಟ್ರ ಪ್ರಶಸ್ತಿ ವಿಜೇತ ಬಾಲನಟ ಕಿಶನ್ ಗಾಗಿ ಅವರ ತಂದೆ ಶ್ರೀಕಾಂತ್ 'ಟೀನೇಜ್' ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಾಕಷ್ಟು ಹೋಮ್ ವರ್ಕ್ ಬಳಿಕ ಶೂಟಿಂಗ್ ಮಾಡಲಾಗುತ್ತಿದ್ದು ಮಾಸ್ಟರ್ ಕಿಶನ್ ಗೆ ಹೊಸ ಇಮೇಜ್ ಸೃಷ್ಟಿ ಮಾಡಲು ಹೊರಟಿದೆ ಚಿತ್ರತಂಡ. ಚಿತ್ರ ಡಿಫರೆಂಟ್ ಆಗಿ ಮೂಡಿ ಬರಬೇಕೆಂಬ ಪ್ರಯತ್ನದಲ್ಲಿ ಈ 'ಅಂಡರ್ ವಾಟರ್' ಹಾಡನ್ನು ಚಿತ್ರೀಕರಿಸಲಾಗಿದೆ.

  ಮಾಸ್ಟರ್ ಕಿಶನ್ ಏನೇ ಮಾಡಿದರೂ ಸುದ್ದಿಯಾಗುವ ಕಾಲವೊಂದಿತ್ತು. ಆದರೆ ಈಗ ಆ ಹಂತವನ್ನು ಮೀರಿ ಸದ್ದು-ಗದ್ದಲವಿಲ್ಲದೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆದಿದೆ. ಕಾರಣ ಸಿನಿಮಾದಲ್ಲಿ ಹೊಸತನವಿದ್ದರೆ ಬಿಡುಗಡೆಯಾದ ನಂತರ ತನ್ನಿಂತಾನೇ ಪ್ರಚಾರ ಆಗುತ್ತದೆ ಎಂಬುದು ಕಿಶನ್ ತಂದೆ ಶ್ರೀಕಾಂತ್ ಅಭಿಪ್ರಾಯ. (ಒನ್ ಇಂಡಿಯಾ ಕನ್ನಡ)

  English summary
  Actor Master Kishan's upcoming movie 'Teenage' team made special adventure. A duet song is made shooting from special waterproof camera. Under water song will be the highlight of this movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X