»   »  ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಮುಖಪುಟ

ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಮುಖಪುಟ

Subscribe to Filmibeat Kannada

ರೂಪಾ ಅಯ್ಯರ್ ನಿರ್ದೇಶನದ 'ಮುಖಪುಟ' ಚಿತ್ರ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಈ ಚಿತ್ರವನ್ನು ಅಮೆರಿಕ ಮೂಲದ ಇಂಡಿಯಾ ಕ್ಲಾಸಿಕ್ ಆರ್ಟ್ಸ್ ನಿರ್ಮಿಸಿದೆ. ಐರ್ಲೆಂಡ್, ದಕ್ಷಿಣ ಆಫ್ರಿಕಾ, ವೇಲ್ಸ್, ಈಜಿಪ್ಟ್, ಥೈಲ್ಯಾಂಡ್ ಮೊದಲಾದ ಚಿತ್ರೋತ್ಸವಗಳಲ್ಲಿ ಮುಖಪುಟ ಪ್ರದರ್ಶನ ಕಾಣಲಿದೆ.

ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕಾಗಿ ಪ್ರಪಂಚದ ನಾನಾ ಭಾಗಗಳಿಂದ 600ಕ್ಕೂ ಹೆಚ್ಚು ಚಿತ್ರಗಳು ಬಂದಿದ್ದವು. ಕೊನೆಯ ಸುತ್ತಿನಲ್ಲಿ ಆಯ್ಕೆಯಾದ ಏಳು ಚಿತ್ರಗಳಲ್ಲಿ 'ಮುಖಪುಟ'ವೂ ಒಂದಾಗಿತ್ತು ಎನ್ನುತ್ತಾರೆ ರೂಪಾಅಯ್ಯರ್. ಅಂದಹಾಗೆ ಎಚ್ ಐವಿ ಹಾಗೂ ಏಡ್ಸ್ ಕುರಿತ ಕಥಾಹಂದರವನ್ನು 'ಮುಖಪುಟ' ಚಿತ್ರ ಒಳಗೊಂಡಿದೆ.

ಹಾಡುಗಳನ್ನು ಕಡಿತಗೊಳಿಸಿ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಚಿತ್ರ ಕಳುಹಿಸಬೇಕು ಎಂದು ಕೆಲವರು ತಪ್ಪು ಮಾಹಿತಿ ನೀಡಿದ್ದರು. ಹಾಡಿನೊಂದಿಗೆ ಮುಖಪುಟ ಚಿತ್ರವನ್ನು ಕಳುಹಿಸಿದ್ದೆವು. ಚಿತ್ರದ ಶೀರ್ಷಿಕೆ ಮತ್ತು ಹಾಡಿನ ಕಾರಣದಿಂದ ನಮ್ಮ ಚಿತ್ರ ಆಯ್ಕೆಯಾಯಿತು ಎಂದು ರೂಪಾ ಅಯ್ಯರ್ ವಿವರ ನೀಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...