»   » ನೋಡಿದೇನೆ ಅಕ್ಕ ಪಂಚರಂಗಿ ಪಕ್ಕ ವೀರಬಾಹು

ನೋಡಿದೇನೆ ಅಕ್ಕ ಪಂಚರಂಗಿ ಪಕ್ಕ ವೀರಬಾಹು

Posted By:
Subscribe to Filmibeat Kannada

ರೂಪದರ್ಶಿ ಕಮ್ ನಟಿ ನಿಧಿ ಸುಬ್ಬಯ್ಯ ಅವರನ್ನು ಮತ್ತೊಂದು ಅವಕಾಶ ಹುಡುಕಿಕೊಂಡು ಬಂದಿದೆ. ದುನಿಯಾ ವಿಜಯ್ ಅವರ 'ವೀರಬಾಹು' ಚಿತ್ರದ ನಾಯಕಿಯಾಗಿ ಪಂಚರಂಗಿ ಬೆಡಗಿ ನಿಧಿ ಸುಬ್ಬಯ್ಯ ಆಯ್ಕೆಯಾಗಿದ್ದಾರೆ. ಎಸ್ ಮಹೇಂದರ್ ನಿರ್ದೇಶನಲ್ಲಿ ಮೂಡಿಬರುತ್ತಿರುವ 31 ಚಿತ್ರವಿದು.

'ವೀರಬಾಹು' ಚಿತ್ರೀಕರಣ ಮೈಸೂರು ಸುತ್ತಮುತ್ತ ನಡೆಯಲಿದೆ. ಚಿತ್ರದಲ್ಲಿ ನಿಧಿ ಸುಬ್ಬಯ್ಯ ಸಾಂಪ್ರದಾಯಿಕ ಅಯ್ಯಂಗಾರಿ ಹುಡುಗಿಯಾಗಿ ಕಾಣಿಸಲಿದ್ದಾರೆ. ಹಳ್ಳಿಯೊಂದರಲ್ಲಿನ ರಾಜಕೀಯ ಘಟನೆಗಳ ಸುತ್ತ ವೀರಬಾಹು ಕಥೆ ಸುತ್ತುತ್ತದೆ. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಸುದೀರ್ಘ ಸಮಯದ ಬಳಿಕ ಎಸ್ ಮಹೇಂದರ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ರಂಗಾಯಣ ರಘು ಮುಖ್ಯವಾದ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. 'ವೀರಬಾಹು' ಚಿತ್ರದಲ್ಲಿ ಮತ್ತೊಬ್ಬ ಬೆಡಗಿ ರಾಗಿಣಿ ದ್ವಿವೇದಿ ಸಹ ಕಾಣಿಸಲಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಪಂಚರಂಗಿ' ಚಿತ್ರದ ನಿರೀಕ್ಷೆಯಲ್ಲಿ ನಿಧಿ ಸುಬ್ಬಯ್ಯ ಇದ್ದಾರೆ.

ನಿಧಿ ಸುಬ್ಬಯ್ಯ ಅಭಿನಯದ ಈ ಹಿಂದಿನ ಮೂರು ಚಿತ್ರಗಳು ಬಾಕ್ಸಾಫೀಸ್ ಸಲ್ಲಿ ಸೋತಿದ್ದವು. ನಟನೆಯ ಜೊತೆಗೆ ಮಾಡೆಲಿಂಗ್ ಮತ್ತು ಟಿವಿ ಜಾಹೀರಾತುಗಳಲ್ಲೂ ನಿಧಿ ಸುಬ್ಬಯ್ಯ ಮುಂದುವರಿಯುತ್ತಿದ್ದು, ಇದೀಗ ವೀರಬಾಹು ತೆಕ್ಕೆಗೆ ನಿಧಿಸುಬ್ಬಯ್ಯ ಬಿದ್ದಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada