»   »  ಬೆಳ್ಳಿತೆರೆಗೆ ಮತ್ತೆ ಬರಲಿದ್ದಾರೆ ನಟಿ ರಕ್ಷಿತಾ!

ಬೆಳ್ಳಿತೆರೆಗೆ ಮತ್ತೆ ಬರಲಿದ್ದಾರೆ ನಟಿ ರಕ್ಷಿತಾ!

Subscribe to Filmibeat Kannada

ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾದ ಬಳಿಕ ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದ ರಕ್ಷಿತಾ ಇದೀಗ ಮತ್ತೆ ನಟನೆಗೆ ಮರಳುತ್ತಿದ್ದಾರೆ. ಪ್ರೇಮ್ ನಿರ್ದೇಶನ, ನಿರ್ಮಾಣದಲ್ಲಿ ಸೆಟ್ಟೇರಲಿರುವ 'ಜೋಗಯ್ಯ' ಚಿತ್ರದಲ್ಲಿ ರಕ್ಷಿತಾ ಅಭಿನಯಿಸಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸುತ್ತಿರುವ ನೂರನೇ ಚಿತ್ರ ಇದಾಗಿದೆ.

ಇಷ್ಟು ದಿನ ಗೃಹಿಣಿಯಾಗಿ ಪಾತ್ರ ನಿರ್ವಹಿಸಿದ ರಕ್ಷಿತಾ ಇದೀಗ ಅತಿಥಿ ಪಾತ್ರದಲ್ಲಿ 'ಜೋಗಯ್ಯ 'ಚಿತ್ರದಲ್ಲಿ ನಟಿಸಲಿದ್ದಾರೆ. ಶಿವಣ್ಣನ ವೃತ್ತಿ ಜೀವನದಲ್ಲಿ ಜೋಗಿ ಮರೆಯಲಾಗದ ಚಿತ್ರ. ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಚಿತ್ರ.ಇದೀಗ ಬರಲಿರುವ 'ಜೋಗಯ್ಯ' ಅದರ ಎರಡನೆ ಭಾಗ.

''ಚಿತ್ರದಲ್ಲಿ ನಟಿಸುವಂತೆ ಹಲವಾರು ನಿರ್ದೇಶಕರು ನನ್ನ ಈಗಾಗಲೇ ಸಂಪರ್ಕಿಸಿದ್ದಾರೆ. ಕೆಲವೊಂದು ಚಿತ್ರಕತೆಗಳು ತುಂಬಾ ಆಸಕ್ತಿಕರವಾಗಿದ್ದವು. ಪ್ರೇಮ್ ಅವರನ್ನು ಮದುವೆಯಾದ ಬಳಿಕ ಎಲ್ಲ ರೀತಿಯ ಪಾತ್ರಗಳು ನನ್ನನ್ನು ಹುಡುಕಿಕೊಂಡು ಬಂದಿದ್ದವು. ಆದರೆ ಯಾವುದರಲ್ಲೂ ನಟಿಸಲು ಒಪ್ಪಲಿಲ್ಲ. ಮತ್ತೆ ಬೆಳ್ಳೆತೆರೆಗೆ ಬರಬೇಕು ಎಂದು ಗಂಭೀರವಾಗಿ ಪರಿಗಣಿಸಿದ್ದೇನೆ'' ಎನ್ನ್ನುತ್ತ್ತಾರೆ ರಕ್ಷಿತಾ.

'ಅಪ್ಪು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ರಕ್ಷಿತಾ ನಂತರ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದರು. ಕಲಾಸಿ ಪಾಳ್ಯ, ಸುಂಟರಗಾಳಿ, ಡೆಡ್ಲಿ ಸೋಮ, ಮಂಡ್ಯ, ತಾಯಿ ಮಡಿಲು ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. ಇದೀಗ ತಮ್ಮದೇ ನಿರ್ಮಾಣದ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಅಡಿಯಿಡಲಿದ್ದಾರೆ. ರಕ್ಷಿತಾ ಅವರನ್ನು ಪ್ರೇಕ್ಷಕ ಹೇಗೆ ಸ್ವೀಕರಿಸಲಿದ್ದಾನೆ ಎಂಬುದನ್ನು ಕಾದು ನೋಡಬೇಕು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada