'10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ'ದ ಪ್ರಶಸ್ತಿ ಪಟ್ಟಿ
10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಮುಗಿದಿದೆ. ನಿನ್ನೆ ಸಿನಿಮೋತ್ಸವದ ಸಮಾರೋಪ ಸಮಾರಂಭ ವಿಧಾನಸೌಧದಲ್ಲಿ ನಡೆದಿದೆ. 'ಲಾಸ್ಟ್ ಚೈಲ್ಡ್' ಎಂಬ ಕೋರಿಯನ್ ಚಿತ್ರದೊಂದಿಗೆ ಈ ಬಾರಿಯ ಚಿತ್ರ ಪ್ರದರ್ಶನ ಅಂತ್ಯವಾಗಿದೆ.
ಅಂದಹಾಗೆ, ಅಂತರಾಷ್ಟ್ರೀಯ ಸಿನಿಮಾ ವಿಭಾಗ, ಏಷ್ಯನ್ ಸಿನಿಮಾ ವಿಭಾಗ, ಕನ್ನಡ ಸಿನಿಮಾ ವಿಭಾಗ ಸಿನಿಮಾ, ಕನ್ನಡ ಮನರಂಜನೆ ವಿಭಾಗ ಈ ರೀತಿಯ ಸಿನಿಮಾಗಳ ಕ್ಯಾಟಗಾರಿಯಲ್ಲಿ ಈ ಬಾರಿಯ ಚಿತ್ರ ಪ್ರದರ್ಶನ ನಡೆದಿತ್ತು. ಈ ಎಲ್ಲ ವಿಭಾಗದಲ್ಲಿ ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಇಲ್ಲಿದೆ.
ಕನ್ನಡ ಮನರಂಜನೆ ವಿಭಾಗ :
ಅತ್ಯುತ್ತಮ ಸಿನಿಮಾ : ರಾಜಕುಮಾರ
ಎರಡನೇ ಅತ್ಯುತ್ತಮ ಸಿನಿಮಾ : ಭರ್ಜರಿ
ಮೂರನೇ ಅತ್ಯುತ್ತಮ ಸಿನಿಮಾ : ಒಂದು ಮೊಟ್ಟೆಯ ಕಥೆ

ಕನ್ನಡ ವಿಭಾಗ (ಕರ್ನಾಟಕ ಚಲನಚಿತ್ರ ಅಕಾಡಮಿ ಪ್ರಶಸ್ತಿ)
ಅತ್ಯುತ್ತಮ ಸಿನಿಮಾ : ರಿಸರ್ವೇಷನ್
ಎರಡನೇ ಅತ್ಯುತ್ತಮ ಸಿನಿಮಾ : ಮೂಡಲಸೀಮೆಯಲ್ಲಿ
ಮೂರನೇ ಅತ್ಯುತ್ತಮ ಸಿನಿಮಾ : ಅಲ್ಲಮ್ಮ
ಭಾರತೀಯ ವಿಭಾಗ (ಚಿತ್ರ ಭಾರತಿ ಪ್ರಶಸ್ತಿ)
ಅತ್ಯುತ್ತಮ ಸಿನಿಮಾ : ಮಯೂರಾಕ್ಷಿ (Mayurakshi)
ಭಾಷೆ : ಬೆಂಗಾಲಿ
ನಿರ್ದೇಶನ : ಅತನು ಘೋಷ್
ನಿರ್ಮಾಣ : ಫ್ರೆಂಡ್ಸ್ ಕಮ್ಯುನಿಕೇಷನ್

ಜೂರಿ ಪ್ರಶಸ್ತಿ :
ಸಿನಿಮಾ : ಇಶು (Ishu)
ನಿರ್ದೇಶನ : ಉತ್ಪಲ್ ಬೋರ್ಪುಜಾರಿ
ನಿರ್ಮಾಣ : ಚಿಲ್ರನ್ ಫಿಲ್ಮ್ ಸೊಸೈಟಿ
ಏಷ್ಯಾ ವಿಭಾಗ NETPAC ಪ್ರಶಸ್ತಿ
ಅತ್ಯುತ್ತಮ ಸಿನಿಮಾ : Excavator
ನಿರ್ದೇಶನ : Ju-hyoung lee
ನಿರ್ಮಾಣ : Kim ki-dum film

NETPAC ಅಂತರರಾಷ್ಟ್ರಿಯ ಜೂರಿ ಪ್ರಶಸ್ತಿ ಕನ್ನಡ ಸಿನಿಮಾ :
ಅತ್ಯುತ್ತಮ ಸಿನಿಮಾ : ಭೇಟಿ
ಭಾಷೆ : ಕನ್ನಡ
ನಿರ್ದೇಶನ : ಪಿ.ಶೇಷಾದ್ರಿ
ನಿರ್ಮಾಣ : ಬಸಂತ್ ಪ್ರೊಡಕ್ಷನ್ಸ್


Click it and Unblock the Notifications











