»   » ಬೆಳ್ಳಿಹೆಜ್ಜೆಯಲ್ಲಿ ಅಭಿನಯ ಶಾರದೆ ಜಯಂತಿ

ಬೆಳ್ಳಿಹೆಜ್ಜೆಯಲ್ಲಿ ಅಭಿನಯ ಶಾರದೆ ಜಯಂತಿ

Posted By:
Subscribe to Filmibeat Kannada
Actress Jayanthi
ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುವ ವಿಭಿನ್ನ, ವಿಶಿಷ್ಟ ಕಾರ್ಯಕ್ರಮ 'ಬೆಳ್ಳಿಹೆಜ್ಜೆ'. ಕನ್ನಡ ಚಿತ್ರರಂಗದ ಹಲವು ಖ್ಯಾತ ಕಲಾವಿದರು ಈಗಾಗಲೇ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ನೆನೆದು ಸಂಭ್ರಮಿಸಿದ್ದಾರೆ. ಈ ಬಾರಿಯ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಖ್ಯಾತ ಅಭಿನೇತ್ರಿ ಅಭಿನಯ ಶಾರದೆ ಜಯಂತಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು ಜೆಸಿ ರಸ್ತೆಯಲ್ಲಿರುವ ಬಾದಾಮಿ ಹೌಸ್ ನ ಪ್ರಿಯದರ್ಶಿನಿ ಸಭಾಂಗಣದಲ್ಲಿ ಮಾರ್ಚ್13 ರ ಶನಿವಾರ ಬೆಳ್ಳಿಹೆಜ್ಜೆ ಕಾರ್ಯಕ್ರಮ ನಡೆಯಲಿದೆ. ತಮ್ಮ ಅಮೋಘ ಅಭಿನಯದ ಮೂಲಕ ಎಂಥಹ ಪಾತ್ರಗಳಿಗೂ ಜಯಂತಿ ಜೀವತುಂಬುತ್ತಿದ್ದರು ಜಯಂತಿ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಯ 500ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಜಯಂತಿ ಅವರದು.

ಮಾಂತ್ರಿಕ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರ 'ನಾಗರಹಾವು' (1972)ಚಿತ್ರದ ''ಕನ್ನಡ ನಾಡಿನ ವೀರರಮಣಿಯ...'' ಹಾಡು ಕೇಳಿದರೆ ಎಂಥವರಿಗೂ ಮೈ ಜುಂ ಎನ್ನ್ನುತ್ತದೆ. ಜಯಂತಿ ಅವರ ಅಮೋಘ ಅಭಿನಯ ನಿಜವಾಗಿಯೂ ಓಬವ್ವಳನ್ನೇ ಕಣ್ಣಮುಂದೆ ನಿಲ್ಲಿಸುತ್ತದೆ. ಕನ್ನಡ ನಾಡಿನ ಇತಿಹಾಸದಲ್ಲಿ ಒನಕೆ ಓಬವ್ವಳ ಸಾಹಸಗಾಥೆ ನಿಜಕ್ಕೂ ರೋಮಾಂಚನ. ಓಬವ್ವನ ಪಾತ್ರಕ್ಕೆ ಜೀವತುಂಬಿ ಕನ್ನಡಿಗರ ಹೃದಯಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ ನಟಿ.

ಈ ಹಿಂದೆ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಪಾರ್ವತಮ್ಮ ರಾಜ್ ಕುಮಾರ್, ದ್ವಾರಕೀಶ್, ಡಾ.ಬಿ ಸರೋಜಾದೇವಿ ಮತ್ತು ನಿರ್ದೇಶಕ ಸಿದ್ದಲಿಂಗಯ್ಯ ಭಾಗವಹಿಸಿದ್ದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರು ಈ ಕಾರ್ಯಕ್ರದ ರೂವಾರಿ. 'ಜೇನು ಗೂಡು' ಚಿತ್ರದ ಮೂಲಕ ಕನ್ನಡಬೆಳ್ಳಿತೆರೆಗೆ ಹೆಜ್ಜೆಯಿಟ್ಟ ಜಯಂತಿ ಈ ಬಾರಿಯ ಬೆಳ್ಳಿಹೆಜ್ಜೆಯಲ್ಲಿ ತಮ್ಮ ಅನುಭವಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada