»   » ಗೋಲ್ಡನ್ ಗರ್ಲ್ ರಮ್ಯಾ ಚುನಾವಣೆಗೆ ಸ್ಪರ್ಧಿಸುತ್ತಾರೋ!?

ಗೋಲ್ಡನ್ ಗರ್ಲ್ ರಮ್ಯಾ ಚುನಾವಣೆಗೆ ಸ್ಪರ್ಧಿಸುತ್ತಾರೋ!?

Posted By:
Subscribe to Filmibeat Kannada
Ramya
ನಟಿ ರಮ್ಯಾ ಅಭಿಮಾನಿಗಳಿಗೊಂದು ಸುದ್ದಿ. ಬೂತ್ ಮಟ್ಟದ ಚುನಾವಣೆಯಲ್ಲಿ ಜಯಗಳಿಸಿ ಆಮೇಲೆ ತೆರೆಮೆರೆಗೆ ಸರಿದಿದ್ದರು ಈ ಮೋಹಕ ತಾರೆ. ಇದರಿಂದ ರಮ್ಯಾ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿದ್ದು ಸುಳ್ಳಲ್ಲ.

ಸಿನಿಮಾ, ರಾಜಕೀಯ ಎರಡರಲ್ಲೂ ಈ ಸ್ಯಾಂಡಲ್ ವುಡ್ ಕ್ವೀನ್ ಇದ್ದರೆ ತೆರೆಯ ಮೇಲೆ ಮಾತ್ರವಲ್ಲದೇ ಹೊರಗೆ ಕೂಡ ನೋಡಬಹುದಲ್ಲ ಎಂಬುದು ಅಭಿಮಾನಿಗಳ ಲೆಕ್ಕಾಚಾರ(?!).

ರಮ್ಯಾ ಬರಲಿರುವ ವಿಧಾನ ಸಭೆಗಾದರೂ ಸ್ಪರ್ಧಿಸಬಹುದು ಎಂಬುದು ಅಭಿಮಾನಗಳ ಆಸೆ. ಆದರೆ ಅದಕ್ಕೂ 'ನೋ ಗ್ರೀನ್ ಸಿಗ್ನಲ್' ಪ್ರತಿಕ್ರಿಯೆ ನೀಡಿದ್ದಾರೆ ರಮ್ಯಾ ಮೇಡಂ.

"ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಹಾಗೂ ಯುವ ಕಾಂಗ್ರೆಸ್ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆಂದು ಹೇಳಿಯೇ ಇರಲಿಲ್ಲ" ಎಂದು ರಮ್ಯಾ ಇಂದು ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಹಾಗೇ, ಇನ್ನೊಂದು ಪ್ರಮುಖ ಆಪಾದನೆಗೂ ಪ್ರತಿಕ್ರಿಯೆ ನೀಡಿರುವ ರಮ್ಯಾ "ಮೋದಿ ಪರ ಹೇಳಿಕೆ ನೀಡಿದಕ್ಕಾಗಿ ನನಗೆ ಯುವ ಕಾಂಗ್ರೆಸ್ ಚುನಾವಣಾಧಿಕಾರಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಗೆ ಹೆದರಿ ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದೆ ಎಂಬುದು ಶುದ್ಧ ಸುಳ್ಳು" ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಶಾಂತಿ ನಗರದ ಬೂತ್ ವೊಂದರ ಅಧ್ಯಕ್ಷೆ ರಮ್ಯಾ ಯಾರಿಗೆ ಮತ ಚಲಾಯಿಸುತ್ತಾರೆ ಎಂಬುದು ಈಗ ಎಲ್ಲರಲ್ಲಿರುವ ಕುತೂಹಲ!

ರಾಜಕೀಯ ಹಿನ್ನೆಲೆಯಿಂದ ಬಂದಿರುವ ರಮ್ಯಾ ರಾಜಕೀಯ ಎಂಟ್ರಿ ಬೂತ್ ಚುನಾವಣೆಯಲ್ಲಿ ಭರ್ಜರಿ ಜಯಭೇರಿಯೊಂದಿಗೇ ಆಗಿದೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ನಿರೀಕ್ಷೆ ಹುಟ್ಟಿಸಿ ಚುನಾವಣೆ ಕುರಿತು ತೀವ್ರ ಆಸಕ್ತಿ ಹುಟ್ಟುವಂತೆ ರಮ್ಯಾ ಮಾಡಿದ್ದು ಮಾತ್ರ 'ಸುಳ್ಳು' ಅಲ್ಲವೇ ಅಲ್ಲ!

ಈಗ ವಿಧಾನ ಸಭೆ ಚುನಾವಣೆ ಸ್ಪರ್ಧೆಯ ಬಗ್ಗೆ ರಮ್ಯಾ ನಡೆ-ನುಡಿ 'ಅಡ್ಡಗೋಡೆಯ ಮೇಲಿನ ದೀಪ!'

English summary
Actress Ramya told that I Never told I wanted to Participate in this 'Youth Congress' Election. And also she told I have to think to Participate in Assembly Poles. Now she Returned from Europe Tour and Voting tomorrow in Bangalore. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada