»   »  ಭಾವನಾ ರಾವ್ ನಿರುದ್ಯೋಗ ಪರ್ವ ಅಂತ್ಯ!

ಭಾವನಾ ರಾವ್ ನಿರುದ್ಯೋಗ ಪರ್ವ ಅಂತ್ಯ!

Posted By: *ಜಯಂತಿ
Subscribe to Filmibeat Kannada
Bhavana Rao
ತೆರೆ ಕಂಡಿರುವುದು ಒಂದೇ ಸಿನಿಮಾ. ಅದೂ ತೆರೆಕಂಡು ವರ್ಷವಾಯಿತು. ಆದರೂ, ಆ ಸಿನಿಮಾದ ಮೂಲಕ ನಟಿಯೊಬ್ಬಳು ಸುದ್ದಿಯಲ್ಲಿರುತ್ತಾಳೆಂದರೆ ಅದಕ್ಕೆ ಎರಡು ಕಾರಣ: ಒಂದು ಆಕೆಯ ಪ್ರತಿಭೆ. ಮತ್ತೊಂದು ಆಕೆಯ ಓಲೈಸುವ ಗುಣ, ಅರ್ಥಾತ್ ರಾಜಿ ಮನೋಭಾವ. ಮೊದಲನೆ ವರ್ಗದ ಚೆಲುವೆ ಭಾವನಾ ರಾವ್.

ಯೋಗರಾಜ ಭಟ್ಟರ ಗಾಳಿಪಟ ಚಿತ್ರದಲ್ಲಿ ಚಿನಕುರಳಿಯಂತೆ ವಟಗುಟ್ಟುವ ತುಂಟ ಹುಡುಗಿಯ ಪಾತ್ರದಲ್ಲಿ ಭಾವನಾ ರಾವ್ ಮಿಂಚಿದ್ದರು. ನೃತ್ಯಪಟುವೂ ಆಗಿರುವ ಭಾವನಾ ಕಣ್ಣುಗಳಲ್ಲೇ ಕಥೆ ಹೇಳಬಲ್ಲ ಸಾಮರ್ಥ್ಯದ ಪ್ರತಿಭಾವಂತೆ. ಇಂತಿಪ್ಪ ಹುಡುಗಿ ಮೊದಲ ಚಿತ್ರದ ನಂತರ ಸಾಕಷ್ಟು ಕಾಲ ನಿರುದ್ಯೋಗಿಯಾಗಿ ಕೂಡುವುದೆಂದರೆ?

ಭಾವನಾಳ ನಿರುದ್ಯೋಗ ಪರ್ವಕ್ಕೆ ಚಿತ್ರೋದ್ಯಮ ಕಾರಣವಲ್ಲ. ಸ್ವತಃ ಭಾವನಾಳೇ ಅದಕ್ಕೆ ಕಾರಣ. ಗಾಳಿಪಟ ನಂತರ ಒಂದಷ್ಟು ಅವಕಾಶಗಳೇನೋ ಅವರನ್ನು ಹುಡುಕಿಕೊಂಡು ಬಂದವು. ಆದರೆ ಯಾವ ಪಾತ್ರದಲ್ಲೂ ವಿಶೇಷವಿದೆ ಎಂದು ಆಕೆಗನ್ನಿಸಲಿಲ್ಲ. ಅವಕಾಶ ದೊರೆಯಿತು ಎಂದು ಪಾತ್ರ ಮಾಡುವುದರಲ್ಲಿ ಆಕೆಗೆ ನಂಬಿಕೆಯಿಲ್ಲವಂತೆ. ಅಭಿನಯಕ್ಕೆ ಅವಕಾಶವಿರುವ ಪಾತ್ರಗಳಲ್ಲಿ ಮಾತ್ರ ನಟಿಸುತ್ತೇನೆ ಎನ್ನುವುದು ಅವರು ತಮಗೆ ತಾವೇ ವಿಧಿಸಿಕೊಂಡಿರುವ ಚೌಕಟ್ಟು.

ಸದ್ಯಕ್ಕೆ ಭಾವನಾ ಕೈಯಲ್ಲಿ ಎರಡು ಚಿತ್ರಗಳಿವೆ. ಹಾಲಿಡೇಸ್ ಮತ್ತು ಗಗನಚುಕ್ಕಿ. ಎರಡು ಚಿತ್ರಗಳ ಪಾತ್ರಗಳೂ ಕಲಾವಿದೆಯನ್ನು ಬೇಡುವಂತಿವೆ ಎನ್ನೋದು ಭಾವನಾ ಅನಿಸಿಕೆ. ಅಂದಹಾಗೆ, ಭಾವನಾ ಬಿಡುವಿನ ಸಮಯದಲ್ಲಿ ಏನು ಮಾಡುತ್ತಾರೆ? ಸಿನಿಮಾ ಅಥವಾ ಪುಸ್ತಕ ಭಾವನಾರ ಆಯ್ಕೆ. ಹಾಂ, ಮೊನ್ನೆ ಅವರು ಓದಿ ಮುಗಿಸಿದ ಪುಸ್ತಕ ಶಾರೂಖನ ಜೀವನಕಥನ.

ಪೂರಕ ಓದಿಗೆ
ನಧೀಂ ಧೀಂ ತನ ಹುಡುಗಿ ಭಾವನಾ ರಾವ್ ಎಲ್ಲಿ?
ಯೋಗರಾಜ ಭಟ್ಟರ ಗಾಳಿಪಟ ಭಾವನಾ ಕೈಗೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada