twitter
    For Quick Alerts
    ALLOW NOTIFICATIONS  
    For Daily Alerts

    ನಗರದಲ್ಲಿ ನಾರಾಯಣರ ಚಿಲಿಪಿಲಿ'

    By Staff
    |

    Pankaj
    ಎಸ್.ನಾರಾಯಣ್ ನಿರ್ದೇಶನದ 40ನೇ ಚಿತ್ರ ಹಾಗೂ ಅವರ ಸಂಸ್ಥೆಯ ನಿರ್ಮಾಣದ 15ನೇ ಚಿತ್ರ ಚೆಲುವಿನ ಚಿಲಿಪಿಲಿ'ಗೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

    ಬಣ್ಣಿಸಲಾಗದ ಸಂಭ್ರಮ, ಸ್ಪಂದನವನ್ನು ನಿರ್ದೇಶಕರು ಚಿಲಿಪಿಲಿ ಎಂದು ಅರ್ಥೈಸಿದ್ದಾರೆ. ಅ ಬಾಲ ವೃದ್ದಾರಾದಿಯಾಗಿ ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ರೀತಿಯ ಚಿಲಿಪಿಲಿ ಇದೇ ಇರುತ್ತದೆ. ಇದು ಭಾವನೆಗಳ ಭಾಷೆ. ಮಕ್ಕಳ ಮುಂದೆ ಚಾಕ್‌ಲೇಟ್ ಹಿಡಿದಾಗ ಅವರಲ್ಲಾಗುವ ಚಿಲಿಪಿಲಿಯೊಂದಾದರೆ, ಮಕ್ಕಳ, ಮೊಮಕ್ಕಳ ಏಳಿಗೆ ಕಂಡು ಹಿರಿಯರ ಮನದಲ್ಲಾಗುವ ಚಿಲಿಪಿಲಿ ಮತ್ತೊಂದು. ಪ್ರಸ್ತುತ ಚಿತ್ರದಲ್ಲಿ ನಾರಾಯಣ್ ಅವರು ಹದಿಹರೆಯದ ಹೃದಯಗಳ ಚಿಲಿಪಿಲಿಯನ್ನು ಚಿತ್ರಿಸುತ್ತಿದ್ದಾರೆ. ಚೆಲವು ಅಂದರೆ ಅದರಲ್ಲಿ ಏನೋ ಒಂದು ಚಂದವಿದೆ. ಇವೆರಡು ಸೇರಿ ಚೆಲುವಿನ ಚಿಲಿಪಿಲಿ'ಯಾಗಿದೆ

    ಚೈತ್ರದ ಚಂದ್ರಮ' ಚಿತ್ರದಲ್ಲಿ ತನ್ನ ಭಾವಪೂರ್ಣ ಅಭಿನಯದಿಂದ ಜನಮನ ಸೆಳೆದಿದ್ದ ಪಂಕಜ್ ಈ ಚಿತ್ರದ ನಾಯಕ. ಚಂದ್ರಮದಲ್ಲಿ ಪಂಕಜ್‌ಗೆ ರಾಷ್ಟ್ರಮಟ್ಟದ ಕ್ರಿಕೆಟ್ ಆಟಗಾರನಾಗುವ ಮಹತ್ವಾಕಾಂಕ್ಷಿ ಪಾತ್ರ. ನಿಜಜೀವನದಲ್ಲೂ ಕ್ರಿಕೆಟ್ ಪ್ರೇಮಿಯಾದ ಇವರು ಆ ಪಾತ್ರಕ್ಕೆ ಜೀವ ತುಂಬಿದ್ದರು.

    ಆದರೆ ಈ ಚಿತ್ರದಲ್ಲಿ ಪಂಕಜ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರೀತಿ, ಪ್ರೇಮದ ಸುತ್ತ ಹೆಣೆಯಲಾದ ಕಥೆಯುಳ್ಳ ಚಿತ್ರಗಳು ಸಾಕಷ್ಟು ಬಂದಿವೆ. ಆದರೆ ಚೆಲುವಿನ ಚಿಲಿಪಿಲಿ'ಯಲ್ಲಿ ಪ್ರೀತಿಗೆ ಹೊಸರೀತಿಯ ಭಾಷ್ಯ ಬರೆಯಲಾಗುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ನಾಯಕನ ಪೋಷಕರ ಪಾತ್ರವನ್ನು ಸುಮಲತಾ ಹಾಗೂ ಅನಂತನಾಗ್ ನಿರ್ವಹಿಸುತ್ತಿದ್ದಾರೆ. ಇದು ಇವರಿಬ್ಬರು ಒಟ್ಟಾಗಿ ನಟಿಸುತ್ತಿರುವ ಮೊದಲ ಚಿತ್ರ ಕೂಡ. ಇನ್ನೆರಡು ಪ್ರಮುಖ ಪಾತ್ರಗಳನ್ನು ದ್ವಾರಕೀಶ್ ಹಾಗೂ ಕೋಟೆ ಪ್ರಭಾಕರ್ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ರೂಪಸಿ ರೂಪಿಕಾ ಈ ಚಿತ್ರದ ನಾಯಕಿ.

    ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನು ನಾರಾಯಣ್ ಅವರೇ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇವರ ಸಂಗೀತ ನಿರ್ದೇಶನದಲ್ಲಿ ಆರು ಸುಮಧುರ ಗೀತೆಗಳು ಮೂಡಿಬಂದಿವೆ. ಈ ಗೀತೆಗಳನ್ನು ಸೋನು ನಿಗಮ್, ಶಂಕರ್ ಮಹದೇವನ್, ಶ್ರೇಯಾ ಘೋಷಾಲ್, ಕೈಲಾಸ್ ಹಾಗೂ ಚೇತನ್ ಹಾಡಿದ್ದಾರೆ. ಚಿತ್ರಕ್ಕೆ ಜಗದೀಶ್ ವಾಲಿ ಛಾಯಾಗ್ರಹಣ, ಪಿ.ಆರ್.ಸೌಂದರ್‌ರಾಜ್ ಸಂಕಲನವಿದೆ.

    (ದಟ್ಸ್ ಕನ್ನಡ ಸಿನಿವಾರ್ತೆ)

    ನಿರ್ದೇಶಕ ಎಸ್ ನಾರಾಯಣ್ ಕೊಡವೆದ್ದರು!

    Monday, May 11, 2009, 15:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X