»   » ಒಂದೇ ಏಟಿಗೆ ಎರಡು ಹಕ್ಕಿ ಹೊಡೆದ 'ಶಕ್ತಿ' ರಾಮು

ಒಂದೇ ಏಟಿಗೆ ಎರಡು ಹಕ್ಕಿ ಹೊಡೆದ 'ಶಕ್ತಿ' ರಾಮು

Posted By:
Subscribe to Filmibeat Kannada

ಕೋಟಿ ಬಜೆಟ್ ನಿರ್ಮಾಪಕ ಎಂದೇ ಖ್ಯಾತರಾಗಿರುವ ರಾಮು ಒಂದೇ ಏಟಿಗೆ ಎರಡು ಹಕ್ಕಿ ಹೊಡೆದಿದ್ದಾರೆ. ತಮ್ಮ ನಿರ್ಮಾಣದ 'ಶಕ್ತಿ' ಚಿತ್ರ ಅತ್ತ ಕನಸಿನ ರಾಣಿ ಮಾಲಾಶ್ರೀ ಅವರಿಗೂ ಇತ್ತ ರಾಮು ಅವರಿಗೂ ಹೊಸ ಉತ್ಸಾ ಹ ತುಂಬಿದೆಯಂತೆ.

ಹಲವು ಸೋಲುಗಳಿಂದ ಈ ತಾರಾ ದಂಪತಿಗಳು ಕಂಗೆಟ್ಟಿದ್ದರು. 'ಶಕ್ತಿ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಚಿತ್ರ ಇಬ್ಬರಿಗೂ ನೂತನ ಉತ್ಸಾಹವನ್ನು ಕೊಟ್ಟಿದೆ. ಕಳೆದ ಶುಕ್ರವಾರ ಬಿಡುಗಡೆಯಾದ 'ಶಕ್ತಿ' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದೇ ಇದಕ್ಕೆ ಕಾರಣ.

ಭಾನುವಾರ (ಜ.8) ಮಾಲಾಶ್ರೀ ಹಾಗೂ ರಾಮು ಇಬ್ಬರೂ ಜೊತೆಯಾಗಿ ಕಪಾಲಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಚಿತ್ರವನ್ನು ವೀಕ್ಷಿಸಿದರು. ಪ್ರೇಕ್ಷಕರಿಂದ ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗೆ ಮೂಕವಿಸ್ಮಿತರಾದರು. ಈ ಸಂದರ್ಭದಲ್ಲಿ ನಟ ರವಿಶಂಕರ್ ಕೂಡ ಉಪಸ್ಥಿತರಿದ್ದರು.

ಈ ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿರುವುದನ್ನು ಕಂಡು ನಿರ್ದೇಶಕರೊಬ್ಬರು ವಿಭಿನ್ನ ಕತೆಯೊಂದಿಗೆ ಮಾಲಾಶ್ರೀ ಕಾಲ್‌ಶೀಟ್‌ ಕೇಳಿದ್ದಾರಂತೆ. 'ಶಕ್ತಿ' ಚಿತ್ರ ಅರ್ಧ ಸೆಂಚುರಿ ಬಾರಿಸುವುದಕ್ಕೂ ಮುನ್ನ ಮಾಲಾಶ್ರೀ ಮತ್ತೊಂದು ಆಕ್ಷನ್ ಪ್ರಧಾನ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ ಎನ್ನುತ್ತವೆ ಗಾಂಧಿನಗರ ಮೂಲಗಳು. (ಏಜೆನ್ಸೀಸ್)

English summary
Action queen starrer Shakti has opened to a good response in Bangalore. Malashri, known as Lady Amithabh in the Kannada film industry, is the saving grace of 'Shakti', produced by her husband and top line producer Ramu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada