»   » ಡಾ.ವಿಷ್ಣುವರ್ಧನ್ ಅಭಿಮಾನಿಯಿಂದ ನಟ ಜಗ್ಗೇಶ್ ಗೆ 11 ಖಡಕ್ ಪ್ರಶ್ನೆಗಳು.!

ಡಾ.ವಿಷ್ಣುವರ್ಧನ್ ಅಭಿಮಾನಿಯಿಂದ ನಟ ಜಗ್ಗೇಶ್ ಗೆ 11 ಖಡಕ್ ಪ್ರಶ್ನೆಗಳು.!

By: ಹರಾ
Subscribe to Filmibeat Kannada

ನಾಲಿಗೆ ಹಾಗೂ ಮನಸ್ಸು ಮಧ್ಯೆ ಫಿಲ್ಟರ್ ಇಲ್ಲದೆ, ಅನಿಸಿದ್ದನ್ನ ನೇರವಾಗಿ ಹೇಳುವುದರಲ್ಲಿ ನಮ್ಮ ಸ್ಯಾಂಡಲ್ ವುಡ್ ನಟ ಜಗ್ಗೇಶ್ ಎತ್ತಿದ ಕೈ. ಇದೇ ಕಾರಣಕ್ಕೆ ನಟ ಜಗ್ಗೇಶ್ ಹಲವು ಬಾರಿ ಸದ್ದು-ಸುದ್ದಿ ಮಾಡಿದ್ದಾರೆ.

ಮೊನ್ನೆಯಷ್ಟೇ, 'ನಾಗರಹಾವು' ಚಿತ್ರದ ಪ್ರಚಾರ ಹಾಗೂ ವಿಷ್ಣು ಸ್ಮಾರಕದ ಕುರಿತಾಗಿ ನಟ ಜಗ್ಗೇಶ್ ಒಂದು ಟ್ವೀಟ್ ಮಾಡಿದ್ದರು. ಜಗ್ಗೇಶ್ ರವರ ಮಾತಿನಲ್ಲಿ ಉತ್ತಮ ಉದ್ದೇಶ ಇದೆ. ಆದರೂ, ವಿಷ್ಣು ಅಭಿಮಾನಿಗಳು ಮಾತ್ರ ನಟ ಜಗ್ಗೇಶ್ ಮೇಲೆ ಮುನಿಸಿಕೊಂಡಿದ್ದಾರೆ.

ನವರಸ ನಾಯಕ ಜಗ್ಗೇಶ್ ವಿರುದ್ಧ ಸಿಡಿಮಿಡಿಗೊಂಡ ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆದಿದ್ದಾರೆ. [ನಟ ಜಗ್ಗೇಶ್ ಗೆ ವಿಷ್ಣು ಅಭಿಮಾನಿ ಬರೆದಿರುವ ಬಹಿರಂಗ ಪತ್ರದಲ್ಲಿ ಏನಿದೆ?]

ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ನಟ ಜಗ್ಗೇಶ್ ವಿರುದ್ಧ ತೊಡೆ ತಟ್ಟಿ ನಿಂತಿರುವ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಪೈಕಿ ಮೀಡಿಯಾ ಜರ್ನಲಿಸ್ಟ್ ಕೂಡ ಆಗಿರುವ ಜನಾರ್ಧನ ರಾವ್ ಸಾಳಂಕೆ, ನಟ ಜಗ್ಗೇಶ್ ಗೆ 11 ಖಡಕ್ ಪ್ರಶ್ನೆಗಳನ್ನ ಕೇಳಿದ್ದಾರೆ. ಮುಂದೆ ಓದಿ....

ನಟ ಜಗ್ಗೇಶ್ ಗೆ ಖಡಕ್ ಪ್ರಶ್ನೆಗಳು

ನಟ ಜಗ್ಗೇಶ್ ವಿರುದ್ಧ ಕೋಪಗೊಂಡಿರುವ ವಿಷ್ಣು ಅಭಿಮಾನಿ ಜನಾರ್ಧನ ರಾವ್ ಸಾಳಂಕೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ 11 ಖಡಕ್ ಪ್ರಶ್ನೆಗಳನ್ನ ನಟ ಜಗ್ಗೇಶ್ ಮುಂದೆ ಇಟ್ಟಿದ್ದಾರೆ. ಆ ಎಲ್ಲಾ ಪ್ರಶ್ನೆಗಳನ್ನು ಯಥಾವತ್ತಾಗಿ ಇಲ್ಲಿ ಓದಿರಿ, ಮುಂದಿನ ಸ್ಲೈಡ್ ಗಳಲ್ಲಿ....

ಮತ್ತೊಂದು ಅರ್ಥ-ರೂಪ ಕೊಡಬೇಡಿ.!

''ಸಿನಿಮಾದವರು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರನ್ನು ಮತ್ತೆ ಬೆಳ್ಳಿಪರದೆ ಮೇಲೆ ವಿಭಿನ್ನವಾಗಿ ತರುವ ಸಾಹಸ ಮಾಡುತ್ತಿರುವುದು ಸಂತೋಷದ ವಿಷಯ. ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಅಷ್ಟೊಂದು ಸಮಂಜಸವಲ್ಲ. ನೋ ಡೌಟ್ ಸಿನಿಮಾ ಉದ್ಯಮವೇ ಒಂದು ವ್ಯವಹಾರ. ಎಲ್ಲರೂ ನೇಮ್ ಮತ್ತು ಫೇಮ್ ಗೋಸ್ಕರ ಉದ್ಯಮದಲ್ಲಿ ಬದುಕುತ್ತಾರೆ. ಚಿತ್ರರಂಗಕ್ಕಾಗಿ ಜೀವ ಮುಡಿಪಾಗಿಡುವ ಕಲಾವಿದರನ್ನು ದುರ್ಬೀನು ಹಾಕಿ ಹುಡುಕಬೇಕಷ್ಟೆ. VHR ತಂತ್ರಜ್ಞಾನದಲ್ಲಿ ವಿಷ್ಣು ಅವರನ್ನು ಮತ್ತೊಮ್ಮೆ ಕನ್ನಡಿಗರಿಗಾಗಿ ಮಾಡುತ್ತಿರುವ ಸಾಹಸಕ್ಕೆ ಕೈಜೋಡಿಸಿ. ಆದರೆ ಅದಕ್ಕೆ ಮತ್ತೊಂದು ರೂಪ ಅಥವಾ ಅರ್ಥ ಕೊಡಬೇಡಿ'' - ಜನಾರ್ಧನ ರಾವ್ ಸಾಳಂಕೆ

ಪ್ರಶ್ನೆಗಳಿಗೆ ಉತ್ತರಿಸಿ.!

''ತಾವು 'ನಾಗರಹಾವು' ಚಿತ್ರದ ಬಗ್ಗೆ ನಿಮ್ಮ ಟ್ವಿಟ್ಟರ್ ನಲ್ಲಿ 'ತೆಲುಗು ಬಿಡ್ಡ' ಪ್ರಸ್ತಾವ ಮಾಡಿದ್ದೀರಿ. ದಯವಿಟ್ಟು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.....'' - ಜನಾರ್ಧನ ರಾವ್ ಸಾಳಂಕೆ

ಪ್ರಶ್ನೆ ನಂಬರ್ 1

''ಜಗ್ಗೇಶ್ ಅವರೇ ತಾವು ಉದ್ಯಮಕ್ಕೆ ಬಂದು ಸುಮಾರು 25 ವರ್ಷ ಪೂರೈಸಿದ್ದೀರಿ. ತಾವು ನಿಮ್ಮ ಚಿತ್ರಗಳಲ್ಲಿ ಬೇರೆ ನಟರ ಬಗ್ಗೆ ಹಾಡಿ ಹೊಗಳಿದ್ದೀರಿ. ಬಹಳ ಸಂತೋಷ. ಆದರೆ ಎಂದಾದರೂ ತಾವು ಸಾಹಸಸಿಂಹ ಡಾ.ವಿಷ್ಣುವರ್ಧನ್ ಪರವಾಗಿ ಮಾತನಾಡಿದ್ದೀರಾ? ಮುನಿಯಮ್ಮನ ಜೋಪಡಿಯ ಬಗ್ಗೆ ಹೇಳುತ್ತಾ ಬಂದುಬಿಟ್ಟಿರಿ ಹೊರತು ವಿಷ್ಣು ಬಗ್ಗೆ ಚಕಾರ ಎತ್ತಲಿಲ್ಲ'' - ಜನಾರ್ಧನ ರಾವ್ ಸಾಳಂಕೆ [ಹುಚ್ಚ ವೆಂಕಟ್ ಅಭಿಮಾನಿಯಿಂದ ಸುದೀಪ್ ಗೆ ಖಡಕ್ ಪ್ರಶ್ನೆ]

ಪ್ರಶ್ನೆ ನಂಬರ್ 2

''ತಾವು ವಿಷ್ಣು ಅವರನ್ನು ಖಾಸಗಿ ಕಾರ್ಯಕ್ರಮದಲ್ಲಿ ಎಷ್ಟು ಬಾರಿ ವೇದಿಕೆ ಹಂಚಿಕೊಂಡಿದ್ದೀರಿ? (ಸಾಂದರ್ಭಿಕವಾಗಿ ಒಂದೆರಡು ಬಾರಿ ಇರಬಹುದು) ಇಷ್ಟು ವರ್ಷ ನಿಮಗೆ ಭೇಟಿ ಆಗುವ ಅವಕಾಶ/ಸಂದರ್ಭ ಬಂದಿರಲಿಲ್ಲವೇ?'' - ಜನಾರ್ಧನ ರಾವ್ ಸಾಳಂಕೆ [ವಿಷ್ಣುವರ್ಧನ್ ಹೆಸರಲ್ಲಿ ಪ್ರಚಾರ.! ನಟ ಜಗ್ಗೇಶ್ ಹೇಳಿದ ಮಾತೇನು.?]

ಪ್ರಶ್ನೆ ನಂಬರ್ 3

''ಡಾ.ವಿಷ್ಣು ಅವರಿಗೆ ತೊಂದರೆಯಾದಾಗ ತಾವು ಅವರ ಪರವಾಗಿ ಎಂದೂ ಸಹ ಮಾತನಾಡಿದ್ದು ನಾವು ನೋಡಿಲ್ಲ?'' - ಜನಾರ್ಧನ ರಾವ್ ಸಾಳಂಕೆ

ಪ್ರಶ್ನೆ ನಂಬರ್ 4

''ದಾದಾ ಅವರ ಕೊನೆಯ ದಿನಗಳಲ್ಲಿ ಅವರು ತಮ್ಮ ಜೊತೆಗೆ ಒಂದು ಚಿತ್ರದಲ್ಲಿ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಅದು ಅವರು ನಿಮ್ಮ ಮೇಲೆ ಇಟ್ಟಿದ್ದ ಪ್ರೀತಿಗಾಗಿ. ಈ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದು ನಿಜವಾದ ಸ್ನೇಹ ಎಂಬುದು ಮರೆಯದಿರಿ'' - ಜನಾರ್ಧನ ರಾವ್ ಸಾಳಂಕೆ ['ನಾಗರಹಾವು' ಚಿತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ]

ಪ್ರಶ್ನೆ ನಂಬರ್ 5

''ನಿಮ್ಮ ತಮ್ಮ ನಟ ಕೋಮಲ್ ಅವರಿಗೆ ದಾದಾ ಅವರು 'ವರ್ಷ' ಮತ್ತು 'ಆಪ್ತರಕ್ಷಕ' ಚಿತ್ರದಲ್ಲಿ ಪೋಷಕ ನಟನ ಮಟ್ಟಕ್ಕೆ ಒಳ್ಳೆಯ ಪಾತ್ರ ಕೊಡಿಸಿದ್ದರು ಮತ್ತು ಅವರನ್ನು ವಿಭಿನ್ನವಾಗಿ ತೋರಿಸಿದ್ದರು ಎಂಬುದು ಮರೆಯದಿರಿ. ಅದಾದ ನಂತರ ಅವರಿಗೆ ಅವಕಾಶಗಳು ಹರಿದು ಬಂದಿದ್ದು ಸುಳ್ಳಲ್ಲ. ವಿಷ್ಣು ಮನಸ್ಸು ಮಾಡಿದ್ದರೆ ಈ ಅವಕಾಶ ಬೇರೆಯವರಿಗೆ ನೀಡಬಹುದಿತ್ತು. ಈ ಒಂದು ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವೇ.?'' - ಜನಾರ್ಧನ ರಾವ್ ಸಾಳಂಕೆ

ಪ್ರಶ್ನೆ ನಂಬರ್ 6

''ತಾವು ಸಿನಿಮಾ ರಂಗದಲ್ಲಿ ಇದ್ದುಕೊಂಡು ರಾಜಕೀಯಕ್ಕೂ ಪದಾರ್ಪಣೆ ಮಾಡಿದ್ದೀರಿ. ಆಗಲಾದರೂ ವಿಷ್ಣು ಅವರಿಗೆ ಸಿಗಬೇಕಿದ್ದ ಸ್ಥಾನ ಮಾನಗಳ ಬಗ್ಗೆ ಧ್ವನಿ ಎತ್ತುವ ಮನಸ್ಸು ಬರಲಿಲ್ಲವೇ?'' - ಜನಾರ್ಧನ ರಾವ್ ಸಾಳಂಕೆ

ಪ್ರಶ್ನೆ ನಂಬರ್ 7

''ನಿಮ್ಮ ಅನುಪಸ್ಥಿತಿಯಲ್ಲಿ ವಿಷ್ಣು ಅವರು ನಿಮ್ಮ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ ಎಂಬುದು ಮರೆಯಬಾರದು'' - ಜನಾರ್ಧನ ರಾವ್ ಸಾಳಂಕೆ

ಪ್ರಶ್ನೆ ನಂಬರ್ 8

''ತಾವು ನಟರಾಗುವ ಮೊದಲು ಬೇರೆ ನಟರ ಅಭಿಮಾನಿ ಸಂಘದಲ್ಲಿ ಗುರುತಿಸಿಕೊಂಡಿದ್ದೀರಿ ಎಂಬುದು ಅಭಿಮಾನಿಗಳಿಗೆ ತಿಳಿದ ವಿಷಯ. ದಾದಾ ಅವರ ಪ್ರೀತಿ, ವಿಶ್ವಾಸ, ದಾನ, ಧರ್ಮ, ನಾಡು ನುಡಿಗಾಗಿ ಹೋರಾಟ ನಿಮಗೆ ಕಾಣಿಸಲಿಲ್ಲವೇ?'' - ಜನಾರ್ಧನ ರಾವ್ ಸಾಳಂಕೆ

ಪ್ರಶ್ನೆ ನಂಬರ್ 9

''ವಿಷ್ಣು ಅವರು ಕೇವಲ ಸಿನಿಮಾ ರಂಗದಲ್ಲಿ ಹೋರಾಟ ಮಾಡಲಿಲ್ಲ. ಅವರ ಜೀವನವೇ ಒಂದು ಹೋರಾಟ ಎಂಬುದು ಮರೆಯದಿರಿ'' - ಜನಾರ್ಧನ ರಾವ್ ಸಾಳಂಕೆ

ಪ್ರಶ್ನೆ ನಂಬರ್ 10

''ಇನ್ನು ಮುಂದೆಯಾದರೂ ಕನ್ನಡ ಚಿತ್ರರಂಗದ 'ತಮ್ಮ' ಎಂದೂ ಗುರುತಿಸಿಕೊಂಡಿರುವ ಡಾ.ವಿಷ್ಣುವರ್ಧನ್ ಅವರ ಜೀವನ ಸಾಧನೆ ಬಗ್ಗೆ ಗಮನ ಹರಿಸಿ'' - ಜನಾರ್ಧನ ರಾವ್ ಸಾಳಂಕೆ

ಪ್ರಶ್ನೆ ನಂಬರ್ 11

''ದಾದಾ ಅವರು ಎಲ್ಲರೊಂದಿಗೆ ಅಭಿನಯಿಸಿದ್ದಾರೆ. ಆದರೆ ನಿಮ್ಮೊಂದಿಗೆ ಏಕೆ ಅಭಿನಯಿಸಲಿಲ್ಲ ಎಂದು ಎಂದಾದರೂ ಯೋಚಿಸಿದ್ದೀರಾ? ಇರಲಿ, ನಿಮಗೆ ಈಗಲಾದರೂ ಚಿತ್ರರಂಗದ ಯಜಮಾನ ಡಾ.ವಿಷ್ಣುವರ್ಧನ್ ಅವರ ಬಗ್ಗೆ ಏನಾದರು ಮಾಡುವ ಮನಸ್ಸಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಸ್ಮಾರಕಕ್ಕೆ ತೆರಳಿ ಅಣ್ಣನಿಗೋಸ್ಕರ ಹೋರಾಡಿ. ಸರ್ಕಾರಕ್ಕೆ ಮನವಿ ಸಲ್ಲಿಸಿ ಇದು ನಮ್ಮ ಕಳಕಳಿಯ ಮನವಿ'' - ಜನಾರ್ಧನ ರಾವ್ ಸಾಳಂಕೆ

ಉತ್ತರ ಕೊಡುತ್ತಾರಾ ಜಗ್ಗೇಶ್?

ವಿಷ್ಣು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ನಟ ಜಗ್ಗೇಶ್, ವಿವಾದಕ್ಕೆ ಶುಭಂ ಹಾಡಲು ಸೂಕ್ತ ಉತ್ತರ ನೀಡುತ್ತಾರಾ ಎಂದು ಕಾದು ನೋಡಬೇಕಷ್ಟೆ.

English summary
Janardhana Rao Salanke, Media Journalist and a hardcore fan of Dr.Vishnuvardhan has asked 11 questions for Kannada Actor Jaggesh based on his tweet regarding Kannada Celebrities taking selfie with Dr.Vishnuvardhan's 3D Stand to promote 'Naagarahaavu' Film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada