»   » ಕನ್ನಡದಲ್ಲಿ ನಾನಿನ್ನೂ ಪಕ್ಕದ್ಮನೆ ಹುಡುಗಿ: ರಮ್ಯಾ

ಕನ್ನಡದಲ್ಲಿ ನಾನಿನ್ನೂ ಪಕ್ಕದ್ಮನೆ ಹುಡುಗಿ: ರಮ್ಯಾ

Posted By:
Subscribe to Filmibeat Kannada

ಬಹಳಷ್ಟು ಸಿನಿಮಾ ತಾರೆಗಳು ತಾವು ಸಖತ್ ಹಾಟ್ ಆಗಿ ಕಾಣಬೇಕು ಎಂದು ಹಂಬಲಿಸುತ್ತಾರೆ. ಆದರೆ ನಟಿ ರಮ್ಯಾರಿಗೆ ಮಾತ್ರ ಇನ್ನೂ ಪಕ್ಕದ ಮನೆ ಹುಡುಗಿ.ಗ್ಲಾಮರ್ ಗೊಂಬೆ ಅನ್ನಿಸಿಕೊಳ್ಳಲು ಬಿಗುಮಾನ ತೋರಿದ್ದಾರೆ. ಯಾರಾದರೂ ನೀವು ಸಖತ್ ಗ್ಲಾಮರಸ್ ಆಗಿ ಹಾಗೂ ಹಾಟ್ ಆಗಿ ಕಾಣ್ತೀರಾ ಅಂದ್ರೆ ನನಗೇನೋ ಒಂಥರಾ ಇರುಸು ಮುರುಸು ಎಂದಿದ್ದಾರೆ ರಮ್ಯಾ.

ಪ್ರೇಕ್ಷಕರು ನನ್ನನ್ನು ಗ್ಲಾಮರ್ ಗೊಂಬೆ ಎಂದು ಗುರುತಿಸುವುದು ನನಗೆ ಇಷ್ಟವಿಲ್ಲ. ಯಾರಾದರೂ ನನ್ನ ಪಾತ್ರವನ್ನ್ನು ವಿಮರ್ಶಿಸಿದರೆ ಅವರನ್ನು ಅಭಿನಂದಿಸುತ್ತೇನೆ. ನನ್ನ ಅಭಿಮಾನಿಗಳಿಂದ ನಾನು ನಿರೀಕ್ಷಿಸುವುದೂ ಇದನ್ನೆ. ತಮಿಳು ಚಿತ್ರದಲ್ಲಿ ತೀರಾ ಬಟ್ಟೆಯಿಲ್ಲದ ಪಾತ್ರಗಳಲ್ಲಿ ಕಾಣಿಸಿದ್ದೀರಾ?ಅಂಥ ಕೇಳಿದರೆ.

ನೋಡಿ ಅದು ತಮಿಳು ಚಿತ್ರ. ಆದರೆ ಕನ್ನಡದಲ್ಲಿ ನಾನು ಇಂದಿಗೂ ಪಕ್ಕದಮನೆ ಹುಡುಗಿ ಎಂದೇ ಗುರುತಿಸಿಕೊಂಡಿದ್ದೀನಿ ಎಂದು ರಮ್ಯಾ ಜಾಣ ಉತ್ತರ ನೀಡಿದ್ದಾರೆ. ನಯನತಾರಾ, ತ್ರಿಷಾ ಹಾಗೂ ರಮ್ಯಾ ನಡುವೆ ಉತ್ತಮ ಗೆಳೆತನವಿದೆಯಂತೆ. ಸಮಯ ಸಿಕ್ಕಾಗ ಸಾಕಷ್ಟು ವೈಯಕ್ತಿಕ ವಿಷಯಗಳನ್ನು ಮಾತನಾಡಿಕೊಳ್ಳುತ್ತೇವೆ ಎಂದು ರಮ್ಯಾ ಹೇಳಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada