For Quick Alerts
  ALLOW NOTIFICATIONS  
  For Daily Alerts

  'ಮೊದಲ ಸಲ' ಯಶ್ ಗೆ ಜತೆಯಾದ ಮಲ್ಲು ಭಾಮಾ

  |

  ಕರ್ನಾಟಕ ಟಾಕೀಸ್ ಲಾಂಛನದಡಿಯಲ್ಲಿ ಯೋಗೀಶ್‌ನಾರಾಯಣ್ ಹಾಗೂ ಮಲ್ಲಿಕಾರ್ಜುನ್ ಗದಗ ನಿರ್ಮಿಸುತ್ತಿರುವ 'ಮೊದಲಸಲ' ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುತ್ತಿದೆ. ಮಂಜಿನೂರಿನಲ್ಲಿ 25 ದಿನಗಳ ಚಿತ್ರೀಕರಣ ನಡೆಯಲಿದ್ದು, ಕೆಲವು ದೃಶ್ಯ ಹಾಗೂ ಎರಡು ಗೀತೆಗಳು ಈ ಭಾಗದಲ್ಲಿ ಚಿತ್ರೀಕರಣಗೊಳಲಿದೆ ಎಂದು ನಿರ್ದೇಶಕ ಪುರುಷೋತ್ತಮ ತಿಳಿಸಿದ್ದಾರೆ.

  ನಾಯಕ ಯಶ್, ಭಾಮಾ, ರಂಗಾಯಣರಘು, ಅವಿನಾಶ್, ಶರಣ್, ವಿನಯಾಪ್ರಸಾದ್, ಮೈಸೂರು ದಯಾನಂದ್ ಮುಂತಾದ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಇದಾದ ನಂತರ ಚಿತ್ರತಂಡ ಹಾಡಿನ ಚಿತ್ರೀಕರಣಕ್ಕಾಗಿ ಕೇರಳದ ಚಾಲ್‌ಕುಡಿ ಜಲಪಾತಕ್ಕೆ ತೆರಳಲಿದೆ.

  ಕೇರಳದ ಬೆಡಗಿ ಭಾಮಾ ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿರುವ ಭಾಮಾ ಈವರೆಗೂ ಒಟ್ಟು 8ಚಿತ್ರಗಳಲ್ಲಿ ಅಭಿನಯಸಿದ್ದಾರೆ. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವೆಂಕಟೇಶ್, ಜಗದೀಶ್ ಕಾಳಗಿ, ಮಯೂರ್ ಮತ್ತು ಶ್ರೀಧರ್ ಪಟೇಲ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ.

  ಎಚ್.ಸಿ.ವೇಣು ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ, ದಿನೇಶ್ ಮಂಗಳೂರು ಕಲೆ ಹಾಗೂ ಶಶಿಧರ್ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರಕ್ಕೆ ಯಶ್, ಭಾಮಾ, ರಂಗಾಯಣ ರಘು, ಅವಿನಾಶ್, ಶರಣ್, ವಿನಯಾಪ್ರಸಾದ್, ಯೋಗೀಶ್‌ನಾರಾಯಣ್, ಮೈಸೂರು ದಯಾನಂದ್ ರಾಕೇಶ್, ಮಂಜು, ತಿಮ್ಮೇಗೌಡ ಮುಂತಾದವರ ತಾರಾಬಳಗವಿದೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X