»   » ನಮಿತಾಳ ಬೌಲಿಂಗ್‌ಗೆ ಕ್ರಿಕೆಟಿಗ ಶ್ರೀಶಾಂತ ಕ್ಲೀನ್ ಬೌಲ್ಡ್ !

ನಮಿತಾಳ ಬೌಲಿಂಗ್‌ಗೆ ಕ್ರಿಕೆಟಿಗ ಶ್ರೀಶಾಂತ ಕ್ಲೀನ್ ಬೌಲ್ಡ್ !

Posted By: Super Admin
Subscribe to Filmibeat Kannada
Namitha
ಚೆನ್ನೈ, ಅ.11 : ಆಗಿನ್ನೂ ಟ್ವೆಂಟಿ20 ಕ್ರಿಕೆಟ್ ಶುರುವಾಗಿರಲಿಲ್ಲ. ಏನಿದ್ದರೂ ಪ್ರಾಕ್ಟೀಸ್ ನಡೀತಿತ್ತಷ್ಟೆ. ಪ್ರಾಕ್ಟೀಸ್ ಮಾಡುವ ಸಲುವಾಗಿ ಶ್ರೀಶಾಂತ್ ಚೆನ್ನೈಗೆ ಬಂದಿದ್ದ. ಆಗ ನಮಿತಾಗೆ ಕ್ರಿಕೆಟ್ ಕಲಿಯ ಬೇಕು ಅನ್ನಿಸಿ ಶ್ರೀಶಾಂತನೊಂದಿಗೆ ಆ ಕುರಿತು ಕೇಳಿ ತಿಳಿದುಕೊಂಡಳು. ಆ ವಿವರಗಳು ಇಲ್ಲಿವೆ..

'ಹಾಯ್ ನಮಿತಾ! ಏನು ಇದಕ್ಕಿದ್ದಂತೆ ಕ್ರಿಕೆಟ್ ಮೇಲೆ ಆಸೆ?' ಎಂದ ಶ್ರೀಶಾಂತ್. 'ಚಿಕ್ಕವಳಿದ್ದಾಗಿಂದ ನನಗೆ ಕ್ರಿಕೆಟ್ಟೆಂದರೆ ಇಷ್ಟ. ನಾನು ನಾಲ್ಕನೆ ಕ್ಲಾಸಲ್ಲಿ ಓದುತ್ತಿದ್ದಾಗಲೇ ಕ್ರಿಕೆಟ್ ಆಡಿದ್ದೆ. ಆಗ ನನ್ನ ತಂದೆ ಬೌಲಿಂಗ್ ಮಾಡಿದ್ದರು. ಫಸ್ಟ್ ಬಾಲಲ್ಲೇ ಕ್ಲೀನ್ ಬೌಲ್ಡ್. ಅಂದಿನಿಂದ ಕ್ರಿಕೆಟ್ ಬಿಟ್ಟೆ. ಒಂದು ವೇಳೆ ಫಸ್ಟ್ ಬಾಲ್‌ನಲ್ಲಿ ಬೌಲ್ಡ್ ಆಗದೇ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಲೇಡಿ ಕ್ರಿಕೆಟರ್ ಆಗಿರುತ್ತಿದ್ದೆ.'

'ಒಳ್ಳೇದೆ ಆಯ್ತು ಬಿಡಿ. ಒಂದು ವೇಳೆ ನಿಮ್ಮ ತಂದೆ ನಿನ್ನನ್ನು ಬೌಲ್ಡ್ ಮಾಡ್ದೆ ಇದ್ದಿದ್ದರೆ ಒಳ್ಳೆ ಸುಂದರಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೆವು. ಇಷ್ಟಕ್ಕೂ ನೀವು ಕಲಿಯಬೇಕೆಂದಿರುವುದು ಬೌಲಿಂಗಾ, ಬ್ಯಾಟಿಂಗಾ?' ಎಂದ ಶ್ರೀಶಾಂತ. 'ಬೌಲಿಂಗೆಂದರೇನೆ ನನಗಿಷ್ಟ. ಕಪಿಲ್ ದೇವ್, ಆಂಬ್ರೋಸ್, ಇಮ್ರಾನ್ ಖಾನ್ ತರಹ ಬೌಲ್ ಮಾಡಬೇಕೆಂಬ ಆಸೆ. ಬ್ಯಾಟ್ಸ್‌ಮನ್ ಕ್ಲೀನ್ ಬೌಲ್ಡ್ ಆಗಬೇಕು ಅಷ್ಟೇ.'

'ನೀವು ಓಡಿ ಬರುತ್ತಿರುವುದನ್ನು ನೋಡಿಯೇ ಬ್ಯಾಟ್ಸ್‌ಮನ್ ಕ್ಲೀನ್ ಬೌಲ್ಡ್ ಆಗ್ತಾನಮ್ಮ' ಎಂದು ಹೇಳುತ್ತಾ ನಮ್ಮ ಶ್ರೀಶಾಂತ ಶಾನೇ ಕಷ್ಟಪಟ್ಟು ನಮಿತಾಗೆ ಬೌಲಿಂಗನ್ನೂ ಕಲಿಸಿದ. 'ನಿಮಗೆ ಇಷ್ಟವಾದ ಕ್ರಿಕೆಟರ್ ಯಾರು?' ಎಂದಿದ್ದಕ್ಕೆ 'ಕಪಿಲ್ ದೇವ್, ಬ್ರಿಯಾನ್ ಲಾರಾ' ಎಂದಳು.

'ಹೌದು ನಟನೆ ಅಂದ್ರೆ ನಿಮಗಿಷ್ಟಾನಾ?' ಎಂದಳು ಕಣ್ಣಲ್ಲಿ ಕಣ್ಣಿಟ್ಟು ಶ್ರೀಶಾಂತನೆಡೆಗೆ ನೋಡುತ್ತಾ ನಮಿತಾ. 'ನಟನೆ ಅಂದ್ರೆ ತುಂಬಾನೆ ಇಷ್ಟಾರಿ. ಏನಾದ್ರೂ ಚಾನ್ಸ್ ಇದ್ರೆ ಹೇಳಿ. ಆದ್ರೆ ನೀವೇ ಹೀರೋಯಿನ್ ಆಗ್ಬೇಕು' ಎಂದ ಶ್ರೀಶಾಂತನಿಗೆ ತಟ್ಟನೆ ಟ್ವೆಂಟಿ 20 ಮ್ಯಾಚ್ ನೆನಪಾಗಿ 'ಸಾರಿ ಈಗ ಟೈಮಿಲ್ಲ' ಎಂದ.

'ಓಕೆ. ನನ್ನಾಸೆಯೆಲ್ಲಾ ನಿಮ್ಮ ಟೀಮ್ ಮೇಲೆ ಇದೆ. ಮರೀಬ್ಯಾಡಿ.ಬೆಸ್ಟಾಫ್ ಲಕ್' ಎಂದು ಮಾರ್ಮಿಕವಾಗಿ ನಕ್ಕಳು ನಮಿತಾ. ಅಷ್ಟೋತ್ತಿಗಾಗಲೇ ಶ್ರೀಶಾಂತ ಕ್ಲೀನ್ ಬೌಲ್ಡ್ ಆಗಿದ್ದ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada