»   »  ನವ್ಯಾ ನಾಯರ್ ತೊಡೆ ಚಿವುಟಿದ ಪಡ್ಡೆ!

ನವ್ಯಾ ನಾಯರ್ ತೊಡೆ ಚಿವುಟಿದ ಪಡ್ಡೆ!

Subscribe to Filmibeat Kannada

ಕೇರಳದ ಚಿತ್ರನಟಿ ನವ್ಯಾ ನಾಯರ್ ತೊಡೆಗೆ ಅಭಿಮಾನಿಯೊಬ್ಬ ಚಿವುಟಿದ ಘಟನೆ ನಡೆದಿದೆ. ಮಂಗಳೂರಿನಲ್ಲಿ ಆಲೂಕಾಸ್ ಚಿನ್ನಾಭರಣ ಮಳಿಗೆ ಉದ್ಘಾಟನೆಗಾಗಿ ನವ್ಯಾ ಬಂದಿದ್ದರು. ಶನಿವಾರ(ಅ.10) ಮಂಗಳೂರಿನಲ್ಲಿ ನವ್ಯಾ ನಾಯರ್ ಸೇರಿದಂತೆ 'ದುನಿಯಾ' ರಶ್ಮಿ ಹಾಗೂ ರೂಪದರ್ಶಿ ಮೈತ್ರಿ ಸಹ ಬಂದಿದ್ದರು.

ತಮ್ಮ ನೆಚ್ಚಿನ ಚಿತ್ರ ನಟಿಯರನ್ನು ನೋಡಲು ಮಂಗಳೂರಿನ ಕೆ.ಎಸ್.ರಾವ್ ರಸ್ತೆ ಶನಿವಾರ ಜನಪ್ರವಾಹದಿಂದ ಗಿಜಿಗುಡುತ್ತಿತ್ತು. ಚಿತ್ರನಟಿಯರನ್ನು ಹತ್ತಿರದಿಂದ ನೋಡಲು ಪಡ್ಡೆ ಹುಡುಗರು ಮುನ್ನುಗ್ಗುತ್ತಿದ್ದರು. ಸ್ಥಳದಲ್ಲಿ ಪೊಲೀಸರ ಭದ್ರತೆಯನ್ನು ಕಲ್ಪಿಸಿರಲಿಲ್ಲ.ಪರಿಸ್ಥಿತಿಯ ಲಾಭ ಪಡೆದ ಪಡ್ಡೆಗಳು ಚಿತ್ರ ನಟಿಯರನ್ನು ನೋಡಲು ಮುಗಿಬೀಳುತ್ತಿದ್ದರು.

ನೂಕು ನುಗ್ಗಲಿನ ಲಾಭ ಪಡೆದ ಕಿಡಿಗೇಡಿಯೊಬ್ಬ ನವ್ಯಾ ನಾಯರ್ ಅವರ ತೊಡೆ ಚಿವುಟಿದ್ದಾನೆ. ಇದರಿಂದ ಕಸಿವಿಸಿಗೊಂಡ ನವ್ಯಾ ನಾಯರ್ ಕ್ಷಣಕಾಲ ಅವಾಕ್ಕಾದರು. ನೂಕು ನುಗ್ಗಲಿನಲ್ಲಿ ತೊಡೆ ಚಿವುಟಿದ ಕಿಡಿಗೇಡಿ ಯಾರೆಂಬುದು ಗೊತ್ತಾಗಿಲ್ಲ. ಒಟ್ಟಿನಲ್ಲಿ ನವ್ಯಾ ಹೇಗೋ ಸಾವರಿಸಿಕೊಂಡು ಮಳಿಗೆ ಒಳಗೆ ನಡೆದರು. ಈ ಘಟನೆಯಿಂದ ನವ್ಯಾ ಕಸಿವಿಸಿಗೊಂಡರು.

ಚಿತ್ರ ನಟಿಯರಿಗೆ ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅಭಿನಾಯಿಯೊಬ್ಬ ಬಾಲಿವುಡ್ ನಟಿ ಬಿಪಾಶಾ ಬಸು ಎದೆಗೇ ಕೈಹಾಕಿ ಪರಾರಿಯಾಗಿದ್ದ. ಚಿತ್ರೀಕರಣದಲ್ಲಿ ತಮಿಳು ಚಿತ್ರ ನಟಿ ಮೌಶ್ಮಿ ಉದೇಶಿ ತುಟಿಗೆ ಅಭಿಮಾನಿಯೊಬ್ಬ ಚುಂಬಿಸಿ ರಕ್ತಬರಿಸಿದ್ದ. ನಂತರ ಮೌಶ್ಮಿ ಚುಂಬಿಸಿದವನಿಗೆ ಕಪಾಳ ಮೋಕ್ಷ ಮಾಡಿ ಪ್ರಜ್ಞೆ ತಪ್ಪುವಂತೆ ಹೊಡೆದಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada