For Quick Alerts
  ALLOW NOTIFICATIONS  
  For Daily Alerts

  ನಿಧಿ ಸುಬ್ಬಯ್ಯ'ಬಿಕಿನಿ'ಗೆ ನಟ ಕೋಮಲ್ ತಿರುಗೇಟು

  |

  ಕಾಮಿಡಿ ಕಿಂಗ್ ಕೋಮಲ್ ಕನ್ನಡದ ಪಂಚರಂಗಿ ನಿಧಿ ಮೇಲೆ ಹರಿಹಾಯ್ದಿದ್ದಾರೆ. ಕಾರಣ ಅದೇ ಸಿಸಿಎಲ್ 'ಬಿಕಿನಿ ಕ್ಯಾಲೆಂಡರ್. ಒಂದು ಕಾಲದಲ್ಲಿ ಕೋಮಲ್ ಜೊತೆ 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಚಿತ್ರದಲ್ಲಿ ನಟಿಸಿದ್ದ ನಿಧಿ ಸುಬ್ಬಯ್ಯ, ಆ ಚಿತ್ರದಲ್ಲಿ ಅವರಿಗೆ ಹಾಕಲಾಗಿದ್ದ ಬಿಕಿನಿಯಂತಹ ಡ್ರೆಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ತಮ್ಮ ಹೆಸರು 'ಚಿಂದಿ'ಯಾಯಿತೆಂದು ಅವಲತ್ತುಕೊಂಡಿದ್ದರು.

  ಮೊದಲ ಬಾರಿಗೆ ಕ್ಯಾಮರಾ ಎದುರು ಆ ರೀತಿಯ ಡ್ರೆಸ್ ಹಾಕಿದ್ದ ನಿಧಿ, ತಮಗೆ ಅದು ಯಾವ ರೀತಿಯಲ್ಲಿ ಚಿತ್ರಕ್ಕೆ ಅಗತ್ಯ ಎಂಬುದೂ ಆ ಸಂದರ್ಭದಲ್ಲಿ ಗೊತ್ತಿರಲಿಲ್ಲ. ಅನಗತ್ಯವಾಗಿ ತಮಗೆ ಆ ಡ್ರೆಸ್ ತೊಡಿಸಿ ತಮ್ಮ ಇಮೇಜ್ 'ಡ್ಯಾಮೇಜ್' ಮಾಡಿದ್ದಾರೆ ಎಂದು ದೂರಿದ್ದರು. ಕೋಮಲ್ ಸೇರಿ ಇಡೀ ಚಿತ್ರತಂಡದ ಮೇಲೆ ಗೂಬೆ ಕೂಡಿಸಿದ್ದರು.

  ಇದೀಗ ಕೋಮಲ್ ಸರದಿ. ಆಗ ಕೊಡಬೇಕಾಗಿದ್ದ ಸಂಭಾವನೆ ಕೊಟ್ಟರೂ ಬಿಕಿನಿಯಂತಹ ಡ್ರೆಸ್ ಬಗ್ಗೆ, ತಮ್ಮ ಇಮೇಜ್ ಹಾಳಾಯಿತೆಂದು ಬಾಯಿಗೆ ಬಂದಂತೆ ಮಾತನಾಡಿದ್ದ ನಿಧಿ. ಈಗ ಗೋವಾಕ್ಕೆ ಹೋಗಿ ಸಿನಿಮಾಕ್ಕೆ ಸಂಬಂಧವೇ ಇರದ ಸಿಸಿಎಲ್ ಕ್ಯಾಲೆಂಡರ್ ಗಾಗಿ ಬಿಕಿನಿಯಲ್ಲಿ ಫೋಟೋಶೂಟ್ ಮುಗಿಸಿಕೊಂಡು ಬಂದಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ?" ಎಂದು ಪ್ರಶ್ನಿಸಿದ್ದಾರೆ.

  ಆದರೆ ಇದಕ್ಕೆ ಉತ್ತರಿಸಲು ನಿಧಿ ಇಲ್ಲಿಲ್ಲ. ಬಾಲಿವುಡ್ ಕಡೆ ಪ್ರಯಾಣ ಹೊರಟಿರುವ ನಿಧಿಗೆ ಪ್ರಶ್ನೆ ತಲುಪಿ, ಅದು ಅರ್ಥವಾಗಿ ಆಕೆಯಿಂದ ಉತ್ತರ ಬರುವ ಹೊತ್ತಿಗೆ ಇನ್ನೇನು ಆಗಿರುತ್ತೋ ಬಲ್ಲವರಾರು? ಆದರೆ, ಕಾಲ ಬದಲಾದಂತೆ ಜನರೂ ಬದಲಾಗುತ್ತಾರೆ, ಹೇಳಿಕೆಯೂ ಬದಲಾಗುತ್ತದೆ ಎಂಬುದು ಕೋಮಲ್ ಗೆ ಗೊತ್ತಿಲ್ಲದ ವಿಷಯವೇನಲ್ಲ. (ಒನ್ ಇಂಡಿಯಾ ಕನ್ನಡ)

  English summary
  Actor Komal Kumar asking question that Nidhi Subbaiah's Bikini Photo in CCL Calender. But, at his earlier film ' chamkaysi Chindhi Udaysi', the same Nidhi got angry for offered dress like Bikini. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X