For Quick Alerts
  ALLOW NOTIFICATIONS  
  For Daily Alerts

  ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಯೋಗೇಶ್

  |

  ಲೂಸ್ ಮಾದ ಯೋಗೇಶ್ ಬಂಗಾರಿ ಮುಗಿಸಿ ಮತ್ತೊಂದು ಚಿತ್ರ 'ಜಿಂಕೆಮರಿ' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಇನ್ನೊಂದು ಹೊಸ ಚಿತ್ರ ಯೋಗಿಯ ಕೈಸೇರಿದೆ. ಸೇನ್ ಪ್ರಕಾಶ್ ನಿರ್ದೇಶನದ ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ಯೋಗೇಶ್ ನಾಯಕ. ನಾಯಕಿ ಹಾಗೂ ಮಿಕ್ಕ ತಾರಾಗಣದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

  ಈ ಚಿತ್ರದ ನಿರ್ಮಾಪಕರು ಆನಂದ್. ಒಂದಷ್ಟು ಕಥೆ ಕೇಳಿದ ಆನಂದ್ ಅವರಿಗೆ ಒಂದು ಕಥೆ ಇಷ್ಟವಾಗಿದೆ. ಅದಕ್ಕೆ ನಾಯಕರಾಗಿ ಯೋಗಿಯೇ ಸೂಕ್ತ ಎನಿಸಿ ಯೋಗಿಗೆ ಕಥೆ ಹೇಳಿದಾಗ ಅದಕ್ಕೆ ತಕ್ಷಣ ಒಪ್ಪಿದ್ದಾರೆ ಯೋಗಿ. ಇನ್ನೇಕೆ ತಡ ಎಂದು ಚಿತ್ರದ ಉಳಿದ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಚಿತ್ರತಂಡ.

  ಬೆಂಗಳೂರು ಹಾಗೂ ನಾರ್ತ್ ಇಂಡಿಯಾದಲ್ಲಿ ಚಿತ್ರೀಕರಣ ನಡೆಸಬೇಕೆಂದು ನಿರ್ಧರಿಸಲಾಗಿದ್ದು ಅಭಿಮಾನ್ ಐದು ಹಾಡುಗಳಿಗೆ ಸಂಗೀತ ನೀಡಲಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣ ಚಿತ್ರಕ್ಕಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಮೇ ಕೊನೆಯ ವಾರದಲ್ಲಿ ಮುಹೂರ್ತ ನಡೆಯಲಿದೆ. ಇವಿಷ್ಟೂ ಚಿತ್ರತಂಡದಿಂದ ಬಂದ ಮಾಹಿತಿ. (ಒನ್ ಇಂಡಿಯಾ ಕನ್ನಡ)

  English summary
  Actor Loose Mada Yogesh acts in a new movie which is to direct by Sen Prakash. It Launches in end of May 2012.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X