For Quick Alerts
  ALLOW NOTIFICATIONS  
  For Daily Alerts

  ಭಾವನಾ, ಆದಿ ಲೋಕೇಶ್ 'ಕಾಂಗ್ರೆಸ್'ಗೆ ಸೇರ್ಪಡೆ

  |

  ನಟಿ ಭಾವನಾ ಮತ್ತು ನಟ ಆದಿ ಲೋಕೇಶ್ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಚಿಕ್ಕಮಗಳೂರು-ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಸಮ್ಮುಖದಲ್ಲಿ ಈ ಇಬ್ಬರು ಕಲಾವಿದರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

  'ಚಂದ್ರಮುಖಿ ಪ್ರಾಣಸಖಿ' ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನಾರ್ಹ ಛಾಪನ್ನು ಮೂಡಿಸಿದ್ದ ನಟಿ ಭಾವನಾ, ಇತ್ತೀಚಿಗೆ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿರುವ ದರ್ಶನ್ ಚಿತ್ರ 'ಚಿಂಗಾರಿ'ಯಲ್ಲೂ ನಟಿಸಿದ್ದಾರೆ. ಜೋಗಿ ಚಿತ್ರದಲ್ಲಿ 'ಬಿಡ್ಡ' ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಆದಿ ಲೋಕೇಶ್ ಕನ್ನಡದ ಬಹಳಷ್ಟು ಚಿತ್ರಗಳಲ್ಲಿ ವಿಲನ್ ರೋಲ್ ಪೋಷಿಸಿದ್ದಾರೆ. ಇದೀಗ ಈ ಇಬ್ಬರೂ ನಟಿ, ನಟರು ಕಾಂಗ್ರೆಸ್ ಸೇರಿಕೊಂಡು ಈ ಮೊದಲು ರಾಜಿಕೀಯ ಪಕ್ಷ ಸೇರಿಕೊಂಡ ಸಿನಿಮಾತಾರೆಗಳ ಲಿಸ್ಟ್ ಸೇರಿದಂತಾಗಿದೆ.

  ಇತ್ತೀಚಿಗಷ್ಟೇ ನಟಿ ರಕ್ಷಿತಾ ಶ್ರೀರಾಮುಲು ಬಿಎಸ್ ಆರ್ ಸೇರಿಕೊಂಡಿದ್ದಾರೆ. ಅದಕ್ಕೂ ಮೊದಲು, ನಟಿಯರಾದ ಮಾಳವಿಕಾ ಹಾಗೂ ಪೂಜಾ ಗಾಂಧಿ ಜೆಡಿಎಸ್ ಸೇರಿಕೊಂಡಿದ್ದಾರೆ. ಇನ್ನು ನಟಿ ಉಮಾಶ್ರೀ ಕಾಂಗ್ರೆಸ್‌ನಲ್ಲಿ ಭದ್ರವಾಗಿದ್ದರೆ. ನಟಿ ಶ್ರುತಿ ಕೂಡ ಬಿಜೆಪಿ ತೆಕ್ಕೆಯಲ್ಲಿ ಇದ್ದಾರೆ. ಚುನಾವಣೆ ಹತ್ತಿರ ಬಂದಾಗ ಇನ್ನೂ ಅದೆಷ್ಟು ತಾರಾಮಣಿಗಳು ರಾಜಕೀಯ ಪಕ್ಷದತ್ತ ಮುಖಮಾಡುತ್ತಾರೋ ಏನೋ! (ಒನ್ ಇಂಡಿಯಾ ಕನ್ನಡ)

  English summary
  Actress Bhavana and Actor Adi Lokesh has joined Congress Party. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X