For Quick Alerts
  ALLOW NOTIFICATIONS  
  For Daily Alerts

  ಸುನಾಮಿ ಅಪಾಯದಿಂದ ಅಣ್ಣಾಬಾಂಡ್ ಬಚಾವ್

  By Rajendra
  |

  ಸುನಾಮಿ ಅಪಾಯದಿಂದ 'ಅಣ್ಣಾಬಾಂಡ್' ಚಿತ್ರತಂಡ ಸ್ವಲ್ಪದಲ್ಲಿ ಪಾರಾಗಿ ಹಿಂತಿರುಗಿದೆ. 'ಅಣ್ಣಾಬಾಂಡ್' ಚಿತ್ರದ ಹಾಡೊಂದನ್ನು ಚಿತ್ರೀಕರಿಸಿಕೊಳ್ಳಲು ಮಲೇಷಿಯಾಗೆ ಚಿತ್ರತಂಡ ಭೇಟಿ ನೀಡಿತ್ತು. ಆದರೆ ಅದೃಷ್ಟವಶಾತ್ ಅವರು ಸುನಾಮಿಯಿಂದ ಬಚಾವಾಗಿ ಬಂದಿದ್ದಾರೆ.

  ಅವರು ಚಿತ್ರೀಕರಣ ಮುಗಿಸಿಕೊಂಡು ಸ್ವದೇಶಕ್ಕೆ ಹಿಂತಿರುಗಿದ ಬಳಿಕ ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಮಲೇಷಿಯಾ ಸೇರಿದಂತೆ 28 ರಾಷ್ಟ್ರಗಳಲ್ಲಿ ಸುನಾಮಿ ಅಪಾಯದ ಬಗೆಗೂ ಎಚ್ಚರಿಕೆ ನೀಡಲಾಗಿತ್ತು (ಬಳಿಕ ಅದನ್ನು ಹಿಂತೆಗೆದುಕೊಳ್ಳಲಾಗಿತ್ತು). ಒಂದೆರಡು ದಿನ 'ಅಣ್ಣಾಬಾಂಡ್' ಚಿತ್ರತಂಡ ಹಿಂತಿರುವುದು ತಡವಾಗಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು.

  ಯೋಗರಾಜ್ ಭಟ್ ಬರೆದಿರುವ "ಭೋಣಿ ಆಗದ ಹೃದಯ..." ಎಂಬ ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ಮಲೇಷಿಯಾಗೆ ಹಾರಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಪ್ರಿಯಾಮಣಿ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯ ಈ ಚಿತ್ರಕ್ಕೆ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Power Star Puneeth Rajkumar and Priyamani lead Kannada movie Anna Bond crew members escaped from tsunami scare in Malaysia. The unit is catching up Wednesday evening flight to return from Malaysia to Bangalore. A tsunami alert was sounded in 28 countries after a massive earthquake rocked Indonesia on Wednesday. The alert was later called off.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X