For Quick Alerts
  ALLOW NOTIFICATIONS  
  For Daily Alerts

  ಕಿಟ್ಟಿ ಜೊತೆ ಐಂದ್ರಿತಾ ಜೋಡಿ, ಜಯತೀರ್ಥ ಸವಾರಿ

  |

  ಒಲವೇ ಮಂದಾರ ಚಿತ್ರದ ನಿರ್ದೇಶಕ ಜಯತೀರ್ಥ ಹೊಸ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಒಲವೇ ಮಂದಾರ ಚಿತ್ರ ಗಳಿಕೆಯಲ್ಲಿ ಸೋತರೂ ನಿರ್ದೇಶಕನಾಗಿ ಜಯತೀರ್ಥ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಹೆಸರು ತಂದುಕೊಟ್ಟಿದೆ. ಅವರಿಗೆ ನಿರ್ದೇಶಕನ ಸೆನ್ಸ್ ಇದೆ, ಮುಂದೆ ಭವಿಷ್ಯವಿದೆ ಎಂದೇ ವಿಮರ್ಶಕರಾದಿಯಾಗಿ ಎಲ್ಲರೂ ಅಭಿಪ್ರಾಯಪಟ್ಟಿದ್ದರು.

  ಅವರೀಗ ಹೊಸದೊಂದು ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆ ಚಿತ್ರಕ್ಕೆ ನಾಯಕರಾಗಿ ಶ್ರೀನಗರ ಕಿಟ್ಟಿ ಹಾಗೂ ನಾಯಕಿಯಾಗಿ
  ಐಂದ್ರಿತಾ ರೇ ಆಯ್ಕೆಯಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಜೊತೆ ನಡೆದ ವಿವಾದದ ನಂತರ ಐಂದ್ರಿತಾ ರೇ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರಲಿಲ್ಲ. ಅವರಿಗೆ ಇನ್ನು ಅವಕಾಶ ಮರೀಚಿಕೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಟೀಕಾಕಾರರು ಬಾಯಿಮುಚ್ಚುವಂತೆ ಅವಕಾಶ ಪಡೆಯುತ್ತಿದ್ದಾರೆ ಐಂದ್ರಿತಾ.

  ಚಿತ್ರದ ಸ್ಕ್ರಿಪ್ಟ್ ಕೆಲಸ ಅಂತಿಮ ಹಂತಕ್ಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಮುಹೂರ್ತವೂ ನಡೆಯಲಿದೆ. ಚಿತ್ರದ ಹೆಸರು 'ಟೋನಿ - ಏಕ್ ದಿನ್ ಕಾ ಸುಲ್ತಾನ್'. ಟೋನಿ ನಾಯಕನಾಗಿ ಶ್ರೀನಗರ ಕಿಟ್ಟಿ ಹಾಗೂ ಅವರಿಗೆ ಐಂದ್ರಿತಾ ರೇ ನಾಯಕಿ ಎಂಬ ಸುದ್ದಿ ಹರಡಿದ್ದರೂ ನಿರ್ದೇಶಕ ಜಯತೀರ್ಥ ಈ ಸುದ್ದಿಯನ್ನು ಖಚಿತಪಡಿಸದೇ ಕಾದುನೋಡಿ ಎಂದಷ್ಟೇ ಹೇಳಿದ್ದಾರೆ. ಮುಂದೇನಾಗುತ್ತದೆ ಎಂದು ಕಾದು ನೋಡಿ... (ಒನ್ ಇಂಡಿಯಾ ಕನ್ನಡ)

  English summary
  Director Jayathirtha, Olave Mandara fame plans to direct new movie called Toni- Ek Din Ka Sultan. Srinagara Kitty and Aindrita Ray pair selected as Hero and Herione.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X