»   »  ಯಾರಿಗೋಸ್ಕರ ಈ ಪ್ರೀತಿ ಎನ್ನುತ್ತಿರುವ ರಘುವೀರ್

ಯಾರಿಗೋಸ್ಕರ ಈ ಪ್ರೀತಿ ಎನ್ನುತ್ತಿರುವ ರಘುವೀರ್

Subscribe to Filmibeat Kannada

ಬಹಳ ವರ್ಷಗಳ ನಂತರ ರಘುವೀರ್ ಮತ್ತೆ ಬಣ್ಣ ಹಚ್ಚಲಿರುವ 'ಯಾರಿಗೋಸ್ಕರ ಈ ಪ್ರೀತಿ' ಚಿತ್ರ ನಿರ್ಮಾಣದ ಪ್ರಥಮ ಹಂತವಾಗಿ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಕಳೆದ ವಾರ ಅರುಣ್ ಸ್ಟುಡಿಯೋದಲ್ಲಿ ಪ್ರಾರಂಭವಾಯಿತು. ಚಿತ್ರದ ಸುಶ್ರಾವ್ಯವಾದ 7 ಹಾಡುಗಳಿಗೆ ನಟ ರಘುವೀರ್ ಪ್ರಥಮ ಬಾರಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಶ್ರೀ ಲಕ್ಷ್ಮಿ ಆರ್ಟ್ ಫಿಲಂಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಸ್.ರಾಜಾ ಅವರು ನಿರ್ದೇಶಿಸುತ್ತಿದ್ದು, ಚೈತ್ರದ ಪ್ರೇಮಾಂಜಲಿಗೆ ಕೆಲಸ ಮಾಡಿದ ಪಿ.ಕೆ.ಹೆಚ್. ದಾಸ್ ಅವರು ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಲಿದ್ದಾರೆ. ಈ ಚಿತ್ರದ ಹಾಡುಗಳಿಗೆ ಕೋಲಾರ ಮಂಜುನಾಥ್ ಅವರ ಸಾಹಿತ್ಯವಿದ್ದು, ನವಿರಾದ ಪ್ರೀತಿ-ಪ್ರೇಮದ ಕಥೆಯೊಂದನ್ನು ಸಾಂಸಾರಿಕ ಸಂಬಂಧ-ಅನುಬಂಧಗಳ ಜೊತೆಗೆ ಹೆಣೆಯಲಾಗಿದ್ದು, ಒಂದೇ ಹಂತದಲ್ಲಿ ಬೆಂಗಳೂರು ಹಾಗೂ ರಾಜ್ಯದ ಪ್ರಮುಖ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಶ್ರವಣನ್ ಅವರ ಕಥೆ, ಆನಂದ್ ಅವರ ಸಂಭಾಷಣೆ, ಟೈಗರ್ ಮಧು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ರಘುವೀರ್ ಜೋಡಿಯಾಗಿ ಹೊಸ ಪ್ರತಿಭೆ ಶಿಲ್ಪಾ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಾಮಕೃಷ್ಣ, ವಿಜಯಕಾಶಿ, ಶ್ರೀಲಲಿತಾ, ಅಶೋಕ್ ರಾವ್, ಕಿಲ್ಲರ್ ವೆಂಕಟೇಶ್, ಬುಲೆಟ್ ಪ್ರಕಾಶ್ ಪ್ರಮುಖ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಧ್ವನಿಸುರುಳಿಯಾಗಿ ರಜನಿಕಾಂತ್ ಕನ್ನಡ ಕೃತಿ!
ಶಿಶಿರಕ್ಕೆ ತೆಲುಗಿನ ಅರುಂಧತಿ ತಾಂತ್ರಿಕ ವರ್ಗ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada