For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಿರ್ದೇಶಕನ ಚಿತ್ರದಲ್ಲಿ ದಿಗಂತ್-ಕೃತಿ

  |

  ಬಾಲಿವುಡ್ ಹಿರಿಯ ನಿರ್ದೇಶಕರಾದ ರಾಜ್ ಕುಮಾರ್ ಸಂತೋಷಿಯವರ ಹಲವು ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ರಣದೀಪ್, ಇದೀಗ ಕನ್ನಡದಲ್ಲಿ 'ದಿಗಂತ್'ಗಾಗಿ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಛಾಯಾಗ್ರಾಹಕ ಮಹೇಶ್ ತಲ್ಕಾಡ್ ತಮ್ಮ ಮುಂಬೈ ಸ್ನೇಹಿತರ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಚಿತ್ರದ ಹೆಸರು, 'ಮಿಂಚಾಗಿ ನೀನು ಬರಲು'.

  ಬಹಳ ದಿನಗಳಿಂದಲೂ ನಟ ದಿಗಂತ್, ಮಹೇಶ್ ತಲ್ಕಾಡ್ ಚಿತ್ರದಲ್ಲಿ ನಟಿಸುತ್ತಾರೆಂಬ ಸುದ್ದಿ ಗಾಂಧಿನಗರದ ಸುತ್ತ ಗಿರಕಿ ಹೊಡೆಯುತ್ತಲೇ ಇತ್ತು. ಅದೀಗ ನಿಜವಾಗಿದೆ. ಸದ್ದಿಲ್ಲದೇ ಚಿತ್ರ ಪ್ರಾರಂಭವಾಗಿ 10 ದಿನಗಳ ಶೂಟಿಂಗ್ ಸಹ ಮುಗಿಸಿದೆ. ಆದರೂ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ ಎಂಬುದು ಚಿತ್ರತಂಡದ ಹೇಳಿಕೆ. ಇರಬಹುದೇನೋ...!

  ಸ್ಟ್ರಾಬೆರಿ ಎಂಟರ್ ಟೈನ್ ಮೆಂಟ್ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾಗುತ್ತಿದ್ದು ನಿರ್ದೇಶಕ ರಣದೀಪ್ ಈ ಚಿತ್ರದ ನಿರ್ಮಾಪಕರಲ್ಲೊಬ್ಬರೂ ಆಗಿದ್ದಾರೆ. ದಿಗಂತ್ ಜೊತೆ ನಾಯಕಿಯಾಗಿ ಕೃತಿ ಖರಬಂಧ ನಟಿಸುತ್ತಿದ್ದಾರೆ. ದಿಲೀಪ್ ರಾಜ್ ಕೂಡ ಪ್ರಮುಖ ಪಾತ್ರವೊಂದನ್ನು ಪೋಷಿಸುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ, ಮಹೇಶ್ ತಲ್ಕಾಡ್ ಛಾಯಾಗ್ರಹಣ ಚಿತ್ರಕ್ಕಿದೆ. ಇದೊಂದು ಸಸ್ಪೆನ್ಸ್ ಲವ್ ಸ್ಟೋರಿ ಎಂದಿದೆ ಚಿತ್ರತಂಡ. (ಒನ್ ಇಂಡಿಯಾ ಕನ್ನಡ)

  English summary
  Kannada Actor Diganth acts in Bollywood director Randeep movie called 'Minchagi Neenu Baralu'. Cinematographer Talkad Mahesh produces this movie. Already shooting started. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X