For Quick Alerts
  ALLOW NOTIFICATIONS  
  For Daily Alerts

  ಬಾಸ್ ಜೊತೆ ಬಿಗ್ ಫೈಟ್ ತಪ್ಪಿಸಿದ ಕಂಠೀರವ

  By Rajendra
  |

  ದರ್ಶನ್ ತೂಗುದೀಪ, ನವ್ಯ ನಾಯರ್ ಮತ್ತು ಶಿವಾಜಿ ಪ್ರಭು ಪ್ರಮುಖ ತಾರಾಗಣದಲ್ಲಿರುವ ಬಹು ನಿರೀಕ್ಷಿತ 'ಬಾಸ್' ಚಿತ್ರ ರಾಜ್ಯದಾದ್ಯಂತ ಶುಕ್ರವಾರ (ಜ.14) ತೆರೆಕಾಣುತ್ತಿದೆ. ಒಂದಿಲ್ಲೊಂದು ಕಾರಣದಿಂದ ಮುಂದೂಡಲ್ಪಡುತ್ತಿದ್ದ ಈ ಚಿತ್ರ ಅಂತೂ ಇಂತೂ ನಾಳೆಯಿಂದ ಪ್ರೇಕ್ಷಕರಿಗೆ ದರ್ಶನ ಭಾಗ್ಯ ನೀಡಲಿದೆ.

  ಇನ್ನೊಂದು ಬಹುಕೋಟಿ ವೆಚ್ಚದ ದುನಿಯಾ ವಿಜಯ್ ಅಭಿನಯದ 'ಕಂಠೀರವ' ಚಿತ್ರ ಕೂಡ ನಾಳೆ ಬಿಡುಗಡೆಯಾಗ ಬೇಕಿತ್ತು. ಆದರೆ ಚಿತ್ರದ ಬಹುಕೋಟಿ ನಿರ್ಮಾಪಕ ರಾಮು ಒಂದು ವಾರ ನಂತರ ಚಿತ್ರ ಬಿಡುಗಡೆಗೆ ಒಪ್ಪಿ ಕೊಂಡಿದ್ದಾರೆ. ಹಾಗಾಗಿ ನಾಳೆ ಸ್ಯಾಂಡಲ್ ವುಡ್ ನಲ್ಲಿ ಬಿಗ್ ಫೈಟ್ ಇಲ್ಲ.

  'ಬಾಸ್' ಚಿತ್ರದ ನಿರ್ಮಾಪಕ ರಮೇಶ್ ಯಾದವ್ ಮತ್ತು ವಿತರಕ ಎನ್ ಕುಮಾರ್ ಚಲನಚಿತ್ರವಾಣಿಜ್ಯ ಮಂಡಳಿ ಸಲಹಾ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಒಂದೇ ದಿನ ಎರಡು ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ಬೇಡವೆಂದು ಮನವಿ ಸಲ್ಲಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಮಂಡಳಿ ಸದಸ್ಯರು 'ಕಂಠೀರವ' ಚಿತ್ರದ ನಿರ್ಮಾಪಕ ರಾಮು ಅವರ ಜೊತೆ ಮಾತನಾಡಿ ಸಹಕರಿಸುವಂತೆ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮು ಜನವರಿ 21ರಂದು 'ಕಂಠೀರವ'ನನ್ನು ಬಿಡುಗಡೆಗೆ ಮಾಡಲು ಒಪ್ಪಿಕೊಂಡಿದ್ದಾರೆ.

  ಇನ್ನು ಬಾಸ್ ವಿಚಾರಕ್ಕೆ ಬರುವುದಾದರೆ, ಸುಮಾರು 110ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಇದಾಗಿದೆ. ಎ, ಬಿ ಸೆಂಟರ್ ಅನ್ನದೆ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಇತ್ತೀಚಿನ ಬಿಗ್ ಬಜೆಟ್ ಕನ್ನಡ ಚಿತ್ರಗಳು ಬಿಡುಗಡೆಗೊಳ್ಳುತ್ತಿರುವುದು ಕನ್ನಡ ಚಿತ್ರರಂಗ ಮತ್ತು ನಿರ್ಮಾಪಕರ ಮಟ್ಟಿಗೆ ಉತ್ತಮ ಬೆಳವಣಿಗೆ.

  ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ ಹೊರತಾಗಿ ಮೇನಕ, ಪ್ರಮೋದ್, ಆದರ್ಶ, ವೆಂಕಟೇಶ್ವರ, ನಂದಿನಿ, ಗೋವರ್ಧನ್, ಮೈಸೂರಿನಲ್ಲಿ ಅಪೇರ, ಪದ್ಮ, ತುಮಕೂರಿನ ಪ್ರಶಾಂತ್, ಮಂಡ್ಯ ಸಿದ್ದಾರ್ಥ್, ಹಾಸನ ಶ್ರೀಗುರು, ದಾವಣಗೆರೆ ಮೋತಿ, ಬಳ್ಳಾರಿಯ ನಟರಾಜ ಕಾಂಪ್ಲೆಕ್ಷ್, ಹುಬ್ಬಳ್ಳಿಯ ಶೃಂಗಾರ್, ಲಕ್ಷ್ಮಿ, ಧಾರವಾಡದ ಸಂಗಮ್, ಬೆಳಗಾಂನ ಚಿತ್ರಾ ಮುಂತಾದ ಚಿತ್ರಮಂದಿರಗಳಲ್ಲಿ ಜನವರಿ 14ರಂದು 'ಬಾಸ್' ಚಿತ್ರ ತೆರೆಕಾಣಲಿದೆ. [ಕಂಠೀರವ]

  English summary
  Challenging star Darshan, Navya Nair lead movie Boss releasing on 14th Jan. Duniya Vijay lead movie Kanteerava to release on 21st Jan instead of 14th Jan. This decision was taken in KFCC in front of Ramu (Kanteerava producer) and Ramesh Yadav (Boss producer). So the big fight between two movies canceled.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X