»   » 'ಟಿ20 ಆಫ್ಇಂಡಿಯನ್ ಸಿನಿಮಾ' ಸ್ಪರ್ಧೆ

'ಟಿ20 ಆಫ್ಇಂಡಿಯನ್ ಸಿನಿಮಾ' ಸ್ಪರ್ಧೆ

Subscribe to Filmibeat Kannada

ಭಾರತೀಯ ಚಿತ್ರರಂಗದ ಅತ್ಯುತ್ತಮ 20 ಚಿತ್ರಗಳನ್ನು ಜನರಿಂದ ಆಯ್ಕೆ ಮಾಡುವ 'ಟಿ20 ಆಫ್ ಇಂಡಿಯನ್ ಸಿನಿಮಾ" ಹೆಸರಿನ ವಿನೂತನ ಸ್ಪರ್ಧೆಯನ್ನು ಎಂಟರ್‌ಟೇನ್‌ಮೆಂಟ್ ಸೊಸೈಟಿ ಆಫ್ ಗೋವಾ ಸಂಸೆ ಆಯೋ ಜಿಸಿದೆ.

ಕನ್ನಡದ ಮೂರು ಚಿತ್ರಗಳು ಸೇರಿದಂತೆ ನಾನಾ ಭಾಷೆಯ ಒಟ್ಟು 100 ಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ 20 ಅತ್ಯುತ್ತಮ ಚಿತ್ರವನ್ನು ಅಂತಿಮಗೊಳಿಸಲು ನಿರ್ಧರಿಸಿದ್ದೇವೆ ಎಂದು ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಮನೋಜ್ ಶ್ರೀವಾತ್ಸವ್ ತಿಳಿಸಿದರು.

ಸಂಸ್ಥೆಯ ವೆಬ್‌ಸೈಟ್ ಮೂಲಕ ಸಾರ್ವಜನಿಕರು ಉತ್ತಮ ಚಿತ್ರಕ್ಕೆ ಮತ ಹಾಕಬಹುದಾಗಿದೆ. ಸ್ಪರ್ಧೆ ಆರಂಭವಾಗಿದ್ದು, ನ.29 ರವರೆಗೆ ನಾಗರಿಕರಿಗೆ ಮತಹಾಕುವ ಅವಕಾಶ ಇದೆ. ನ.30 ರಂದು ಗೋವಾ ದಲ್ಲಿ ನಡೆಯುವ 40ನೇ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಅಂತಿಮ ಆಯ್ಕೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಇದೇ ಸಮಾರಂಭದಲ್ಲಿ ಕನ್ನಡದ ನಿರ್ದೇಶಕ ಪಿ. ಶೇಷಾದ್ರಿ ಸೇರಿದಂತೆ ಒಟ್ಟು 10 ಯುವ ನಿರ್ದೇಶಕರಿಗೆ ಹಾಗೂ ಚಿತ್ರ ವಿಮರ್ಶಕ ಎಂ.ಕೆ.ರಾಘವೇಂದ್ರ ಸೇರಿದಂತೆ ನಾನಾ ಭಾಷೆಯ 10 ಯುವ ವಿಮರ್ಶಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ,ನಟಿ ತಾರಾ, ನಿರ್ದೇಶಕರಾದ ಟಿ.ಎಸ್.ನಾಗಾಭರಣ, ನಿರ್ಮಾಪಕಸಾ.ರಾ. ಗೋವಿಂದು ಮತ್ತಿತರರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada