»   »  ಕಿರುತೆರೆ ನಟಿ ಲಕ್ಷ್ಮಿಯ ಬೆಳ್ಳಿತೆರೆ ಪಯಣ

ಕಿರುತೆರೆ ನಟಿ ಲಕ್ಷ್ಮಿಯ ಬೆಳ್ಳಿತೆರೆ ಪಯಣ

Subscribe to Filmibeat Kannada
TV actress Lakshmi
'ಸಿಹಿ ಮುತ್ತು' ಎಂಬ ಚಿತ್ರದ ಮೂಲಕ ಕಿರುತೆರೆ ನಟಿ ಲಕ್ಷ್ಮಿ ಬೆಳ್ಳಿತೆರೆಗೆ ಈಗಾಗಲೇ ಪಾದಾರ್ಪಣೆ ಮಾಡಿಯಾಗಿದೆ. ನಂದ ಗೋಕುಲ, ಮಾಂಗಲ್ಯ ಮತ್ತು ಬಿದಿಗೆ ಚಂದ್ರಮ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದರು.

ಕಿರುತೆರೆ ಮತ್ತು ಚಿತ್ರರಂಗದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿನಿಮಾಗಳಿಗಿಂತಲೂ ಟಿವಿಗಳಲ್ಲಿ ಕೆಲಸದ ಸಮಯ ಹೆಚ್ಚು. ಹಾಗೆಯೇ ಕಿರುತೆರೆಯಲ್ಲಿ ಸಂಭಾವನೆ ಸಹ ಹೇಳಿಕೊಳ್ಳುವಂತಿಲ್ಲ ಎನ್ನ್ನುತ್ತಾರೆ. ತಾನು ಪಾಶ್ಚಿಮಾತ್ಯ ಉಡುಪುಗಳಿಗೆ ವಿರೋಧ ಎನ್ನುವ ಲಕ್ಷ್ಮಿ, ತುಂಡು ಬಟ್ಟೆಯ ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವುದಿಲ್ಲವಂತೆ.

ಪ್ರೇಮ್ ಮತ್ತು ಧ್ಯಾನ್ ಅವರಿಗೆ ಜೊತೆಯಾಗಿ ಲಕ್ಷ್ಮಿ ಅವರು 'ಸಿಹಿ ಮುತ್ತು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸರಿಸುಮಾರು ಒಂದು ವರ್ಷದ ಹಿಂದೆಯೇ ಈ ಚಿತ್ರ ಸೆಟ್ಟ್ಟೇರಿತ್ತು. ಆದರೆ ಇನ್ನೂ ತೆರೆಕಾಣುವ ಭಾಗ್ಯ ಚಿತ್ರಕ್ಕೆ ಲಭಿಸಿಲ್ಲ. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶನ ಅಶೋಕ್ ಕಶ್ಯಪ್, ಹರಿಕೃಷ್ಣ ಸಂಗೀತ, ಉದಯರವಿ ಹೆಗಡೆ ಅವರ ಸಂಕಲನ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ನೆನಪಿರಲಿ ಪ್ರೇಮ್ ಜತೆ ಅಮೂಲ್ಯ 'ಪ್ರೇಮಿಸಮ್'
ಮರುಕಳುಹಿಸಿದ ಮಿನುಗು ತಾರೆ ಕಲ್ಪನಾ ನೆನಪು
ಸುದೀಪ್, ರಮ್ಯಾ ಜೋಡಿಯ ಕಿಚ್ಚ ಹುಚ್ಚ್ಚ ಆರಂಭ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada