Just In
Don't Miss!
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- Automobiles
ಒಂದೇ ದಿನದಲ್ಲಿ 100 ಯುನಿಟ್ ಮ್ಯಾಗ್ನೈಟ್ ಕಾರು ವಿತರಣೆ ಮಾಡಿದ ಬೆಂಗಳೂರಿನ ನಿಸ್ಸಾನ್ ಡೀಲರ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೆಲುಗು ಭಾಷೆಗೆ ರಿಯಲ್ ಸ್ಟಾರ್ ಉಪೇಂದ್ರ ಹಳೆ ಚಿತ್ರ ಡಬ್!
ಸೂಪರ್ ಸ್ಟಾರ್ ಉಪೇಂದ್ರ ಅವರಿಗೆ ಆಂಧ್ರದಲ್ಲಿ ತನ್ನದೇ ಆದಂತಹ ಪ್ರೇಕ್ಷಕ ವರ್ಗವಿದೆ. ನೆರೆಯ ಆಂಧ್ರದಲ್ಲಿ ಉಪೇಂದ್ರ ಚಿತ್ರಗಳಿಗೆ ಕೊಂಚ ಮಟ್ಟಿಗೆ ಡಿಮ್ಯಾಂಡು ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಐದು ವರ್ಷಗಳ ಹಿಂದೆ ತೆರೆಕಂಡಿದ್ದ ನಾನು ನಾನೇ ಚಿತ್ರ ಈಗ ತೆಲುಗಿಗೆ ಡಬ್ ಆಗಿದೆ. ಹೊಸ ಅಲೆ ಎಬ್ಬಿಸಿದ 'ಸೂಪರ್' ಚಿತ್ರದ ಬಳಿಕ ಉಪೇಂದ್ರ ಚಿತ್ರಗಳಿಗೆ ಜನ ಮುಗಿ ಬೀಳುವಂತಾಗಿದೆ.
ಅಂದಹಾಗೆ ನಾನು ನಾನೇ ಚಿತ್ರ ಏನೂ ಸ್ವಮೇಕ್ ಅಲ್ಲ. ಇದು ಹಿಂದಿಯ ಯಶಸ್ವಿ ಚಿತ್ರ 'ರಾಜಾ ಹಿಂದೂಸ್ತಾನಿ' ಚಿತ್ರದ ರೀಮೇಕ್. 1996ರಲ್ಲಿ ತೆರೆಕಂಡಿದ್ದ ಪ್ರೇಮ ಕಥಾನಕದ ಈ ಚಿತ್ರದಲ್ಲಿ ಅಮೀರ್ ಖಾನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ನಾನು ನಾನೇ ಚಿತ್ರಕ್ಕೆ ಡಿ ರಾಜೇಂದ್ರ ಬಾಬು ಆಕ್ಷನ್, ಕಟ್ ಹೇಳಿದ್ದರು.
ಈಗ ಇದೇ ಚಿತ್ರಕ್ಕೆ ಮುರಳಿ ಕೃಷ್ಣ ಅವರು ತೆಲುಗಿನಲ್ಲಿ ರಾಜಾಗಾಡಿ ಪೆಳ್ಳಾಂ ಎಂದು ಹೆಸರಿಟ್ಟಿದ್ದಾರೆ. ಉಪ್ಪಿಗೆ ಜತೆಯಾಗಿ ಸಾಕ್ಷಿ ಶಿವಾನಂದ್ ಅಭಿನಯಿಸಿರುವ ಚಿತ್ರದ ತಾರಾಬಳಗದಲ್ಲಿ ಅನಂತನಾಗ್ ಹಾಗೂ ರಮ್ಯಾ ಕೃಷ್ಣ ಇದ್ದಾರೆ. ಇತ್ತೀಚೆಗೆ ರಾಜಾಗಾಡಿ ಪೆಳ್ಳಾಂ ಚಿತ್ರದ ವಿಸಿಡಿಯನ್ನು ಬಿಡುಗಡೆ ಮಾಡಲಾಯಿತು.