ಪ್ರೇಕ್ಷಕರ ಮುಂದೆ ನಿನಗಾಗಿ ಕಾದಿರುವೆ
300 ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ನಿರ್ದೇಶಕನಾಗಿ ದುಡಿದಿರುವ ಜಾಲಿ ಬಾಸ್ಟಿನ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಕುತೂಹಲಭರಿತ ಪ್ರೇಮಕಥಾನಕ ಜಯ ಕ್ರಿಯೇಷನ್ಸ್‌ರವರ 'ನಿನಗಾಗಿ ಕಾದಿರುವೆ' ಈ ವಾರ(ಅ.16) ಬಿಡುಗಡೆಯಾಗುತ್ತಿದೆ.
ಉದ್ಯಮಿ ಬಿ.ವಿ. ಸತೀಶ್ ಬಾಬು ಹಾಗೂ ಜಾಲಿ ಬಾಸ್ಟಿನ್ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ನಟಿ ಪೂಜಾ ಗಾಂಧಿ ನಾಯಕಿಯಾಗಿ ಅಭಿನಯಿಸುವುದರೊಂದಿಗೆ ತಮ್ಮ ಪಾತ್ರಕ್ಕೆ ಮೊಟ್ಟ ಮೊದಲ ಬಾರಿಗೆ ಧ್ವನಿ ನೀಡಿದ್ದಾರೆ. ವಿಶಾಲ್ ಹೆಗ್ಗಡೆ ಹಾಗೂ ದಿಲೀಪ್‌ರಾಜ್ ಈ ಚಿತ್ರದ ನಾಯಕ ನಟರು.
ಸಂಭಾವನೆ ವಿಚಾರದಲ್ಲಿ ಈ ಹಿಂದೆ 'ನಿನಗಾಗಿ ಕಾದಿರುವೆ' ಚಿತ್ರ ವಿವಾದಲ್ಲಿ ಸಿಲುಕಿಕೊಂಡಿತ್ತು. ವಿವಾದದಿಂದ ಹೊರಬಂದಿರುವ ಈ ಚಿತ್ರ ಕಡೆಗೂ ಬಿಡುಗಡೆಯ ಮೋಕ್ಷ ಕಾಣುತ್ತಿದೆ. ಪಿ.ರಾಜನ್‌ರ ಛಾಯಾಗ್ರಹಣ, ರಾಬಿನ್ ಗುರಂಗ್‌ರ ಸಂಗೀತ ಸಂಯೋಜನೆ, ಹೊಸಮನೆ ಮೂರ್ತಿಯವರ ಕಲಾ ನಿರ್ದೇಶನ, ಮದನ್ ಹರಿಣಿಯವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
pooja gandhi ನಿನಗಾಗಿ ಕಾದಿರುವೆ ಪೂಜಾಗಾಂಧಿ ಜಾಲಿ ಬಾಸ್ಟಿನ್ ninagagi kadhiruve jolly bastin ಬಿ ವಿ ಸತೀಶ್ ಬಾಬು ವಿಶಾಲ್ ಹೆಗಡೆ bvsatish babu vishal hegde dilip raj ದಿಲೀಪ್ ರಾಜ್


Click it and Unblock the Notifications