»   » ನಟ, ನಿರ್ದೇಶಕ ಕಾಶಿನಾಥ್ ಹೊಸ ಅನುಭವ ಭಗ್ನ

ನಟ, ನಿರ್ದೇಶಕ ಕಾಶಿನಾಥ್ ಹೊಸ ಅನುಭವ ಭಗ್ನ

Posted By:
Subscribe to Filmibeat Kannada

ನಟ, ನಿರ್ದೇಶಕ ಕಾಶಿನಾಥ್ ಕನಸು ಮತ್ತೊಮ್ಮೆ ಭಗ್ನವಾಗಿದೆ. ಹೊಸ ಐಡಿಯಾಗಳೊಂದಿಗೆ ಅವರು ಕೈಗೆತ್ತಿಕೊಂಡಿದ್ದ '12 ಎಎಂ' ಚಿತ್ರ ಅರ್ಧಕ್ಕೆ ನಿಂತುಬಿಟ್ಟಿದೆ. ಈ ಚಿತ್ರ ರೀರೆಕಾರ್ಡಿಂಗ್ ಹಂತ ಬಿಟ್ಟು ಜಪ್ಪಯ್ಯ ಅಂದ್ರು ಮುಂದಕ್ಕೆ ಸಾಗುತ್ತಿಲ್ಲ. ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಜಯ್ ಕುಮಾರ್.

ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಜಯ್ ಕುಮಾರ್ ಅವರನ್ನು ಸಿನಿಮಾ ನಿರ್ಮಾಣಕ್ಕೆ ಕಾಶಿನಾಥ್ ಕರೆತಂದಿದ್ದರು. ಸದ್ಯಕ್ಕೆ ಜಯ್ ಕುಮಾರ್ ಹಣಕಾಸು ಸಮಸ್ಯೆಯಲ್ಲಿ ಸಿಲುಕಿಕೊಂಡಿರುವ ಕಾರಣ '12ಎಎಂ' ಚಿತ್ರ ಸಾಂಗ್ ರೆಕಾರ್ಡಿಂಗ್ ಹಂತದಲ್ಲೇ ನಿಂತುಬಿಟ್ಟಿದೆ.

ನಟನೆಗೆ ಗುಡ್ ಬೈ ಹೇಳಿದ್ದ ಕಾಶಿನಾಥ್ ನಿರ್ಮಾಣ, ನಿರ್ವಹಣೆಯ ಹೊಸ ಕನಸುಗಳನ್ನು ಹೊತ್ತಿದ್ದರು. ಕೇವಲ ನಟ, ನಿರ್ದೇಶಕನಿಗಷ್ಟೆ ತರಬೇತಿ ಕೊಟ್ಟರೆ ಸಾಲದು, ನಿರ್ಮಾಪಕನಿಗೂ ತರಬೇತಿ ಅವಶ್ಯಕ ಎಂಬ ಹೊಸ ಐಡಿಯಾವನ್ನು ಕಾಶಿನಾಥ್ ಪ್ರತಿಪಾದಿಸಿದ್ದರು. ಆರಂಭದಲ್ಲೇ ಕಾಶಿನಾಥ್ ಅವರಿಗೆ ಭ್ರಮನಿರಸನವಾದಂತಿದೆ.

English summary
Trend setter Kannada films director Kashinath new flick '12 AM' been stalled temporarily. The producer Jay Kumar, who is builder, indefinitely postponed the project. According to sources, the producer is stuck in some financial problem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada