»   » ಡಿಎಂಕೆ ಸೇರುವ ಒಲವು ತೋರಿದ ಖುಷ್ಬೂ

ಡಿಎಂಕೆ ಸೇರುವ ಒಲವು ತೋರಿದ ಖುಷ್ಬೂ

Posted By:
Subscribe to Filmibeat Kannada

ವಿವಾಹ ಪೂರ್ವ ಲೈಂಗಿಕತೆ ತಪ್ಪಲ್ಲ ಎಂದು ಹೇಳಿ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದ ಖ್ಯಾತ ತಾರೆ ಖುಷ್ಬೂ, ಆನಂತರ ಸುಪ್ರೀಂಕೋರ್ಟ್ ನಲ್ಲಿ ತಮ್ಮ ಪರ ತೀರ್ಪು ಸಿಕ್ಕಿದ್ದಕ್ಕೆ ಖುಷಿಗೊಂಡಿದ್ದರು. ರಾಜಕೀಯಕ್ಕೆ ಸೇರುವ ತಮ್ಮ ಬಹುದಿನಗಳ ಇಂಗಿತವನ್ನು ವ್ಯಕ್ತಪಡಿಸಿದ್ದರು ಕೂಡಾ. ಈಗ ಮೂಲಗಳ ಪ್ರಕಾರ ಖುಷ್ಬೂ ಅವರು ಆಡಳಿತಾರೂಢ ಡಿಎಂಕೆ ಪಕ್ಷ ಸೇರುವ ಸಾಧ್ಯತೆ ನಿಚ್ಚಳವಾಗಿದೆ.

ನಾನು ಕಾಂಗ್ರೆಸ್ ಅಭಿಮಾನಿ ಎಂದು ಘೋಷಿಸಿದ್ದ ಖುಷ್ಬೂ, ತಮ್ಮ ವಾಕ್ ಸ್ವಾತಂತ್ರ್ಯಕ್ಕೆ ಬೆಂಬಲ ವ್ಯಕ್ತಪಡಿಸುವ ಪಕ್ಷಕ್ಕೆ ಜೈ ಎನ್ನುವುದಾಗಿ ಹೇಳಿದ್ದರು. ಎಐಎಡಿಎಂಕೆ ಯ ಜಯಲಲಿತಾ ಆಪ್ತರಾಗಿ ಒಂದಷ್ಟು ವರ್ಷ ಸುತ್ತಾಟ ಮಾಡಿದರೂ, ಡಿಎಂಕೆ ಪರ ಒಲವು ತೋರಿದ್ದಾರೆ ಎನ್ನಲಾಗಿದೆ.

ರಿಯಲ್ ರಾಜಕೀಯಕ್ಕೆ ಕಾಲಿರಿಸಲು ರೆಡಿಯಾಗಿರುವ ಖುಷ್ಬೂ, ಮತ್ತೊಮ್ಮೆ ಬಾಲಿವುಡ್ ಚಿತ್ರರಂಗದತ್ತ ಮುಖಮಾಡಿದ್ದು, ಬಿಗ್ ಬಿ ಜೊತೆ ಮಾಡ್ ಡ್ಯಾಡ್ ಚಿತ್ರದಲ್ಲಿ ನಟಿಸಲಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಖುಷ್ಬು ಮನೆಮಾತಾಗಿರುವುದು ಸರ್ವವಿದಿತ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada