»   »  ಉಪ್ಪಿನಕಾಯಿ ಕಾರ್ಖಾನೆಯಲ್ಲಿ 'ಪೊಗರು'

ಉಪ್ಪಿನಕಾಯಿ ಕಾರ್ಖಾನೆಯಲ್ಲಿ 'ಪೊಗರು'

Subscribe to Filmibeat Kannada

ಯಾವುದೇ ವ್ಯಾಪಾರ ಆರಂಭಿಸಿದರೂ ಅದಕ್ಕೆ ಪ್ರಚಾರ ಅಗತ್ಯ. ಪ್ರಚಾರವಿಲ್ಲದೆ ಏನು ಆಗುವುದಿಲ್ಲ. 'ಪೊಗರು ಚಿತ್ರದಲ್ಲಿ ನಾಯಕ ದತ್ತರಾಜ್ ಉಪ್ಪಿನಕಾಯಿ ಕಾರ್ಖಾನೆಯ ಮಾಲೀಕ. ತನ್ನ ಕಾರ್ಖಾನೆಯ ಉತ್ಪನ್ನಗಳಿಗೆ ಉತ್ತಮ ಪ್ರಚಾರ ನೀಡಬೇಕೆಂಬ ಹಂಬಲ ಮಾಲೀಕನದು.

ಈ ವಿಷಯವನ್ನು ತಿಳಿದಿದ್ದ ನಾಯಕನ ಸ್ನೇಹಿತ ಭಾನುಪ್ರಕಾಶ್ ನಾಯಕಿ ಜಾಸ್ಮಿನ್‌ರಾವ್ ಅವರನ್ನು ದತ್ತರಾಜ್ ಅವರಿಗೆ ಪರಿಚಯಿಸಿ, 'ಈಕೆ ಪ್ರಸಿದ್ಧ ರೂಪದರ್ಶಿ ಇವರನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದರಿಂದ ನಿನಗೆ ಅನುಕೂಲವಾಗಬಹುದೆಂದು ಹೇಳುವ ಸನ್ನೀವೇಶವನ್ನು 'ಪೊಗರು ಚಿತ್ರಕ್ಕಾಗಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಉಪ್ಪಿನಕಾಯಿ ಕಾರ್ಖಾನೆಯಲ್ಲಿ ನಿರ್ದೇಶಕ ಎ.ಎನ್.ಜಯರಾಮಯ್ಯ ಚಿತ್ರೀಕರಿಸಿಕೊಂಡರು.

ಶ್ರೀವೀರಬ್ರಹ್ಮೇಂದ್ರ ಕೃಪಾಲಯ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಪೊಗರು ಚಿತ್ರಕ್ಕೆ ಎ.ಎನ್.ಜಯರಾಮಯ್ಯ ಚಿತ್ರಕತೆ, ಸಂಭಾಷಣೆ ಬರೆದು ನೀರ್ದೇಶಿಸುತ್ತಿದ್ದಾರೆ. ವಿ.ಚಾರಿ ಕಥೆ ಚಿತ್ರಕ್ಕೆ ಬರೆದಿದ್ದಾರೆ. ಶಂಕರ್ ಛಾಯಾಗ್ರಹಣ, ಸಾಯಿಗುರುನಾಥ್ ಸಂಗೀತ, ಶ್ರೀರಂಗ, ಗೊಟುರಿ ಹಾಗೂ ಎ.ವಿ.ಜಯರಾಮಯ್ಯ ಗೀತರಚನೆ, ಶ್ಯಾಂ ಸಂಕಲನ, ಸಿದ್ದರಾಜು, ಅಲ್ಟಿಮೆಟ್ ಶಿವು ಸಾಹಸ, ಪ್ರಸಾದ್ ನೃತ್ಯ ಹಾಗೂ ಚೆನ್ನಯ್ಯ ಅವರ ನಿರ್ಮಾಣ ನಿರ್ವಹಣೆಯಿದೆ.

ಚಿತ್ರದ ತಾರಾಬಳಗದಲ್ಲಿ ರಾಜೇಶ್, ದತ್ತರಾಜ್, ಅನಂತ್, ತನು, ಶೋಭಾಶಿವಲಿಂಗಯ್ಯ, ಡಿಂಗ್ರಿ ನಾಗರಾಜ್, ಚಂದ್ರಕಲಾ, ಶೈಲಶ್ರೀ, ರಮೇಶ್‌ಭಟ್, ಸ್ವಸ್ತಿಕ್ ಶಂಕರ್, ಜಾಸ್ಮಿನ್‌ರಾವ್, ಬಿ.ಕೆ.ಶಂಕರ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada