»   » ಹೊಸ ಫ್ಯಾಮಿಲಿ ಮೆಂಬರ್ ನಿರೀಕ್ಷೆಯಲ್ಲಿ ಬಚ್ಚನ್ ಕುಟುಂಬ

ಹೊಸ ಫ್ಯಾಮಿಲಿ ಮೆಂಬರ್ ನಿರೀಕ್ಷೆಯಲ್ಲಿ ಬಚ್ಚನ್ ಕುಟುಂಬ

Posted By:
Subscribe to Filmibeat Kannada

ತಾರೆ ಐಶ್ವರ್ಯ ರೈ ಬಚ್ಚನ್ ಹೆರಿಗೆಗೆ ಸಮಯ ಆಸನ್ನವಾಗಿದ್ದು ಅಮಿತಾಬ್ ಬಚ್ಚನ್ ಕುಟುಂಬ ವರ್ಗದಲ್ಲಿ ತಳಮಳ ಶುರುವಾಗಿದೆ. ಐಶ್ವರ್ಯ ರೈ ದಾಖಲಾಗಿರುವ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಬಚ್ಚನ್ ಕುಟುಂಬಕ್ಕೆ ಅಪೂರ್ವ ಕ್ಷಣಗಳ ನಿರೀಕ್ಷೆಯಲ್ಲಿದ್ದು, ಹೊಸ ಸದಸ್ಯನ ನಿರೀಕ್ಷೆಯಲ್ಲಿದೆ.

ವಿಶೇಷ ಎಂದರೆ ಡೆಲಿವರಿ ಸಮಯದ ಬಗ್ಗೆ ಬಚ್ಚನ್ ಕುಟುಂಬಕ್ಕೂ ಪಕ್ಕಾ ಮಾಹಿತಿ ಇಲ್ಲ. ಸೋಮವಾರ (ನ.14) ಆಸ್ಪತ್ರೆಗೆ ದಾಖಲಾಗಿರುವ ಐಶ್ವರ್ಯ ರೈ ನವೆಂಬರ್ 17ರಂದು ಕಂದನಿಗೆ ಜನ್ಮ ನೀಡಲಿದ್ದಾರೆ ಎಂಬುದು ಈಗಾಗಲೆ ಜಗಜ್ಜಾಹೀರಾಗಿದೆ. ಆದರೆ ಈ ಬಗ್ಗೆ ಐಶ್ವರ್ಯ ರೈ ವಕ್ತಾರರಾಗಲಿ ಬಚ್ಚನ್ ಕುಟುಂಬವಾಗಲಿ ಇದುವರೆಗೂ ಬಾಯ್ಬಿಟ್ಟಿಲ್ಲ.

"ಅಪೂರ್ವ ಕ್ಷಣಗಳ ನಿರೀಕ್ಷೆಯಲ್ಲಿದ್ದೇವೆ...ಎಲ್ಲವೂ ಭಗವಂತನ ಇಚ್ಛೆ...ಕಾಯುತ್ತಿದ್ದೇವೆ" ಎಂದು ಅಮಿತಾಬ್ ಟ್ವೀಟಿಸಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಒಟ್ಟಿನಲ್ಲಿ ಕೇವಲ ಬಚ್ಚನ್ ಕುಟುಂಬವಷ್ಟೇ ಅಲ್ಲ ಇಡೀ ದೇಶವೇ ಐಶ್ವರ್ಯ ರೈ ಕಂದನನ್ನು ನಿರೀಕ್ಷಿಸುತ್ತಿದೆ. (ಏಜೆನ್ಸೀಸ್)

English summary
Aishwarya Rai Bachchan apparently checked in to the Seven Hills Hospital in Marol, Mumbai early on Monday morning. However, even the Bachchan family is unaware as to when exactly Aishwarya will deliver.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada