»   »  ಕನ್ನಡದಲ್ಲಿ ಜೆ ಜೆ ಕೃಷ್ಣ ಅವರ ಮೆಗಾ ಚಿತ್ರ ಐತ್ತಲಕ್ಕಡಿ

ಕನ್ನಡದಲ್ಲಿ ಜೆ ಜೆ ಕೃಷ್ಣ ಅವರ ಮೆಗಾ ಚಿತ್ರ ಐತ್ತಲಕ್ಕಡಿ

Subscribe to Filmibeat Kannada

ಕನ್ನಡದಲ್ಲಿ ಮೆಗಾ ಚಿತ್ರವೊಂದು ಸೆಟ್ಟೇರಿದೆ. ಈ ಚಿತ್ರದಲ್ಲಿ ಬರೋಬ್ಬರಿ108 ಕಲಾವಿದರು ಅಭಿನಯಿಸುತ್ತಿರುವುದು ವಿಶೇಷ. 12 ಚಿತ್ರಗಳನ್ನು ನಿರ್ಮಿಸಿ 120ಕ್ಕೂ ಹೆಚ್ಚು ಚಿತ್ರಗಳಿಗೆ ಕ್ಯಾಮೆರಾ ಹಿಡಿದ ನಿರ್ಮಾಪಕ ಮತ್ತ್ತು ಛಾಯಾಗ್ರಾಹಕ ಜೆ ಜೆ ಕೃಷ್ಣ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ 'ಐತ್ತಲಕ್ಕಡಿ' ಎಂದು ಹೆಸರಿಡಲಾಗಿದೆ.

ಚಿತ್ರದ ಬಹುತಾರಾಗಣದಲ್ಲಿ ಕನ್ನಡದ ಖ್ಯಾತ ನಟರು ಇರುತ್ತಾರೆ ಎಂದು ಜೆ ಜೆ ಕೃಷ್ಣ ತಿಳಿಸಿದ್ದಾರೆ.ಆದರೆ ತಮ್ಮ ಚಿತ್ರದಲ್ಲಿ ನಟಿಸಲಿರುವ ಖ್ಯಾತ ನಾಮರ ಬಗ್ಗೆ ಅವರು ತುಟಿ ಬಿಚ್ಚಿಲ್ಲ. ಮೂಲಗಳ ಪ್ರಕಾರ ಚಿತ್ರದಲ್ಲಿ ಶಿವರಾಜ್ ಕುಮಾರ್, ದರ್ಶನ್, ವಿಜಯ್, ಪ್ರೇಮ್ ಮತ್ತು ಗಣೇಶ್ ನಟಿಸುವ ಸಾಧ್ಯತೆಗಳಿವೆ. ಇವರೆಲ್ಲಾ ಈ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಲಿದ್ದಾರೆ.

ಚಿತ್ರದಲ್ಲಿ ರಂಗಾಯಣ ರಘು, ನೀತೂ ಮತ್ತ್ತು ಬುಲ್ಲೆಟ್ ಪ್ರಕಾಶ್ ಪ್ರಮುಖ ಪಾತ್ರಧಾರಿಗಳು. ಕನ್ನಡ ಚಿತ್ರರಂಗಕ್ಕೆ ಕವಿದಿರುವ ಮಂಕನ್ನು 'ಐತ್ತಲಕ್ಕಡಿ' ಚಿತ್ರದ ಮೂಲಕ ಹೊಡೆದೋಡಿಸಬೇಕು ಎಂಬುದು ಜೆ ಜೆ ಕೃಷ್ಣ ಅವರ ದೃಢ ನಿಲುವು. ಐತ್ತಲಕ್ಕಡಿ ಎಂದರೆ ಪ್ರೇರೇಪಿಸುವುದು ಎಂದರ್ಥ. ಚಿತ್ರದಲ್ಲಿ ತಮ್ಮ ತಮ್ಮ ಗುರಿಯನ್ನು ಮುಟ್ಟಲು ಕೆಲವೊಂದು ಪಾತ್ರಗಳು ಪ್ರೇರೇಪಿಸುತ್ತವೆ ಎನ್ನುತ್ತಾರೆ ಕೃಷ್ಣ.

ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ನೀತೂ ಮಾತನಾಡುತ್ತಾ, ಇದರಲ್ಲಿ ನನ್ನದು ಹೂವಾಡಗಿತ್ತಿಯ ಪಾತ್ರ. ಕ್ರೇಜಿ ಸ್ಟಾರ್ ರವಿಚಂದ್ರನ್ ರ ಹಾಡುಗಳನ್ನು ಗುನುಗುತ್ತಾ ಬಣ್ಣಬಣ್ಣದ ಹೂಗಳನ್ನು ಮಾರುವುದು ನನ್ನ ಕಾಯಕ. ಚಿತ್ರದಲ್ಲಿ ನಾನು ರವಿಚಂದ್ರನ್ ಅವರ ದೊಡ್ಡ ಅಭಿಮಾನಿ. ಜೀವನದಲ್ಲಿ ಒಮ್ಮೆಯಾದರೂ ಅವರನ್ನು ಭೇಟಿಯಾಗಬೇಕು ಎಂಬುದು ನನ್ನ ಗುರಿಯಾಗಿರುತ್ತದೆ ಎನ್ನುತ್ತಾರೆ. ಒಟ್ಟಿನಲ್ಲಿ ಈ ಮೆಗಾ ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಉತ್ಸಾಹ ಮೂಡಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada